3ನೇ ಮಹಾಯುದ್ಧ: ಅಯ್ಯಯ್ಯೋ ಕ್ರೂರ ಸರ್ವಾಧಿಕಾರಿ ಏನಿದು ನಿನ್ನ ಲೀಲೆ?
ಜಗತ್ತು ಎಷ್ಟೇ ಬೇಡ ಬೇಡ ಅಂದ್ರೂ ಮತ್ತೊಂದು ಮಹಾಯುದ್ಧ ಮನುಷ್ಯನನ್ನು ಇದೀಗ ಕೈಬೀಸಿ ಕರೆಯುತ್ತಿದೆ. ಅದರಲ್ಲೂ 1ನೇ ಮತ್ತು 2ನೇ ಮಹಾಯುದ್ಧದ ಮೂಲಕ ಮನುಷ್ಯ ಕೋಟ್ಯಂತರ ಜೀವಗಳನ್ನು ನಾಶ ಮಾಡಿದ್ದ. ಹೀಗಾಗಿ ಜಗತ್ತು ಮತ್ತೊಂದು ಮಹಾಯುದ್ಧ ನೋಡಬಾರದು ಅಂತಾ ಸಾಕಷ್ಟು ಪ್ರಯತ್ನಗಳನ್ನ ಮಾಡಲಾಗುತ್ತಿದೆ. 3ನೇ ಮಹಾಯುದ್ಧ ತಪ್ಪಿಸಲು ಏನೆಲ್ಲಾ ಪ್ರಯತ್ನ ಮಾಡಿದರೂ ಅದು ಪ್ರಯೋಜನ ಆಗುತ್ತಿಲ್ಲ.
ಇಷ್ಟೆಲ್ಲಾ ಭಯದ ವಾತಾವರಣ ನಿರ್ಮಾಣ ಆಗಲು ಕಾರಣವೆ ರಷ್ಯಾ vs ಉಕ್ರೇನ್ ವಾರ್ ಹಾಗೂ ಇಸ್ರೇಲ್ vs ಹಮಾಸ್ ಯುದ್ಧ. ಈ ಎರಡೂ ಯುದ್ಧಗಳು, ಈಗ ಜಗತ್ತಿನಾದ್ಯಂತ ಭಯ ಹುಟ್ಟುಹಾಕಿವೆ. ಹೀಗಿದ್ದಾಗ ತೆಪ್ಪಗೆ ಕೂತುಕೊಳ್ಳದ ಉತ್ತರ ಕೊರಿಯಾ ಸರ್ವಾಧಿಕಾರಿ, ಉಗ್ರರ ಜೊತೆಗೆ ಕೈಜೋಡಿಸಿದ್ದಾನೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಅದರಲ್ಲೂ ಇಸ್ರೇಲ್ ವಿರುದ್ಧ ಡೆಡ್ಲಿ ಅಟ್ಯಾಕ್ ನಡೆಸುತ್ತಿರುವ ಹಮಾಸ್ ಉಗ್ರರಿಗೆ ಕಿಮ್ ಜಾಂಗ್ ಉನ್ ಗ್ಯಾಂಗ್ ವೆಪನ್ಸ್ ಅಂದ್ರೆ ಶಸ್ತ್ರಾಸ್ತ್ರಗಳನ್ನು ಸಪ್ಲೈ ಮಾಡುತ್ತಿದೆಯಂತೆ.

ಅಯ್ಯಯ್ಯೋ ಸರ್ವಾಧಿಕಾರಿ ಏನಿದು?
ಈ ಕಿಮ್ ಜಾಂಗ್ ಉನ್ ಎಂಬ ಸರ್ವಾಧಿಕಾರಿ ಇದ್ದಾನಲ್ಲ, ಈತ ಮಾಡುವ ಕಿತಾಪತಿಗಳು ಒಂದೆರಡಲ್ಲ. ಮಾಡಬಾರದ್ದನ್ನ ಮಾಡಿ ಜಗತ್ತು ಪರದಾಡುವಂತೆ ಮಾಡುತ್ತಾನೆ. ಹೀಗಾಗಿ ಕಿಮ್ ಜಾಂಗ್ ಉನ್ ಕಂಡರೆ ಯಾರಿಗೂ ಆಗಲ್ಲ. ಅದರಲ್ಲೂ ಅಮೆರಿಕ & ಕಿಮ್ ಜಾಂಗ್ ಉನ್ ನಡುವೆ ಘೋರ ಮಾತಿನ ಯುದ್ಧವೇ ನಡೆಯುತ್ತಿದೆ. ಅಮೆರಿಕ ವಿರುದ್ಧ ಪದೇ ಪದೇ ಕಿಮ್ ಜಾಂಗ್ ಉನ್ ರೊಚ್ಚಿಗೆದ್ದಿದ್ದಾನೆ. ಕಿಮ್ ಗ್ಯಾಂಗ್ ಕಳೆದ ವರ್ಷ ನೂರಾರು ಕ್ಷಿಪಣಿಗಳ ಪ್ರಯೋಗ ನಡೆಸಿತ್ತು. ಈಗ ನೋಡಿದರೆ, ಉಕ್ರೇನ್ ವಿರುದ್ಧ ರಷ್ಯಾಗೆ ಸಹಾಯ ಮಾಡುವ ಜೊತೆಗೆ ಇದೀಗ ಇಸ್ರೇಲ್ ವಿರುದ್ಧ ಹಮಾಸ್‌ಗೂ ಸಹಾಯ ಮಾಡುತ್ತಿದ್ದಾನಂತೆ ಕಿಮ್.
ರಾಕೆಟ್ ಕೊಟ್ಟನಾ ಸರ್ವಾಧಿಕಾರಿ?
ಇದೀಗ ದಕ್ಷಿಣ ಕೊರಿಯಾ ಗುಪ್ತಚರ ಇಲಾಖೆ ಮಾಡಿರುವ ಆರೋಪದ ಪ್ರಕಾರ, ಹಮಾಸ್ ಉಗ್ರರು ಇಸ್ರೇಲ್ ಸೇನೆ ವಿರುದ್ಧ ಹೋರಾಡಲು ಉತ್ತರ ಕೊರಿಯಾದಲ್ಲಿ ತಯಾರಿಸಿದ ಅಸ್ತ್ರ ಅಂದ್ರೆ ವೆಪನ್ಸ್ ಬಳಸುತ್ತಿದ್ದಾರಂತೆ. ಇದಕ್ಕೆ ಸಾಕ್ಷಿ ಎನ್ನುವಂತೆ ಉತ್ತರ ಕೊರಿಯಾದಲ್ಲಿಯೇ ತಯಾರಿಸಿದ ವಿವಿಧ ಶಸ್ತ್ರಾಸ್ತ್ರಗಳ ಅವಶೇಷ ಪತ್ತೆಯಾಗಿದೆ ಎನ್ನಲಾಗಿದೆ. ಹೀಗಾಗಿ ಇಸ್ರೇಲ್ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸಮಯದಲ್ಲೇ, ದಕ್ಷಿಣ ಕೊರಿಯಾ ಹೊಸ ಬಾಂಬ್ ಸಿಡಿಸಿದೆ. ಕಿಮ್ ಜಾಂಗ್ ಉನ್ ವಿರುದ್ಧ ಗಂಭೀರ ಆರೋಪ ಮಾಡಿದೆ.

ಒಟ್ನಲ್ಲಿ ರಷ್ಯಾ & ಉಕ್ರೇನ್ ಯುದ್ಧದ ರೀತಿಯೇ ಹಮಾಸ್ & ಇಸ್ರೇಲ್ ವಾರ್ ಕೂಡ ಈಗ ನಿಲ್ಲುವಂತೆ ಕಾಣುತ್ತಿಲ್ಲ. ಇಷ್ಟೆಲ್ಲಾ ಸಾಲದು ಅಂತಾ, ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆ & ಇರಾನ್ ಬೆಂಬಲಿತ ಉಗ್ರರ ಗುಂಪುಗಳು ಹಮಾಸ್ ಜೊತೆಗೆ ಮೈತ್ರಿ ಮಾಡಿಕೊಂಡಿವೆ. ಹೀಗಾಗಿ ಫೈಟಿಂಗ್ ಮತ್ತಷ್ಟು ಜೋರಾಗುತ್ತಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಇನ್ನಷ್ಟು ಭೀಕರವಾಗಿ, ಸಾವಿನ ಸಂಖ್ಯೆ ಹೆಚ್ಚಾಗುವ ಅಪಾಯ ಇದೆ. ಈವರೆಗೆ ಗಾಜಾದ ಸುಮಾರು, 23 ಸಾವಿರ ನಾಗರಿಕರು ಈ ಯುದ್ಧದಲ್ಲಿ ಬಲಿಯಾಗಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲದರ ಮಧ್ಯೆ ಸರ್ವಾಧಿಕಾರಿ ಕಿಮ್ ವಿರುದ್ಧವೂ ಗಂಭೀರ ಆರೋಪ ಕೇಳಿಬಂದಿದೆ.












Click it and Unblock the Notifications