ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಶಂಕಿತ ಚೀನೀ ಪತ್ತೇದಾರಿ ಬಲೂನ್: ಆಂಟೋನಿ ಬ್ಲಿಂಕನ್ ಭೇಟಿ ರದ್ದು!

|
Google Oneindia Kannada News

ವಾಷಿಂಗ್ಟನ್ ಫೆಬ್ರವರಿ 4: ಚೀನಾದ ಅನುಮಾನಾಸ್ಪದ ಬಲೂನ್‌ವೊಂದು ಅಮೆರಿಕಾದಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಚೀನಾ ಭೇಟಿಯನ್ನು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಮುಂದೂಡಿದ್ದಾರೆ. ಶಂಕಿತ ಚೀನೀ ಪತ್ತೇದಾರಿ ಬಲೂನ್ ಅಮೆರಿಕದಾದ್ಯಂತ ಹಾರಾಡುತ್ತಿರುವುದನ್ನು ಪತ್ತೆಹಚ್ಚಲಾಗಿದೆ. ಇದನ್ನು ಅಮೆರಿಕದ ಸಾರ್ವಭೌಮತ್ವದ ಸ್ಪಷ್ಟ ಉಲ್ಲಂಘನೆ ಎಂದು ವಾಷಿಂಗ್ಟನ್ ಕರೆದಿದೆ. ಹೀಗಾಗಿ ಶುಕ್ರವಾರದಿಂದ ಪ್ರಾರಂಭವಾಗುವ ನಿರೀಕ್ಷೆಯಿದ್ದ ಚೀನಾ ಭೇಟಿಯನ್ನು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಮುಂದೂಡಿದ್ದಾರೆ.

ಮಹಾಪತನದತ್ತ ಪಾಕಿಸ್ತಾನ: ನೌಕರರ ವೇತನ, ಅಧಿಕಾರಿಗಳ ಉದ್ಯೋಗ ಕಡಿತಕ್ಕೆ ನಿರ್ಧಾರ- ಕೈಕೊಟ್ಟ ಚೀನಾ, ಇನ್ನೇನು ಕಾದಿದೆ ಮುಂದೆ?ಮಹಾಪತನದತ್ತ ಪಾಕಿಸ್ತಾನ: ನೌಕರರ ವೇತನ, ಅಧಿಕಾರಿಗಳ ಉದ್ಯೋಗ ಕಡಿತಕ್ಕೆ ನಿರ್ಧಾರ- ಕೈಕೊಟ್ಟ ಚೀನಾ, ಇನ್ನೇನು ಕಾದಿದೆ ಮುಂದೆ?

ಮಾತ್ರವಲ್ಲದೆ ಲ್ಯಾಟಿನ್ ಅಮೆರಿಕದ ಮೇಲೆ ಚೀನಾದ ಮತ್ತೊಂದು ಬಲೂನ್ ಅನ್ನು ಗಮನಿಸಲಾಗಿದೆ ಎಂದು ಪೆಂಟಗನ್ (ಅಮೆರಿಕಾದ ರಕ್ಷಣಾ ಸಚಿವಾಲಯ) ಶುಕ್ರವಾರ ಹೇಳಿದೆ. ನಿಖರವಾಗಿ ಎಲ್ಲಿ ಎಂದು ಅದು ಹೇಳಿಲ್ಲ. "ನಾವು ಲ್ಯಾಟಿನ್ ಅಮೇರಿಕಾಕ್ಕೆ ಬಲೂನ್ ಸಾಗುತ್ತಿರುವ ವರದಿಗಳನ್ನು ನೋಡುತ್ತಿದ್ದೇವೆ. ಇದು ಮತ್ತೊಂದು ಚೀನೀ ಕಣ್ಗಾವಲು ಬಲೂನ್ ಎಂದು ನಾವು ನಿರ್ಣಯಿಸಿದ್ದೇವೆ" ಎಂದು ಪೆಂಟಗನ್ ವಕ್ತಾರ ಬ್ರಿಗೇಡಿಯರ್ ಜನರಲ್ ಪ್ಯಾಟ್ರಿಕ್ ರೈಡರ್ ಹೇಳಿದ್ದಾರೆ.

ಚೀನಾ ಭೇಟಿ ಮುಂದೂಡಿಕೆ

ಚೀನಾ ಭೇಟಿ ಮುಂದೂಡಿಕೆ

ಶ್ವೇತಭವನದ ವಕ್ತಾರ ಕರೀನ್ ಜೀನ್-ಪಿಯರ್ ಅವರು ಈ ಬಗ್ಗೆ ಮಾತನಾಡಿ, ಯುನೈಟೆಡ್ ಸ್ಟೇಟ್ಸ್ ಮೇಲೆ ಬಲೂನ್ ಹಾರಾಟದ ಬಗ್ಗೆ ಮಂಗಳವಾರ ಬಿಡೆನ್ ಅವರಿಗೆ ತಿಳಿಸಲಾಯಿತು. ಹೀಗಾಗಿ ಈ ಸಮಯದಲ್ಲಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಚೀನಾಕ್ಕೆ ಪ್ರಯಾಣಿಸುವುದು ಸೂಕ್ತವಲ್ಲ ಎಂದು ಒಮ್ಮತಕ್ಕೆ ಬರಲಾಗಿದೆ.

 ಚೀನಾ ಹೇಳಿಕೆಗೆ ಯುಎಸ್ ಪ್ರತಿಕ್ರಿಯೆ

ಚೀನಾ ಹೇಳಿಕೆಗೆ ಯುಎಸ್ ಪ್ರತಿಕ್ರಿಯೆ

ಈ ಬಗ್ಗೆ ಚೀನಾ, ನಾಗರಿಕ ಹವಾಮಾನ ಮತ್ತು ಇತರ ವೈಜ್ಞಾನಿಕ ಉದ್ದೇಶಗಳಿಗಾಗಿ ಬಳಸಲಾದ ವಾಯುನೌಕೆ ಯುಎಸ್ ವಾಯುಪ್ರದೇಶಕ್ಕೆ ದಾರಿ ತಪ್ಪಿ ಬಂದಿದೆ ಎಂದು ಚೀನಾ ವಿಷಾದ ವ್ಯಕ್ತಪಡಿಸಿದೆ. "ಆದರೆ ನಮ್ಮ ವಾಯುಪ್ರದೇಶದಲ್ಲಿ ಈ ಬಲೂನ್ ಇರುವುದು ನಮ್ಮ ಸಾರ್ವಭೌಮತ್ವ ಮತ್ತು ಅಂತರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಸಂಭವಿಸಿರುವುದು ಸ್ವೀಕಾರಾರ್ಹವಲ್ಲ" ಎಂದು ಚೀನಾದ ಹೇಳಿಕೆಯ ಬಗ್ಗೆ US ಆಡಳಿತವು ತಿಳಿಸಿದೆ.

ಕೆಲವು ದಿನಗಳ ಕಾಲ ದೇಶಾದ್ಯಂತ ಇರುವ ಬಲೂನ್

ಕೆಲವು ದಿನಗಳ ಕಾಲ ದೇಶಾದ್ಯಂತ ಇರುವ ಬಲೂನ್

ಶುಕ್ರವಾರ, ಪೆಂಟಗನ್ ವಕ್ತಾರ ರೈಡರ್, ಬಲೂನ್ ಮಾರ್ಗವನ್ನು ಬದಲಾಯಿಸಿದೆ ಮತ್ತು ಮಧ್ಯ ಯುನೈಟೆಡ್ ಸ್ಟೇಟ್ಸ್‌ನಿಂದ ಸುಮಾರು 60,000 ಅಡಿ (18,300 ಮೀಟರ್) ಪೂರ್ವಕ್ಕೆ ತೇಲುತ್ತಿದೆ ಎಂದು ಹೇಳಿದರು. ಇದು ಇನ್ನೂ ಕೆಲವು ದಿನಗಳ ಕಾಲ ದೇಶಾದ್ಯಂತ ಇರುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ಚೀನೀ ಬಲೂನ್ ಹೊಡೆದುರಳಿಸುತ್ತಾ ಅಮೆರಿಕಾ?

ಚೀನೀ ಬಲೂನ್ ಹೊಡೆದುರಳಿಸುತ್ತಾ ಅಮೆರಿಕಾ?

ಪೆಂಟಗನ್‌ನ ರೈಡರ್ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಗುಪ್ತಚರ ಸಂಗ್ರಹಣೆಯ ದೃಷ್ಟಿಕೋನದಿಂದ ಹಾರಿಸಲಾದ ಬಲೂನ್ ಆಗಿದೆ ಎಂದು ನಿರ್ಣಯಿಸಲಾಗಿದೆ ಎಂದರು. ಚೀನಾದ ಬಲೂನ್ ಪ್ರಸ್ತುತ ವಾಣಿಜ್ಯ ವಿಮಾನಗಳ ಹಾರಾಟದ ಮಿತಿಗಿಂತಲೂ ಎತ್ತರದ ವಾಯು ಪ್ರದೇಶದಲ್ಲಿ ಹಾರಾಡುತ್ತಿದೆ. ತಕ್ಷಣಕ್ಕೆ ಬಲೂನ್​ನಿಂದ ಜನರಿಗಾಗಲೀ ಸೇನೆಗಾಗಲೀ ಅಪಾಯವಿಲ್ಲ ಎಂಬುದು ತಿಳಿದುಬಂದಿದೆ. ಹೀಗಾಗಿ ಅದನ್ನು ಹೊಡೆದುರುಳಿಸಿಲ್ಲ. ಒಂದು ವೇಳೆ ಅದನ್ನು ಹೊಡೆದುರುಳಿಸಿದರೆ ಅದರ ಅವಶೇಷಗಳಿಂದ ಜನರಿಗೆ ಹಾಗೂ ಆಸ್ತಿಗೆ ಹಾನಿಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯುಂತಿಲ್ಲ. ಇದೂ ಕೂಡ ಬಲೂನ್ ಹೊಡೆದುರುಳಿಸದಿರಲು ಕಾರಣ ಎಂದು ಪೆಂಟಗನ್ ತಿಳಿಸಿದೆ.

English summary
US Secretary of State Antony Blinken has postponed a visit to China after a suspicious Chinese balloon was spotted in the US. A suspected Chinese spy balloon has been spotted flying across America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X