ಬಿತ್ತು.. ಬಿತ್ತು.. ಬಾಂಬ್ ಬಿತ್ತು.. ತನ್ನದೇ ನೆಲದ ಮೇಲೆ ಬಾಂಬ್ ಹಾಕಿದ ದಕ್ಷಿಣ ಕೊರಿಯಾ ಜೆಟ್!
ದಕ್ಷಿಣ ಕೊರಿಯಾದಲ್ಲಿ ಇತ್ತೀಚೆಗೆ ಸಾಲು ಸಾಲು ವಿಮಾನ ಅವಘಡ ನಡೆಯುತ್ತಿದ್ದು, ಹೀಗೆ ಕಳೆದ ಕೆಲವು ತಿಂಗಳಲ್ಲಿ ಹಲವು ದುರಂತ ನಡೆದು ಜನರು ಕೂಡ ಬೆಚ್ಚಿಬಿದ್ದಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ ಇಂದು ಮತ್ತೊಂದು ದುರಂತ ನಡೆದು ಹೋಗಿದೆ. ದಕ್ಷಿಣ ಕೊರಿಯಾ ಯುದ್ಧ ವಿಮಾನ ತನ್ನದೇ ದೇಶದ ಮನೆಗಳ ಮೇಲೆ ಬಾಂಬ್ ಹಾಕಿಬಿಟ್ಟಿದೆ. ಹಾಗಾದ್ರೆ ಈ ಘಟನೆಯಲ್ಲಿ ಮುಂದೆ ಏನಾಯ್ತು?
ಅಂದಹಾಗೆ ನಸುಕಿನ ಜಾವ ತರಬೇತಿ ನಡೆಸುವ ಸಮಯದಲ್ಲಿ ಈ ದುರಂತ ಸಂಭವಿಸಿದ್ದು, ಜನವಸತಿ ಪ್ರದೇಶದ ಮೇಲೆ ಆಕಸ್ಮಿಕವಾಗಿ 8 ಬಾಂಬ್ ಹಾಕಲಾಗಿದೆ. ಈ ಘಟನೆಯ ಬಗ್ಗೆ ಜನ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ, ಆದ್ರೆ ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ಸುಮಾರು 15 ಜನ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕೆಎಫ್-16 ಫೈಟರ್ ಜೆಟ್ ಈ ರೀತಿ ಎಂಕೆ-82 ಬಾಂಬ್ ಬೀಳಿಸಿಬಿಟ್ಟಿದೆ. ಸಿಯೋಲ್ ವಾಯುಪಡೆ ಈ ಬಗ್ಗೆ ಮಾಹಿತಿ ನೀಡಿದ್ದು, ಗಾಯಗೊಂಡ ಜನರನ್ನ ಆಸ್ಪತ್ರೆಗೆ ಸ್ಥಳಾಂತರ ಮಾಡಿ ಪರಿಹಾರ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಉತ್ತರ ಕೊರಿಯಾ ಸಮೀಪದಲ್ಲೇ ಘಟನೆ
ಘಟನೆಗೆ ಸ್ಪಷ್ಟ ಕಾರಣವು ಇನ್ನೂ ತಿಳಿದುಬಂದಿಲ್ಲ, ಹೀಗಾಗಿ ಅಪಘಾತ ಹೇಗೆ ಸಂಭವಿಸಿದೆ? ಎಂಬ ಬಗ್ಗೆ ತನಿಖೆ ನಡೆಸಲು ವಿಶೇಷ ಸಮಿತಿಯ ರಚನೆ ಕೂಡ ಮಾಡಲು ನಿರ್ಧರಿಸಲಾಗಿದೆ. ಹಾಗೇ ಮನೆ ಕಳೆದುಕೊಂಡ ಜನರಿಗೆ ಸ್ಥಳೀಯ ಮಟ್ಟದಲ್ಲಿ ವಸತಿ ವ್ಯವಸ್ಥೆ ಕೂಡ ಮಾಡಿದ್ದು, ಈ ಬಗ್ಗೆ ದಕ್ಷಿಣ ಕೊರಿಯಾ ವಾಯುಪಡೆ ಕ್ಷಮೆ ಕೇಳಿದೆ. ಹಾಗೇ ಮತ್ತೊಂದು ಆತಂಕದ ವಿಚಾರ ಏನೆಂದರೆ ಉತ್ತರ ಕೊರಿಯಾ ಗಡಿಗೆ ಸಮೀಪವಿರುವ ನಗರ ಪೋಚಿಯಾನ್‌ನಲ್ಲಿ ಈ ಘಟನೆಯು ಸಂಭವಿಸಿದ್ದು, ಸ್ವಲ್ಪದರಲ್ಲೇ ಬಹುದೊಡ್ಡ ಹಾನಿ ತಪ್ಪಿದೆ.
ದ.ಕೊರಿಯಾ & ಉ.ಕೊರಿಯಾ ವಾರ್?
ಜಾಗತಿಕ ಮಟ್ಟದಲ್ಲಿ ಮತ್ತೊಂದು ಯುದ್ಧಕ್ಕೆ ವೇದಿಕೆ ಸಿದ್ಧವಾಗಿದ್ದು, ದಕ್ಷಿಣ ಕೊರಿಯಾ & ಉತ್ತರ ಕೊರಿಯಾ ನಡುವೆ ಬೆಂಕಿ ಹೊತ್ತಿಕೊಂಡಿದೆ. ಈಗಾಗಲೇ ಅಮೆರಿಕದ ಯುದ್ಧ ವಿಮಾನ ಸೇರಿದಂತೆ ಯುದ್ಧ ನೌಕೆಗಳು ದಕ್ಷಿಣ ಕೊರಿಯಾಗೆ ಬಂದಿದ್ದು, ಯಾವ ಕ್ಷಣದಲ್ಲಿ ಯುದ್ಧವು ಶುರುವಾಗುತ್ತೋ? ಎಂಬ ಟೆನ್ಷನ್ ಕಾಡುತ್ತಿದೆ. ಇದು ಮಾತ್ರವಲ್ಲ, ಮತ್ತೊಂದು ಕಡೆಯಲ್ಲಿ ಉತ್ತರ ಕೊರಿಯಾ ಕೂಡ ತನ್ನಲ್ಲಿ ಇರುವ ಪರಮಾಣು ಅಸ್ತ್ರಗಳನ್ನು ಸಿದ್ಧಗೊಳಿಸಲು ಸೂಚನೆ ನೀಡಿದೆ. ಇಂತಹ ಸಮಯದಲ್ಲೇ ದಕ್ಷಿಣ ಕೊರಿಯಾ ಯುದ್ಧ ವಿಮಾನ ಎಡವಟ್ಟು ಮಾಡಿ ಗಮನ ಸೆಳೆದಿದೆ. ಎರಡೂ ದೇಶಗಳ ನಡುವೆ ಯುದ್ಧ ಶುರುವಾದರೆ ಮತ್ತೊಂದು ಜಾಗತಿಕ ಆರ್ಥಿಕ ಕುಸಿತ ಗ್ಯಾರಂಟಿ ಅಂತಿದ್ದಾರೆ ತಜ್ಞರು.












Click it and Unblock the Notifications