Taliban Fight: ಪಾಪಿ ಪಾಕಿಸ್ತಾನ ಸೈನಿಕರ ಪ್ಯಾಂಟ್ ಕಿತ್ತುಕೊಂಡು ಮೆರವಣಿಗೆ ಮಾಡಿದ ತಾಲಿಬಾನ್!
ತಾಲಿಬಾನ್ & ಪಾಕಿಸ್ತಾನ ನಡುವೆ ನಡೆಯುತ್ತಿರುವ ಜಗಳ ಜೋರಾಗುತ್ತಿದ್ದು, ಯಾವುದೇ ಸಮಯಕ್ಕೆ ಇಬ್ಬರ ನಡುವೆ ಘೋರವಾದ ಯುದ್ಧ ಮತ್ತೆ ಶುರುವಾಗುವ ಸಾಧ್ಯತೆ ಇದೆ. ಇದೀಗ ಶಾಂತಿ ಮಾತುಕತೆ ಆರಂಭ ಆಗಿದ್ದರೂ, ಅದು ವರ್ಕೌಟ್ ಆಗುತ್ತೆ ಅನ್ನೋ ನಂಬಿಕೆ ಕೂಡ ಇಲ್ಲ. ಇಂತಹ ಸಮಯದಲ್ಲಿ ದಿಢೀರ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಪಾಕಿಸ್ತಾನ ಸೇನೆ ಹೀನಾಯ ಪರಿಸ್ಥಿತಿಯನ್ನು ಬಿಂಬಿಸುತ್ತಿದೆ. ಹಾಗಾದ್ರೆ ಏನಿದೆ ಆ ವಿಡಿಯೋದಲ್ಲಿ? ಮುಂದೆ ಓದಿ.
ಪಾಕಿಸ್ತಾನದ ಯುದ್ಧ ಟ್ಯಾಂಕರ್‌ಗಳನ್ನ ತಾಲಿಬಾನ್ ಕಿತ್ತುಕೊಂಡು ಮೆರವಣಿಗೆ ಮಾಡಿದ್ದ ವಿಡಿಯೋ & ಫೋಟೋ ವೈರಲ್ ಆಗಿರುವ ಬೆನ್ನಲ್ಲೇ ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಹಳೆಯ ವಿಡಿಯೋದಲ್ಲಿ ತಾಲಿಬಾನ್ ಪಡೆಗಳು ನೇರವಾಗಿ ಪಾಕಿಸ್ತಾನದ ಟ್ಯಾಂಕರ್ ಕದ್ದು ಅದರ ಮೇಲೆಯೇ ಹತ್ತಿಕೊಂಡು ಹೋಗಿದ್ದವು. ಅಫ್ಘಾನಿಸ್ತಾನ ದಕ್ಷಿಣ ಪೂರ್ವ ಸ್ಪಿನ್ ಬೊಲ್ಡಕ್ ಪ್ರಾಂತ್ಯದ ಬೀದಿ ಬೀದಿಗಳಲ್ಲಿ ಈಗ ಪಾಕಿಸ್ತಾನದ ಯುದ್ಧ ಟ್ಯಾಂಕರ್ಸ್ ಓಡಾಡಿಸಿ ಮೆರವಣಿಗೆ ಮಾಡಿದ್ದರು ತಾಲಿಬಾನ್ ಸೈನಿಕರು. ಇದೀಗ ಪಾಕಿಸ್ತಾನ ಸೈನಿಕರ ಪ್ಯಾಂಟ್ ಬಿಚ್ಚಿ, ಅದನ್ನ ಕೋಲಿಗೆ ಕಟ್ಟಿ ಮೆರವಣಿಗೆ ಮಾಡಿದ್ದಾರೆ ತಾಲಿಬಾನ್ ಪಡೆಯ ಸೈನಿಕರು.

ಶಾಂತಿ ಮಾತುಕತೆ ಆರಂಭಿಸಿದ ಅಧಿಕಾರಿಗಳು
ದಿಢೀರ್ ತಾಲಿಬಾನ್ & ಪಾಕಿಸ್ತಾನ ನಡುವೆ ಯುದ್ಧ ಶುರುವಾದ ನಂತರ ಮಧ್ಯಪ್ರಾಚ್ಯ ಕೊತ ಕೊತನೆ ಕುದಿಯುತ್ತಿದೆ. ಹೀಗಾಗಿ ಪರಿಸ್ಥಿತಿ ತಣ್ಣಗೆ ಮಾಡಲು ಏನಾದರೂ ಒಂದು ಪ್ರಯತ್ನ ಮಾಡಬೇಕು ಎಂಬ ಆಶಯ ಮಧ್ಯಪ್ರಾಚ್ಯದ ದೇಶಗಳಲ್ಲಿ ಮನೆಮಾಡಿದೆ. ಇದೇ ಕಾರಣಕ್ಕೆ ಇದೀಗ ತಾಲಿಬಾನ್ & ಪಾಕಿಸ್ತಾನ ನಡುವೆ ಶಾಂತಿ ಮಾತುಕತೆ ಶುರು ಮಾಡಲಾಗಿದೆ. ಹಾಗೇ ಪರಿಸ್ಥಿತಿ ಸುಧಾರಿಸಲು ಬೇಕಾದ ಕ್ರಮಗಳ ಜಾರಿಗೆ ಕೂಡ ಬದ್ಧವಾಗಿ ಇರಲು ಮಧ್ಯಪ್ರಾಚ್ಯ ದೇಶಗಳು ನಿರ್ಧರಿಸಿವೆ.
ಪಾಪಿಗಳಿಗೆ ಸರಿಯಾದ ಪಾಠ...
ಒಟ್ನಲ್ಲಿ ಪಾಪಿ ಪಾಕಿಸ್ತಾನಕ್ಕೆ ಈಗ ತಾಲಿಬಾನ್ ಸರಿಯಾಗಿಯೇ ಪಾಠ ಕಲಿಸಿ, ಸ್ವಲ್ಪ ಸೈಲೆಂಟ್ ಆಗಿದೆ. ಅಫ್ಘಾನಿಸ್ತಾನ ರೊಚ್ಚಿಗೆದ್ದು ಪಾಪಿ ಪಾಕಿಸ್ತಾನದ ಹುಟ್ಟಡಗಿಸಲು ನಿರ್ಧಾರ ಮಾಡಿದೆ. ಪದೇ, ಪದೇ ತಮ್ಮ ತಂಟೆಗೆ ಬರುತ್ತಿರುವ ಪಾಕಿಸ್ತಾನ ಸೇನೆಗೆ ಸರಿಯಾಗಿ ಪಾಠ ಕಲಿಸಲು ಮುಂದೆ ನುಗ್ಗಿದೆ ತಾಲಿಬಾನ್ ಪಡೆ. ಈ ಮೂಲಕ ಪಾಕಿಸ್ತಾನ ಭೂಪಟದ ಮೇಲೆ ಇಲ್ಲದಂತೆ ನಾಶ ಮಾಡಲು ತಾಲಿಬಾನ್ ನಿರ್ಧಾರ ಮಾಡಿತ್ತು. ಆದರೆ ಸೌದಿ ಅರೇಬಿಯಾ ಸೇರಿದಂತೆ ಹಲವು ದೇಶಗಳು ಮಧ್ಯಪ್ರವೇಶ ಮಾಡಿದ ನಂತರ ಶಾಂತಿ ಒಪ್ಪಂದ ಮಾಡಿಕೊಂಡು ಎಲ್ಲವೂ ತಣ್ಣಗಾಗಿದೆ.












Click it and Unblock the Notifications