ಮೂರುವರ್ಷಕ್ಕಾಗುವಷ್ಟು ಮಳೆಯನ್ನು ಒಂದೇ ದಿನ ಕಂಡ ಒಮಾನ್!
Recommended Video

ಸಲಾಲಾಹ್(ಒಮಾನ್), ಮೇ 29: ಅರಬ್ ದೇಶ ಒಮಾನ್ ನ ದಕ್ಷಿಣ ಭಾಗದಲ್ಲಿ ಸುರಿದ ಭಾರೀ ಮಳೆಗೆ 13 ಜನ ಬಲಿಯಾಗಿದ್ದು, 8 ಜನ ನಾಪತ್ತೆಯಾಗಿದ್ದಾರೆ.
ಮೂರು ವರ್ಷಗಳ ಕಾಲ ಸುರಿಯುವ ಮಳೆ ಒಂದೇ ದಿನ ಸುರಿದಿರುವುದು ಇಡೀ ದೇಶವನ್ನೂ ಕಂಗಾಲು ಮಾಡಿದೆ. ಮಳೆಯೊಂದಿಗೆ ಎದ್ದಿರುವ 'ಮೆಕುನು' ಎಂಬ ಸೈಕ್ಲೋನ್ ಸಹ ಜನರನ್ನು ಹೈರಾಣಾಗಿಸಿದೆ.

ಇದುವರೆಗೆ ಸುಮಾರು 278.2 ಮಿಮೀ ಮಳೆ ಸುರಿದಿದ್ದು, ಇದು ಇಲ್ಲಿನ ವಾರ್ಷಿಕ ಮಳೆ ಪ್ರಮಾಣದ ಮೂರುಪಟ್ಟು ಹೆಚ್ಚಾಗಿದೆ. ಮತ್ತೆ ಮೂರು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
MEDIA: Storm in Oman has brought three years worth of rain in one day. pic.twitter.com/PF9OaJOko9
— The Spectator Index (@spectatorindex) May 28, 2018
ಬಹುಮುಖ್ಯ ಪ್ರವಾಸಿ ತಾಣವಾಗಿದ್ದ ಈ ದೇಶದ ಪ್ರವಾಸಿ ತಾಣಗಳೆಲ್ಲ ನೀರಿನಿಂದ ಆವೃತವಾಗಿದ್ದು, ಪ್ರವಾಸೋದ್ಯಮಕ್ಕೂ ಸಾಕಷ್ಟು ಹೊಡೆತ ಬಿದ್ದಿದೆ. ಗಂಟೆಗೆ 170 ಕಿ.ಮೀ.ಯಿಂದ 180 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಗಾಳಿಯಿಮದಾಗಿ ಜನರೆಲ್ಲ ಮನೆಯಿಂದ ಆಚೆ ಬರುವುದಕ್ಕೂ ಭಯಪಡುತ್ತಿದ್ದಾರೆ. ರಸ್ತೆಯಲ್ಲಿ ಸಾಕಷ್ಟು ಮರಗಳು ಮುರಿದುಬಿದ್ದಿದ್ದು, ಕಾರುಗಳು, ಇನ್ನಿತರ ವಾಹನಗಳು ಜಖಂಗೊಂಡಿವೆ. ರಸ್ತೆಗೂ, ಕೆರೆಗೂ ವ್ಯತ್ಯಾಸ ತಿಳಿಯದ ಮಟ್ಟಿಗೆ ನೀರು ಎಲ್ಲೆಲ್ಲೂ ಆವರಿಸಿದೆ.
ದೇಶದ ಎಲ್ಲಾ ಪ್ರಮುಖ ಸಂಸ್ಥೆಗಳು ಭದ್ರತೆಯ ದೃಷ್ಟಿಯಿಂದ ಮೂರು ದಿನಗಳ ರಜೆ ಘೋಷಿಸಿವೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.












Click it and Unblock the Notifications