ಬೆಲಾರಸ್ ಲೇಖಕಿ ಸ್ವೆಟ್ಲಾನಾಗೆ ಸಾಹಿತ್ಯ ನೊಬೆಲ್

ಸ್ಟಾಕ್ ಹೋಂ, ಅಕ್ಟೋಬರ್, 09 : ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ರಷ್ಯಾ ಸಮೀಪದ ಬೆಲಾರಸ್ ನ ಲೇಖಕಿಯಾದ ಸ್ವೆಟ್ಲಾನಾ ಅಲೆಕ್ಸಿಯೆವಿಚ್ 2015ನೇ ಸಾಲಿನ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಮಕಾಲೀನ ಪ್ರಪಂಚದ ಯಾತನೆ, ದುಃಖ-ದುಮ್ಮಾನ ಹಾಗೂ ಧೈರ್ಯದ ಹಲವು ವಿಚಾರಗಳನ್ನು ವಿಭಿನ್ನ ಬರವಣಿಗೆಯಲ್ಲಿ ಕಟ್ಟಿಕೊಡುತ್ತಿದ್ದ ಸ್ವೆಟ್ಲಾನಾ ಅವರನ್ನು ಈ ವರ್ಷದ ಸಾಹಿತ್ಯ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸ್ವೀಡಿಷ್ ಅಕಾಡೆಮಿ ತಿಳಿಸಿದೆ.[ಭೌತ ವಿಜ್ಞಾನದ 2 ಸಂಶೋಧಕರಿಗೆ ನೊಬೆಲ್ ಪ್ರಶಸ್ತಿ]

Svetlana Alexievich, Belarussian Wins Nobel Prize in Literature

ಪತ್ರಕರ್ತೆಯಾಗಿ ಕಾರ್ಯ ನಿರ್ವಹಿಸಿದ ಸ್ವೆಟ್ಲಾನಾ ಉಕ್ರೇನ್ ನ ಚರ್ನೊಬಿಲ್ ಅಣು ದುರಂತ, ಎರಡನೇ ಮಹಾಯುದ್ಧದ ಅವಘಡ, ರಷ್ಯಾದ ಮಹಿಳಾ ಸೈನಿಕರ ಅಂಶಗಳನ್ನು ಬರಹಕ್ಕೆ ಇಳಿಸಿದ್ದಾರೆ.

ಸ್ವೆಟ್ಲಾನಾ ಬರವಣಿಗೆ ಜಗತ್ತಿನ ಮಾನ್ಯತೆ ಪಡೆದುಕೊಂಡಿದ್ದು ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ 14ನೇ ಮಹಿಳೆಯಾಗಿದ್ದಾರೆ. ಈ ಪ್ರಶಸ್ತಿ 6.18 ಕೋಟಿ ಮೌಲ್ಯದ ಮೊತ್ತವನ್ನು ಒಳಗೊಂಡಿದೆ.[ನೊಬೆಲ್ ಪ್ರಶಸ್ತಿ ಹಂಚಿಕೊಂಡ 3 ಸಂಶೋಧಕರು]

ಈಗಾಗಲೇ ವೈದ್ಯ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರದ ಸಾಧಕರನ್ನು ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಿ ಹೆಸರನ್ನು ಸೂಚಿಸಲಾಗಿದೆ. ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರನ್ನು ಅಕ್ಟೋಬರ್ 09ರ ಶುಕ್ರವಾರದಂದು ಘೋಷಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+