ಕೊರೊನಾ ಲಸಿಕೆಯಿಂದ ದೂರವಿಡಲು ಮಕ್ಕಳನ್ನೇ ಅಪಹರಿಸಿದ ತಾಯಿ
ಮಕ್ಕಳಿಗೆ ಕೊರೊನಾ ಲಸಿಕೆ ಹಾಕಿಸಬಾರದು ಎಂದು ತಾಯಿಯೊಬ್ಬರು ಇಬ್ಬರು ಮಕ್ಕಳನ್ನೇ ಅಪಹರಿಸಿರುವ ಘಟನೆ ಸ್ಪೇನ್‌ನಲ್ಲಿ ನಡೆದಿದೆ. ಮಕ್ಕಳಿಗೆ ಕೊರೊನಾ ಲಸಿಕೆ ಕೊಡಿಸಬಾರದು ಎಂದು ಮಕ್ಕಳನ್ನು ತಾಯಿ ಅಪಹರಿಸಿದ್ದಾರೆ ಎಂದು ಪತಿ ದೂರು ನೀಡಿದ್ದಾರೆ.
46 ವರ್ಷದ ಮಹಿಳೆಯು ಇಬ್ಬರು ಮಕ್ಕಳನ್ನು ಅಪಹರಿಸಿದ್ದಾರೆ ಎಂದು ಪತಿ ಡಿಸೆಂಬರ್ ಮಧ್ಯದಲ್ಲಿ ದೂರು ದಾಖಲಿಸಿದ್ದರು. ಇಬ್ಬರು ಗಂಡು ಮಕ್ಕಳಾಗಿದ್ದು 12, 14 ವರ್ಷದವರಾಗಿದ್ದಾರೆ, ಪತಿ ಪತ್ನಿ ಹಲವು ವರ್ಷಗಳಿಂದ ಬೇರೆ ಬೇರೆ ವಾಸಿಸುತ್ತಿದ್ದಾರೆ, ತಂದೆಗೆ ವಿಷಯ ತಿಳಿಸದೇ ಮಕ್ಕಳನ್ನು ಅಪಹರಿಸಿದ್ದಾರೆ ಎಂದು ಹೇಳಲಾಗಿದೆ.
''ನವೆಂಬರ್ 04 ರಿಂದ ಮಕ್ಕಳನ್ನು ನಾನು ನೋಡಿಲ್ಲ, ಪತ್ನಿಯಿಂದ ಒಂದು ಪತ್ರ ಬಂದಿತ್ತು ಅದರಲ್ಲಿ ಮಕ್ಕಳನ್ನು ಶಾಲೆಯಿಂದ ಬಿಡಿಸಲು ನಿರ್ಧಾರ ಮಾಡಿದ್ದೇನೆ ಎಂದು ಬರೆಯಲಾಗಿತ್ತು'' ಎಂದು ತಿಳಿಸಿದ್ದಾರೆ.

ಈ ಕುರಿತು ವಿಚಾರಣೆ ನಡೆಸಿರುವ ಕೋರ್ಟ್ ಇಬ್ಬರು ಮಕ್ಕಳನ್ನು ತಂದೆಯ ಬಳಿ ಕಳುಹಿಸುವಂತೆ ತೀರ್ಪು ನೀಡಿದೆ, ಬುಧವಾರ ಸ್ಪೇನ್ ಪೊಲೀಸಲು ಮಕ್ಕಳನ್ನು ತಂದೆಯ ಸುಪರ್ದಿಗೆ ನೀಡಿದ್ದಾರೆ.
ಡಿಸೆಂಬರ್ 15ರಿಂದ ಸ್ಪೇನ್ ಸೇರಿದಂತೆ ಹಲವು ದೇಶಗಳಲ್ಲಿ 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಅಭಿಯಾನ ಶುರುವಾಗಿದೆ. ಸ್ಪೇನ್‌ನಲ್ಲಿ 69.2 ಲಕ್ಷ ಮಂದಿ ಕೊರೊನಾ ಸೋಂಕಿತರಿದ್ದಾರೆ, 89,837 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ. ವಿಶ್ವದಾದ್ಯಂತ 29.8 ಕೋಟಿ ಮಂದಿ ಕೊರೊನಾ ಸದೋಂಕಿತರಿದ್ದಾರೆ. 54.6 ಲಕ್ಷ ಮಂದಿ ಮೃತಪಟ್ಟಿದ್ದಾರೆ.
ಇದೀಗ ಹಲವು ದೇಶಗಳಲ್ಲಿ ಓಮಿಕ್ರಾನ್ ಸೋಂಕು ಹರಡುತ್ತಿದೆ. ಕೊರೊನಾದ ಹೊಸ ರೂಪಾಂತರವಾದ ಓಮಿಕ್ರಾನ್ ಅತಿ ವೇಗವಾಗಿ ಹರಡುತ್ತಿದೆ. ಈ ನಡುವೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಮಹತ್ವದ ನಿರ್ಧಾರ ಕೈಗೊಂಡಿದೆ. ಐಸಿಎಂಆರ್ ಮೊದಲ ಓಮಿಕ್ರಾನ್ ಪತ್ತೆ ಕಿಟ್ ಅನ್ನು ಅನುಮೋದಿಸಿದೆ. ಇದನ್ನು ಟಾಟಾ ಮೆಡಿಕಲ್ ಸಿದ್ಧಪಡಿಸಿದ್ದು, ಇದರ ಹೆಸರು 'ಓಮೈಸ್ಯೂರ್' ಎಂದಾಗಿದೆ.
ಮೂಲಗಳ ಪ್ರಕಾರ ಮುಂಬೈನ ಟಾಟಾ ಮೆಡಿಕಲ್ (ಟಾಟಾ ಮೆಡಿಕಲ್ & ಡಯಾಗ್ನೋಸ್ಟಿಕ್ಸ್) ಕಿಟ್ ಅನ್ನು ಡಿಸೆಂಬರ್ 30 ರಂದು ಅನುಮೋದಿಸಲಾಗಿದ್ದು, ಅದರ ಮಾಹಿತಿಯು ಈಗ ಮುನ್ನೆಲೆಗೆ ಬಂದಿದೆ. ಸದ್ಯಕ್ಕೆ, ದೇಶದಲ್ಲಿ ಒಮೈಕ್ರಾನ್ ಪತ್ತೆಹಚ್ಚಲು ಮತ್ತೊಂದು ಕಿಟ್ ಅನ್ನು ಬಳಸಲಾಗುತ್ತಿದೆ.
ಆ ಮಲ್ಟಿಪ್ಲೆಕ್ಸ್ ಕಿಟ್ ಅನ್ನು ಅಮೆರಿಕದ ಥರ್ಮೋ ಫಿಶರ್ ಮಾರಾಟ ಮಾಡುತ್ತಿದೆ. ಈ ಕಿಟ್ S-ಜೀನ್ ಟಾರ್ಗೆಟ್ ಫೇಲ್ಯೂರ್ (SGTF) ತಂತ್ರವನ್ನು ಬಳಸಿಕೊಂಡು ಒಮೈಕ್ರಾನ್ ಅನ್ನು ಪತ್ತೆ ಮಾಡುತ್ತದೆ. ಈಗ ಟಾಟಾ ಅನುಮೋದಿಸಿದ ಕಿಟ್‌ನ ಹೆಸರು ಟಾಟಾ ಎಂಡಿ ಚೆಕ್ ಆರ್‌ಟಿ-ಪಿಸಿಆರ್ ಓಮೈಸ್ಯೂರ್.
ದೇಶದಲ್ಲಿ ವೇಗವಾಗಿ ಹೆಚ್ಚುತ್ತಿರುವ ರೂಪಾಂತರಿ ಓಮಿಕ್ರಾನ್, ಇದನ್ನು ಡೆಲ್ಟಾ ಅಥವಾ ಡೆಲ್ಟಾ ಪ್ಲಸ್‌ನಂತೆ ಮಾರಣಾಂತಿಕವೆಂದು ಪರಿಗಣಿಸಲಾಗುವುದಿಲ್ಲಾವಾದರೂ ಇದರ ಪಸರಿಸುವಿಕೆಯ ತೀವ್ರತೆ ಹೆಚ್ಚೇ ಆಗಿದೆ.












Click it and Unblock the Notifications