ಸಿಬ್ಬಂದಿಗೆ 4 ವರ್ಷಗಳ ಸಂಬಳ ಬೋನಸ್ ಆಗಿ ನೀಡುತ್ತಿದೆ ಹಗಡು ಸಂಸ್ಥೆ ಎವರ್‌ಗ್ರೀನ್!
ನವದೆಹಲಿ, ಜ. 09: ತೈವಾನ್‌ನ ಎವರ್‌ಗ್ರೀನ್ ಮರೈನ್ ಕಾರ್ಪೊರೇಷನ್ ತನ್ನ ಕೆಲವು ಸಿಬ್ಬಂದಿಗೆ ವರ್ಷಾಂತ್ಯದ ಬೋನಸ್‌ಗಳನ್ನು ನೀಡುತ್ತಿದ್ದು, ಭಾರಿ ಸುದ್ದಿಯಲ್ಲಿದೆ. ಏಕೆಂದರೇ ಇದು ನೀಡುತ್ತಿರೋದು ಬರೀ ಒಂದೆರಡು ತಿಂಗಳ ಸಂಬಳವನ್ನಲ್ಲ.. ಬದಲಿಗೆ ನಾಲ್ಕು ವರ್ಷಗಳ ಸಂಬಳವನ್ನು!
ಹೌದು, ತೈಪೆ ಮೂಲದ ಎವರ್‌ಗ್ರೀನ್ ಮರೈನ್ ಕಾರ್ಪೊರೇಷನ್ ಕಂಪನಿಯು ವರ್ಷಾಂತ್ಯದ ಬೋನಸ್‌ಗಳು 50 ತಿಂಗಳ ಸಂಬಳಕ್ಕೆ ಸಮನಾಗಿರುತ್ತದೆ. ಇದನ್ನು, ಸರಾಸರಿ ನಾಲ್ಕು ವರ್ಷಗಳ ವೇತನ ಎಂದು ಪರಿಗಣಿಸಬಹುದು ಎಂದು ಮಾಹಿತಿ ತಿಳಿದಿರುವ ಅಧಿಕೃತ ವ್ಯಕ್ತಿ ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಈ ಬೋನಸ್‌ನ ಗಾತ್ರವು ನೌಕರರ ಕೆಲಸದ ದರ್ಜೆ ಮತ್ತು ಕಾರ್ಯವನ್ನು ಅವಲಂಬಿಸಿ ಬದಲಾಗುತ್ತದೆ. ಜೊತೆಗೆ ತೈವಾನ್ ಆಧಾರಿತ ಒಪ್ಪಂದಗಳನ್ನು ಹೊಂದಿರುವ ಸಿಬ್ಬಂದಿಗೆ ಮಾತ್ರ ಹೊರಗಿನ ಬೋನಸ್‌ಗಳು ಅನ್ವಯಿಸುತ್ತವೆ. ಈ ವಿವರಗಳು ಖಾಸಗಿಯಾಗಿರುವುದರಿಂದ ತಮ್ಮ ಹೆಸರು ಉಲ್ಲೇಖಿಸದಂತೆ ಮಾಹಿತಿ ತಿಳಿಸಿದ ವ್ಯಕ್ತಿ ಮನವಿ ಮಾಡಿದ್ದಾರೆ.

ವರ್ಷಾಂತ್ಯದ ಬೋನಸ್‌ಗಳು ಯಾವಾಗಲೂ ಕಂಪನಿಯ ವರ್ಷದ ಕಾರ್ಯಕ್ಷಮತೆ ಮತ್ತು ಉದ್ಯೋಗಿಗಳ ವೈಯಕ್ತಿಕ ಕಾರ್ಯಕ್ಷಮತೆಯನ್ನು ಆಧರಿಸಿವೆ ಎಂದು ಎವರ್‌ಗ್ರೀನ್ ಮರೈನ್ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ಇದು ಹೇಗೆ ಎಂದು ವಿವರಿಸಲು ನಿರಾಕರಿಸಿದೆ.
ಎವರ್‌ಗ್ರೀನ್ ಕಂಪನಿಯ ಈ ಕ್ರಮವು ಕಳೆದ ಎರಡು ವರ್ಷಗಳಲ್ಲಿ ಕಂಪನಿ ಸಾಧಿಸಿರುವ ಅಭೂತಪೂರ್ವ ಸಾಧನೆಯ ಪರಿಣಾಮ ಎನ್ನಲಾಗಿದೆ. ಕಂಪನಿಯ 2022 ರ ಆದಾಯವು ದಾಖಲೆಯು 2020 ರ ಮಾರಾಟಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.
ಎವರ್‌ಗ್ರೀನ್ ಸಂಸ್ಥೆ ಮಾಲೀಕತ್ವದ ಹಡಗು 2021 ರ ಆರಂಭದಲ್ಲಿ ಸೂಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿತು. 6,813.07 ಕೋಟಿ ರೂಪಾತಿ ಪರಿಹಾರ ನೀಡುವಂತೆ ಸೂಯೆಜ್ ಕಾಲುವೆ ಪ್ರಾಧಿಕಾರ ಒತ್ತಾಯಿಸಿತ್ತು. ಬಳಿಕ ಈ ಮೊತ್ತವನ್ನು 4,127.89 ರೋಪಾಯಿಗೆ ಇಳಿಕೆ ಮಾಡಲಾಗಿತ್ತು.

ಇನ್ನು, ಕಂಪನಿಯು 52 ತಿಂಗಳ ಸಂಬಳದವರೆಗೆ ಬೋನಸ್‌ಗಳನ್ನು ನೀಡಿದೆ ಎಂದು ತೈಪೆಯ ಎಕನಾಮಿಕ್ ಡೈಲಿ ನ್ಯೂಸ್ ಕಳೆದ ವಾರ ವರದಿ ಮಾಡಿದೆ. ಕೆಲವು ಉದ್ಯೋಗಿಗಳು ಡಿಸೆಂಬರ್ 30 ರಂದು 65,000 ಡಾಲರ್‌ಗಿಂತ ಹೆಚ್ಚಿನ ಬೋನಸ್ ಸ್ವೀಕರಿಸಿದ್ದಾರೆ ಎಂದಿದೆ. ಹಾಗೇಯೇ ಎಲ್ಲಾ ಸಿಬ್ಬಂದಿಗೂ ಈ ಬೋನಸ್ ಅನ್ವಯವಾಗಿಲ್ಲ. ಶಾಂಘೈ ಮೂಲದ ಉದ್ಯೋಗಿಗಳು ತಮ್ಮ ಮಾಸಿಕ ಸಂಬಳದ ಐದರಿಂದ ಎಂಟು ಪಟ್ಟು ಬೋನಸ್‌ಗಳನ್ನು ಪಡೆದು, ಈ ಅನ್ಯಾಯದ ವರ್ತನೆಯ ಬಗ್ಗೆ ದೂರು ನೀಡಿದ್ದಾರೆ ಎಂದು ಸ್ಥಳೀಯ ಕಾರ್ಮಿಕರನ್ನು ಉಲ್ಲೇಖಿಸಿ ಕೈಕ್ಸಿನ್ ವರದಿ ಮಾಡಿದೆ.












Click it and Unblock the Notifications