ಯುದ್ಧಪೀಡಿತ 'ಸಿರಿಯಾ ಸಾಕ್ಷಿ' ಒಮ್ರಾನ್ ಸೋದರ ಸಾವು

Posted By:
Subscribe to Oneindia Kannada

ಅಲೆಪ್ಪೊ (ಸಿರಿಯಾ), ಆಗಸ್ಟ್ 22: ಯುದ್ಧಪೀಡಿತ ಸಿರಿಯಾದ ಅಲೆಪ್ಪೊದಲ್ಲಿ ವಾಯು ದಾಳಿಯಲ್ಲಿ ಗಾಯಗೊಂಡು ಬಚಾವಾದ ಬಾಲಕ ಒಮ್ರಾನ್ ನ 10 ವರ್ಷ ದ ಸೋದರ ಅಲಿ ಸಾವನ್ನಪ್ಪಿರುವ ಸುದ್ದಿ ಬಂದಿದೆ. ಆಘಾತಗೊಂಡ 5 ವರ್ಷದ ಬಾಲಕ ಒಮ್ರಾನ್ ಚಿತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು.

ಅಲೆಪ್ಪೊ ನಗರದಲ್ಲಿ ನಡೆದ ವಾಯು ದಾಳಿಯಲ್ಲಿ ಗಾಯಗೊಂಡ ಬಾಲಕ ಒಮ್ರಾನ್ ನನ್ನು ರಕ್ಷಿಸಿ ಕುರ್ಚಿಯಲ್ಲಿ ಕೂರಿಸಲಾಗುತ್ತದೆ. ಮನೆ ಮಂದಿಯನ್ನು ಕಳೆದುಕೊಂಡು ಆಘಾತ ಅನುಭವಿಸಿದ ಬಾಲಕನ ಬಗ್ಗೆ ವರದಿ ಮಾಡುತ್ತಾ ಸಿಎನ್ಎನ್ ಸುದ್ದಿವಾಚಕಿ ಕಣ್ಣೀರಿಟ್ಟಿದ್ದು ಕೂಡಾ ಟ್ರೆಂಡ್ ಆಗಿತ್ತು. [ಮೂರು ವರ್ಷದ ಹಸುಳೆ ಆಯ್ಲನ್ ಕುರ್ದಿ Rest In Peace]

Syria: Brother of Omran Ali Daqneesh died from his injuries

ಸಿರಿಯ ನಾಗರಿಕ ಯುದ್ಧದ ಚಿತ್ರಣವನ್ನು ಜಗತ್ತಿಗೆ ತಿಳಿಸಿದ ಒಮ್ರಾನ್ ಸುದ್ದಿಯನ್ನು ಅರಗಿಸಿಕೊಳ್ಳುವಷ್ಟರಲ್ಲೇ ಒಮ್ರಾನ್ ದಾಖ್‌ನೀಶ್ ನ 10 ವರ್ಷದ ಸೋದರ ಮೃತಪಟ್ಟಿರುವ ಸುದ್ದಿ ಬಂದಿದೆ.[ಪುಣೆಯ ಬಾಲಕಿ ಉಗ್ರ ಸಂಘಟನೆ ಸೇರಲು ಹೊರಟಿದ್ದಳೆ?]


'ವೈಟ್ ಹೆಲ್ಮೆಟ್ಸ್' ಎನ್ನುವ ಗುಂಪಿನ ಸದಸ್ಯರು ಒಮ್ರಾನ್ ನನ್ನು ರಕ್ಷಿಸಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರಿಂದ ಒಮ್ರಾನ್ ಬದುಕುಳಿದಿದ್ದಾನೆ, ಆದರೆ, ಇನ್ನೂ ಆಘಾತದಿಂದ ಚೇತರಿಸಿಕೊಂಡಿಲ್ಲ.

ಅಂದು ನಡೆದ ಬಾಂಬ್ ದಾಳಿಯಲ್ಲಿ ಅದೇ ಮೂವರು ಮೃತಪಟ್ಟು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ ಎಂಟು ಮಂದಿ ಗಾಯಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
0-year-old Ali Daqneesh, brother of Omran, has died from his injuries.Earlier this week the world was shocked by the images of five-year-old Omran in the aftermath of an airstrike on Aleppo. Earlier a news reader cried while reporting about bloodied Aleppo boy
Please Wait while comments are loading...