ಲಸಿಕೆಯ ಒಂದು ಡೋಸ್ ಪಡೆದರೂ ಸಾಕು ಈ ದೇಶದಲ್ಲಿ ಮಾಸ್ಕ್ ಧರಿಸಬೇಕಿಲ್ಲ

ಕೊರೊನಾ ಸೋಂಕಿನಿಂದ ದೂರವಿರಲು ಮಾಸ್ಕ್, ಕೈಗವಸುಗಳೇ ಆಯುಧಗಳು, ಆದರೆ ಈ ದೇಶದಲ್ಲಿ ಲಸಿಕೆಯ ಒಂದು ಡೋಸ್ ಪಡೆದರೆ ಸಾಕಂತೆ ಮಾಸ್ಕ್ ಅಗತ್ಯವೇ ಇಲ್ವಂತೆ.

Recommended Video

      ಕೊರೊನ ಗೆದ್ದ ಸೌತ್ ಕೊರಿಯ | Oneindia Kannada

      ಹೌದು, ಹೀಗೊಂದು ಸೂಚನೆಯನ್ನು ದಕ್ಷಿಣ ಕೊರಿಯಾ ನೀಡಿದೆ, ಜುಲೈ ವೇಳೆಗೆ ದೇಶದ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆಯ ಮೊದಲ ಡೋಸ್ ಹಾಕಲಾಗುತ್ತದೆ. ಲಸಿಕೆಯ ಮೊದಲನೇ ಡೋಸ್ ಹಾಕಿಸಿಕೊಂಡ ಬಳಿಕ ಮಾಸ್ಕ್ ಅಗತ್ಯವಿಲ್ಲ ಎಂದು ಸೂಚನೆ ನೀಡಿದೆ.

      ಈಗಾಗಲೇ ಶೇ.7.7ರಷ್ಟು ಮಂದಿ ಮಾತ್ರ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ, 50 ಮಿಲಿಯನ್ ಜನಸಂಖ್ಯೆಯಿದ್ದು, ಸೆಪ್ಟೆಂಬರ್ ವೇಳೆಗೆ ಶೇ.70ರಷ್ಟು ಲಸಿಕೆ ನೀಡುವ ಗುರಿಯನ್ನು ದೇಶ ಹೊಂದಿದೆ. ಲಸಿಕೆ ಹಾಕಿಸಿಕೊಳ್ಳುವಂತೆ ಹಿರಿಯ ನಾಗರಿಕರನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಈ ಹೇಳಿಕೆ ನೀಡಿದೆ.

      ದಕ್ಷಿಣ ಕೊರಿಯಾದಲ್ಲಿ ಮಂಗಳವಾರ 707 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ, ಒಟ್ಟು 137,682 ಪ್ರಕರಣಗಳಿವೆ, 1940 ಮಂದಿ ಮೃತಪಟ್ಟಿದ್ದಾರೆ.

       ಜನರು ಒಂದೆಡೆ ಸೇರಬಹುದು

      ಜನರು ಒಂದೆಡೆ ಸೇರಬಹುದು

      ಜೂನ್ ಬಳಿಕ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಒಂದು ಡೋಸ್ ಕೊರೊನಾ ಲಸಿಕೆ ನೀಡಲಾಗಿರುತ್ತದೆ, ಹೀಗಾಗಿ ಹೆಚ್ಚು ಮಂದಿ ಒಟ್ಟಿಗೆ ಸೇರಬಹುದು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು ಎಂದು ಪ್ರಧಾನಿ ಕಿಮ್ ಬೂ ಕ್ಯುಮ್ ಸಭೆಯಲ್ಲಿ ತಿಳಿಸಿದ್ದಾರೆ.

       ಕೇವಲ ಶೇ.7.7ರಷ್ಟು ಮಂದಿಗೆ ಲಸಿಕೆ

      ಕೇವಲ ಶೇ.7.7ರಷ್ಟು ಮಂದಿಗೆ ಲಸಿಕೆ

      ಈಗಾಗಲೇ ಶೇ.7.7ರಷ್ಟು ಮಂದಿ ಮಾತ್ರ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ, 50 ಮಿಲಿಯನ್ ಜನಸಂಖ್ಯೆಯಿದ್ದು, ಸೆಪ್ಟೆಂಬರ್ ವೇಳೆಗೆ ಶೇ.70ರಷ್ಟು ಲಸಿಕೆ ನೀಡುವ ಗುರಿಯನ್ನು ದೇಶ ಹೊಂದಿದೆ. ಲಸಿಕೆ ಹಾಕಿಸಿಕೊಳ್ಳುವಂತೆ ಹಿರಿಯ ನಾಗರಿಕರನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಈ ಹೇಳಿಕೆ ನೀಡಿದೆ.

       ಕ್ವಾರಂಟೈನ್ ಆಗಬೇಕಿಲ್ಲ

      ಕ್ವಾರಂಟೈನ್ ಆಗಬೇಕಿಲ್ಲ

      ಶೇ.70ರಷ್ಟು ಮಂದಿ ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದ ಬಳಿಕ, ಅಕ್ಟೋಬರ್ ನಂತರದಲ್ಲಿ ಕ್ವಾರಂಟೈನ್ ನಿಯಮವನ್ನು ಕೂಡ ಸಡಿಲಗೊಳಿಸಲಾಗುವುದು ಎಂದು ಕಿಮ್ ತಿಳಿಸಿದ್ದಾರೆ.

       ನೋಂದಣಿ ಮಾಡಿಸಿದ ಹಿರಿಯ ನಾಗರಿಕರು

      ನೋಂದಣಿ ಮಾಡಿಸಿದ ಹಿರಿಯ ನಾಗರಿಕರು

      60 ರಿಂದ 74 ವರ್ಷ ವಯಸ್ಸಿನ ಶೇ.60ರಷ್ಟು ಮಂದಿ ಕೊರೊನಾ ಲಸಿಕೆ ಪಡೆಯಲು ಹೆಸರು ನೋಂದಣಿ ಮಾಡಿದ್ದಾರೆ. ದಕ್ಷಿಣ ಕೊರಿಯಾದಲ್ಲಿ 12,000 ಕ್ಲಿನಿಕ್‌ಗಳಲ್ಲಿ 65 ವರ್ಷದಿಂದ 74ವರ್ಷ ಒಳಗಿನವರು ಹೆಸರು ನೋಂದಾಯಿಸಿಕೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+