• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೆಂಡತಿ ಜತೆ ಕಿರಿಕ್; ಆಟಿಕೆ ಪಿಸ್ತೂಲಿನಿಂದ ವಿಮಾನ ಹೈಜಾಕ್ ಗೆ ಯತ್ನಿಸಿದವನ ಹತ್ಯೆ

|

ಢಾಕಾ (ಬಾಂಗ್ಲಾದೇಶ್), ಫೆಬ್ರವರಿ 25: ಬಾಂಗ್ಲಾದೇಶದಲ್ಲಿ ವಿಮಾನ ಹೈಜಾಕ್ ಗೆ ಯತ್ನಿಸಿದ ವ್ಯಕ್ತಿಯನ್ನು ಗುಂಡಿಟ್ಟು ಕೊಲ್ಲಲಾಗಿದೆ. ಆತನ ಬಳಿ ಆಟಿಕೆ ಪಿಸ್ತೂಲು ಇತ್ತು. ಅದನ್ನು ಹೊರತುಪಡಿಸಿದರೆ ಯಾವುದೇ ಸ್ಫೋಟಕಗಳು ಇರಲಿಲ್ಲ ಎಂದು ಸೋಮವಾರದಂದು ಪೊಲೀಸರು ತಿಳಿಸಿದ್ದಾರೆ.

ಶಂಕಿತನ ಬಳಿ ಇದ್ದದ್ದು ಆಟಿಕೆ ಪಿಸ್ತೂಲು. ಆತನ ದೇಹದಲ್ಲಿ ಯಾವುದೇ ಬಾಂಬ್ ಇರಲಿಲ್ಲ ಎಂದು ಚಿತ್ತಗಾಂಗ್ ನ ಹಿರಿಯ ಪೊಲೀಸ್ ಅಧಿಕಾರಿ ಕುಸುಮ್ ದಿವಾನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ದುಬೈಗೆ ತೆರಳುತ್ತಿದ್ದ ವಿಮಾನ ಅಪಹರಿಸಲು ಬಾಂಗ್ಲಾದೇಶ್ ನಲ್ಲಿ ಯತ್ನ

ಆತನಿಗೆ ಮಾನಸಿಕ ಸ್ಥಿಮಿತ ಇರಲಿಲ್ಲ. ನಮಗೆ ಕೇಳಿಬಂದ ಮಾಹಿತಿ ಪ್ರಕಾರ ಪತ್ನಿ ಜತೆಗೆ ವೈಯಕ್ತಿಕ ಸಮಸ್ಯೆಗಳಿದ್ದವು. ಪ್ರಧಾನಮಂತ್ರಿ ಜತೆ ಮಾತನಾಡಬೇಕು ಎಂಬ ಬೇಡಿಕೆಯನ್ನು ಇಟ್ಟ. ಆದರೆ ನಾವಿನ್ನೂ ತನಿಖೆ ನಡೆಸುತ್ತಿದ್ದೇವೆ. ಈಗಲೇ ಯಾವ ತೀರ್ಮಾನಕ್ಕೂ ಬರಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಬಿಮನ್ ಬಾಂಗ್ಲಾದೇಶ್ ವಿಮಾನದ ಕಾಕ್ ಪಿಟ್ ನೊಳಗೆ ಪ್ರವೇಶಿಸಲು ಯತ್ನಿಸಿದ ಪ್ರಯಾಣಿಕನ ಮೇಲೆ ಬಾಂಗ್ಲಾದೇಶಿ ಕಮ್ಯಾಂಡೋಗಳು ಭಾನುವಾರ ಗುಂಡು ಹಾರಿಸಿದ್ದಾರೆ. ಆತ ಗನ್ ತೋರಿಸಿ, ವಿಮಾನ ಉಡಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಆ ವಿಮಾನ ಬಾಂಗ್ಲಾದೇಶ್ ನಿಂದ ದುಬೈಗೆ ತೆರಳುತ್ತಿತ್ತು.

ಪತ್ನಿಯ ಜತೆಗೆ ವೈಯಕ್ತಿಕ ಸಮಸ್ಯೆ ಇದ್ದ ಆ ಪ್ರಯಾಣಿಕ, ಬಾಂಗ್ಲಾದೇಶ್ ನ ಪ್ರಧಾನಿ ಶೇಖ್ ಹಸೀನಾರ ಜತೆ ಮಾತನಾಡಬೇಕು ಎಂದಿದ್ದಾನೆ. ಚಿತ್ತಗಾಂಗ್ ನ ಶಾ ಅಮಾನತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದೊಳಗೆ ಆತನ ಮೇಲೆ ಕಮ್ಯಾಂಡೋಗಳು ಗುಂಡು ಹಾರಿಸಿದ್ದರು. ಗಾಯಗಳಿಂದ ಆತ ಸಾವನ್ನಪ್ಪಿದ್ದಾನೆ.

English summary
A Bangladeshi man who was shot dead after he tried to hijack a plane had carried a toy pistol and did not have any explosives on him, the police said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X