Get Updates
Get notified of breaking news, exclusive insights, and must-see stories!

Breaking: ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಕಾಲ್ತುಳಿತಕ್ಕೆ 120 ಮಂದಿ ಸಾವು

ಸಿಯೋಲ್‌, ಅಕ್ಟೋಬರ್ 30: ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನ ಪ್ರಮುಖ ಮಾರುಕಟ್ಟೆಯಲ್ಲಿ ನಡೆದ ಕಾಲ್ತುಳಿತದಲ್ಲಿ ಕನಿಷ್ಠ 120 ಜನರು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹ್ಯಾಲೋವೀನ್ ಹಬ್ಬಗಳಿಗೆ ಬೃಹತ್ ಜನಸಮೂಹವು ಸೇರಿದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಿರಿದಾದ ಬೀದಿಗಳಲ್ಲಿ ಅವ್ಯವಸ್ಥೆಯ ನಡುವೆ ತೀವ್ರ ಹೃದಯಘಾತದಿಂದ ಕುಸಿದು ಬಿದ್ದ ಜನರನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯು ರಕ್ಷಿಸುತ್ತಿರುವುದು ಕಂಡು ಬಂದಿದೆ. ಇದೇ ವೇಳೆ ನೂರಾರು ಅಂಗಡಿಗಳು ಮತ್ತು ಪಾರ್ಟಿ ಸ್ಥಳಗಳನ್ನು ಹೊಂದಿರುವ ಮೆಗಾಸಿಟಿಯ ಕೇಂದ್ರ ಜಿಲ್ಲೆ ಇಟಾವಾನ್‌ನಲ್ಲಿ ಶನಿವಾರ ರಾತ್ರಿ ಸುಮಾರು 1 ಲಕ್ಷ ಜನ ಸೇರಿದ್ದರು ಎಂದು ಸ್ಥಳೀಯ ಸುದ್ದಿ ವಾಹಿನಿಗಳು ತಿಳಿಸಿವೆ.

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಿರ್ಬಂಧಗಳಿಂದಾಗಿ ಎರಡು ವರ್ಷ ಸ್ಥಗಿತಗೊಂಡಿದ್ದ ಆಚರಣೆಗಳು ಪುನಾರಂಭಗೊಂಡಿವೆ. ಮೊದಲ ಬಾರಿಗೆ ಆಚರಿಸುತ್ತಿರುವ ಹ್ಯಾಲೋವೀನ್ ಹಬ್ಬವು ಅಕ್ಟೋಬರ್ 31ರ ಪೂರ್ವದಲ್ಲೇ ಹೊಸ ಉತ್ಸಾಹವನ್ನು ನೀಡಿತ್ತು.

Stampede In South Korea: 120 Dead, 100 Injured In Halloween

ಎದೆ ಒತ್ತುವ ಹೃದಯ ವಿದ್ರಾವಕ ಘಟನೆ:
ಸ್ಥಳೀಯ ಕಾಲಮಾನದ ಮಧ್ಯರಾತ್ರಿಯ ಮುನ್ನವೇ ಹತ್ತಾರು ಜನರು ಹೊಟೇಲ್ ಬಳಿ ಪ್ರಜ್ಞಾಹೀನರಾಗಿ ಬಿದ್ದಿದ್ದರು ಎಂದು ದ ಕೊರಿಯಾ ಹೆರಾಲ್ಡ್ ವರದಿ ಮಾಡಿದೆ. ರಾತ್ರಿ 11.30ರ ವೇಳೆಗೆ ಉಸಿರಾಟದ ತೊಂದರೆಗೆ ಸಂಬಂಧಿಸಿದಂತೆ 81 ವರದಿಗಳು ಬಂದಿವೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾನ್ಯ ಜನರು ಸಹ ಕುಸಿದು ಬಿದ್ದ ಜನರ ಎದೆಯನ್ನು ಒತ್ತುವ ಮೂಲಕ ಪ್ರಾಥಮಿಕ ಚಿಕಿತ್ಸೆ ನೀಡುತ್ತಿರುವ ದೃಶ್ಯವು ಕಂಡು ಬಂದಿತು.


ಎರಡು ಗಂಟೆಗಳ ನಂತರ ಮೊದಲ ಸಾವಿನಬಗ್ಗೆ ಸುದ್ದಿಯಾಯಿತು. ಈ ಸಂಖ್ಯೆಯು ಆರಂಭದಲ್ಲಿ ಒಂಬತ್ತರಿಂದ 59ಕ್ಕೆ ಮತ್ತು ನಂತರ ಒಂದು ಗಂಟೆಯೊಳಗೆ 120ಕ್ಕೆ ಏರಿಕೆ ಆಯಿತು. ಗಾಯಗೊಂಡವರಲ್ಲಿ 20ರ ಹರೆಯದ ಅನೇಕ ಮಹಿಳೆಯರಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ಘಟನೆಯನ್ನು ಸುದ್ದಿ ಸಂಸ್ಥೆ ಎಎಫ್‌ಪಿಗೆ ದೃಢಪಡಿಸಿದರು, ಈ ಘಟನಾ ಸ್ಥಳಕ್ಕೆ 140 ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ರವಾನಿಸಲಾಗಿದೆ ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+