ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾರ್ಸಿಲೋನಾದಲ್ಲಿ 'ಕರೆಂಟ್' ಹೊಡೆಯುವ ವಿದ್ಯುತ್ ದರದ ವಿರುದ್ಧ ಹೋರಾಟ

|
Google Oneindia Kannada News

ಬಾರ್ಸಿಲೋನಾ, ನವೆಂಬರ್ 8: ನಿಲ್ಲಿಸಿ, ನಿಲ್ಲಿಸಿ, ವಿದ್ಯುತ್ ಹಗರಣವನ್ನು ನಿಲ್ಲಿಸಿ. ಬಾರ್ಸಿಲೋನಾದ ಪ್ರಮುಖ ಬೀದಿಗಳಲ್ಲಿ ಇದೊಂದು ಘೋಷಣೆಯನ್ನು ಕೂಗುತ್ತಾ ನೂರಾರು ಪ್ರತಿಭಟನಾಕಾರರು ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ವಿರುದ್ಧ ಘೋಷಣೆ ಕೂಗಿದರು. ಬಾರ್ಸಿಲೋನಾದಲ್ಲಿ ವಿದ್ಯುತ್ ದರ ಏರಿಕೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಹಕರಿಗೆ ಒದಗಿಸುವ ವಿದ್ಯುತ್ ಮೇಲೆ ಹೆಚ್ಚಿನ ದರವನ್ನು ನಿಗದಿಪಡಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ವಿದ್ಯುತ್ ದರವನ್ನು ಹೆಚ್ಚಿಸಲಾಗಿತ್ತು. ರಾಷ್ಟ್ರೀಯ ಸಂಸ್ಥೆಯ ಪ್ರಾಥಮಿಕ ಮಾಹಿತಿಯ ಅಂಕಿ-ಅಂಶಗಳ ಪ್ರಕಾರ, ಇದು ಕಳೆದ 29 ವರ್ಷಗಳಲ್ಲೇ ಹೊಸ ದಾಖಲೆಯಾಗಿದೆ.

ಚೀನಾಗೆ ಕರೆಂಟ್ ಶಾಕ್! ಇನ್ನೂ ಮುಂದಕ್ಕೆ ಕಾದಿದೆ ಮಾರಿ ಹಬ್ಬ! ಚೀನಾಗೆ ಕರೆಂಟ್ ಶಾಕ್! ಇನ್ನೂ ಮುಂದಕ್ಕೆ ಕಾದಿದೆ ಮಾರಿ ಹಬ್ಬ!

ಕಳೆದ 2020ರ ಅಕ್ಟೋಬರ್ ತಿಂಗಳು ಮತ್ತು 2021ರ ಅಕ್ಟೋಬರ್ ತಿಂಗಳಿನ ವಿದ್ಯುತ್ ದರವನ್ನು ಹೋಲಿಸಿ ನೋಡಿದಾಗ ಗ್ರಾಹಕರ ಮೇಲೆ ವಿಧಿಸುವ ದರದಲ್ಲಿ ಶೇ.5.5ರಷ್ಟು ಏರಿಕೆಯಾಗಿದೆ ಎಂಬುದು ಅಂಕಿ-ಅಂಶಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

Stop the electricity scam: Protest against Electricity Price Rise in Barcelona

ವಿದ್ಯುಚ್ಛಕ್ತಿ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ:

ಸ್ಪ್ಯಾನಿಷ್ ಸರ್ಕಾರವು ಬೃಹತ್ ವಿದ್ಯುಚ್ಛಕ್ತಿ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಗಳನ್ನು ಜಾರಿಗೊಳಿಸಿದ ಹೊರತಾಗಿಯೂ ಯಾವುದೇ ಬದಲಾವಣೆಗಳು ಆಗುತ್ತಿಲ್ಲ. ಪ್ರಸ್ತುತ ಏರಿಕೆ ಆಗುತ್ತಿರುವ ವಿದ್ಯುತ್ ದರವು ಸಾರ್ವಜನಿಕರಿಗೆ ಉಪಯುಕ್ತ ಎನ್ನುವಂತಿಲ್ಲ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಸಗಟು ಇಂಧನ ಬೆಲೆ ಬಿಕ್ಕಟ್ಟಿನಿಂದಾಗಿ ದೇಶದ ಕಂಪನಿಗಳು ಮತ್ತು ಸಾರ್ವಜನಿಕರು ಈ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.

ಬೆಲೆ ಏರಿಕೆಯ ಹೊಡೆತ:

ವಿದ್ಯುತ್ ಬೆಲೆ ಏರಿಕೆಯ ಹೊರತಾಗಿ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಅಡುಗೆ ಅನಿಲ ಸೇರಿದಂತೆ ಗ್ಯಾಸ್ ಬೆಲೆಗಳಲ್ಲಿ ಏರಿಕೆಯಾಗಿರುವುದು ಸಾರ್ವಜನಿಕರ ತಿಂಗಳ ಖರ್ಚಿನ ಪ್ರಮಾಣ ಹೆಚ್ಚಾಗುವಂತೆ ಮಾಡಿದೆ ಎಂದು INE ಹೇಳಿದೆ. 2020 ರಲ್ಲಿ ಅದೇ ತಿಂಗಳಿಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಸ್ಪೇನ್‌ನ ಗ್ರಾಹಕ ಬೆಲೆಗಳು 4% ಹೆಚ್ಚಾಗಿದೆ.

English summary
Stop the electricity scam: Protest against Electricity Price Rise in Barcelona.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X