ಶ್ರೀಲಂಕಾದಲ್ಲಿ ಇಲ್ಲಿ ತನಕ ಸಂಭವಿಸಿದ ಭೀಕರ ಸ್ಫೋಟಗಳು
ಕೊಲಂಬೋ, ಏಪ್ರಿಲ್ 21: ಈಸ್ಟರ್ ದಿನದಂದು ಸರಣಿ ಬಾಂಬ್ ಸ್ಫೋಟದಿಂದ ಶ್ರೀಲಂಕಾ ತತ್ತರಿಸಿದೆ. ಎಲ್ ಟಿಟಿಇ ಜತೆಗಿನ ನಾಗರಿಕ ಯುದ್ಧದಿಂದಾಗಿ ಲಂಕನ್ನರಿಗೆ ಮೆತ್ತುಕೊಂಡಿದ್ದ ರಕ್ತದ ಪಸೆ ಆರಿ ನೆಮ್ಮದಿ ನೆಲೆಸಿದೆ ಎನ್ನುವಷ್ಟರಲ್ಲೇ ಭೀಕರ ಸ್ಫೋಟಗಳು ಅಪ್ಪಳಿಸಿವೆ.
ಈಸ್ಟರ್ ಪ್ರಾರ್ಥನೆಯಲ್ಲಿ ತೊಡಗಿದ್ದವರನ್ನು ಗುರಿಯನ್ನಾಗಿಸಿಕೊಂಡು ಚರ್ಚ್ ಗಳಲ್ಲಿ ಬಾಂಬ್ ಸ್ಫೋಟ ಮಾಡಲಾಗಿದೆ. ಕೆಲವು ಹೋಟೆಲ್ ಗಳಲ್ಲಿ ಸ್ಫೋಟಗಳಾಗಿವೆ. ಏಳೆಂಟು ಕಡೆಗಳಲ್ಲಿ ನಡೆದಿರುವ ವಿಧ್ವಂಸಕ ಕೃತ್ಯದಿಂದಾಗಿ ಸುಮಾರು 155ಕ್ಕೂ ಅಧಿಕ ಮಂದಿ ಮರಣ ಹೊಂದಿದ್ದು, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಕೊಲಂಬೋ ಹಾಗೂ ನೆಗೊಂಬೋ ನಗರಗಳಲ್ಲಿರುವ ಚರ್ಚ್ ಗಳಲ್ಲಿ ಶಾಂಗ್ರಿಲಾ ಹೋಟೆಲ್ ಹಾಗೂ ಕಿಂಗ್ಸ್ ಬರಿ ಹೋಟೆಲ್ ನಲ್ಲಿ ಸ್ಫೋಟವಾಗಿವೆ. ಸ್ಫೋಟಗೊಂಡ ಸ್ಥಳದಿಂದ ನೆರವಿಗಾಗಿ ಕೋರಲಾಗಿದೆ. ಭಾರತೀಯ ರಾಯಭಾರ ಕಚೇರಿ ಕೂಡಾ ಸಹಾಯವಾಣಿ ಪ್ರಕಟಿಸಿದೆ.

2006ರ ತನಕ ಸರಣಿ ಸ್ಫೋಟ, ಆತ್ಮಾಹುತಿ ದಾಳಿಗಳನ್ನು ಎದುರಿಸಿದ್ದ ಶ್ರೀಲಂಕಾಕ್ಕೆ ವಿಧ್ವಂಸಕ ಕೃತ್ಯಗಳಿಂದ ಮುಕ್ತಿ ನೀಡುವ ಪಣತೊಟ್ಟ ಶ್ರೀಲಂಕಾ ಸೇನೆ, 2009ರಲ್ಲಿ ಎಲ್ ಟಿಟಿ ಐಯನ್ನು ಅಧಿಕೃತವಾಗಿ ನಿರ್ನಾಮ ಮಾಡಲಾಗಿತ್ತು.ಆನಂತರ ದ್ವೀಪರಾಷ್ಟ್ರದಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ, ಸ್ಫೋಟಗಳು ಸಂಭವಿಸಿರಲಿಲ್ಲ.
1985 ರಿಂದ 2006ರ ಅವಧಿಯಲ್ಲಿ ದಾಖಲಾದ ವಿಧ್ವಂಸಕ ಕೃತ್ಯಗಳು
* ಶ್ರೀಮಹಾಬೋಧಿ ದಾಳಿ 1985 : ಅನುರಾಧಾಪುರದಾಲ್ಲಿ ಎಲ್ಟಿಟಿಇ ನಡೆಸಿದ ದಾಳಿಯಲ್ಲಿ 146ಕ್ಕೂ ಅಧಿಕ ಮಂದಿ ಸಾವು, ಮೃತರಲ್ಲಿ ನಾಗರಿಕರು, ಬೌದ್ಧ ಭಿಕ್ಕುಗಳು, ಸನ್ಯಾಸಿಗಳಿದ್ದರು.
* 1987ರಲ್ಲಿ ಅಲುತಾ ಕ್ಯಾ ಹತ್ಯಾಕಾಂಡ: ಎಲ್ಟಿಟಿಇ ದಾಳಿಗೆ 127 ಸಿಂಹಳೀಯರ ಸಾವು.
* 1987ರಲ್ಲಿ ಶ್ರೀಲಂಕಾ ಸಂಸತ್ ಮೇಲೆ ದಾಳಿ: ಸಂಸತ್ತಿನಲ್ಲಿ ನಡೆದ ಗ್ರೇನೇಡ್ ದಾಳಿಯಲ್ಲಿ ಇಬ್ಬರು ಸಾವು.
* ಬಸ್ ಮೇಲೆ ದಾಳಿ, 1987: ಕೊಲಂಬೋ ಬಸ್ ನಿಲ್ದಾಣದಲ್ಲಿ ಕಾರ್ ಬಾಂಬ್ ಸ್ಫೋಟದಲ್ಲಿ 113 ಮಂದಿ ಸಾವು.
* 1990ರಲ್ಲಿ ಮಸೀದಿ ಮೇಲೆ ದಾಳಿ: ಕಟ್ಟಂಕುಡಿಯಲ್ಲಿನ ಮಸೀದಿಯನ್ನು ಗುರಿಯನ್ನಾಗಿಸಿಕೊಂಡು ದಾಳಿ ನಡೆಸಿದ ಎಲ್ಟಿಟಿಇಯಿಂದ 147 ಮುಸ್ಲಿಮರ ಹತ್ಯೆ.
* 1992ರಲ್ಲಿ ಪಲ್ಲುಯಾಗೊದೆಲ್ಲಾ ಹತ್ಯಾಕಾಂಡ: ಎಲ್ಟಿಟಿಇ ದಾಳಿಗೆ 285 ಮಂದಿ ಸಾವು.
* 1996ರಲ್ಲಿ ಸೆಂಟ್ರಲ್ ಬ್ಯಾಂಕ್ ದಾಳಿ: ಬಾಂಬ್ ಹೊಂದಿದ್ದ ಟ್ರಕ್ ಮೂಲಕ ಕೊಲಂಬೋ ಸೆಂಟ್ರಲ್ ಬ್ಯಾಂಕ್ ಮೇಲೆ ದಾಳಿ 91 ಮಂದಿ ಸಾವು.
* 2006ರಲ್ಲಿ ದಿಗಂಪಥಾನಾ ಬಾಂಬ್ ಸ್ಫೋಟ: 15 ಮಿಲಿಟರಿ ಬಸ್ ಮೇಲೆ ದಾಳಿ ನಡೆಸಿದ ಬಾಂಬ್ ತುಂಬಿದ ಎಲ್ಟಿಟಿಇ ಟ್ರಕ್, ಸ್ಫೋಟದ ಪರಿಣಾಮ 120 ಮಂದಿ ಸಾವು.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications