ವಿದ್ಯಾರ್ಥಿನಿ ವೇತನ ಬೇಕಾ? ಹಾಗಿದ್ರೆ ಕನ್ಯತ್ವ ಉಳಿಸಿಕೊಳ್ಳಿ!

Posted By:
Subscribe to Oneindia Kannada

ಡರ್ಬನ್, ಜನವರಿ 25 : ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ಎಂಬ ಕೂಗು ಎಲ್ಲಡೆ ಕೇಳಿಬರುತ್ತಿದೆ. ದಕ್ಷಿಣ ಆಫ್ರಿಕಾದ ವಿಶ್ವವಿದ್ಯಾಲಯವೊಂದು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಕನ್ಯತ್ವ ಹೊಂದಿರುವವರಿಗೆ ವಿಶೇಷ ವಿದ್ಯಾರ್ಥಿ ವೇತನವನ್ನು ಘೋಷಿಸಿ, ವಿವಿಧ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ದಕ್ಷಿಣ ಆಫ್ರಿಕಾದ ಡರ್ಬನ್ ಸಮೀಪದಲ್ಲಿರುವ ವಿವಿ ಯುವತಿಯರು ವಿಶ್ವವಿದ್ಯಾಲಯದ ಶಿಕ್ಷಣ ಮುಗಿಯುವ ತನಕ ಕನ್ಯತ್ವ ಉಳಿಸಿಕೊಂಡರೆ ವಿದ್ಯಾರ್ಥಿ ವೇತನ ಕೊಡುವುದಾಗಿ ಹೇಳಿದೆ. ಕನ್ಯತ್ವ ಉಳಿಸಿಕೊಂಡಿರುವ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿ ವಿವಾದ ಹುಟ್ಟು ಹಾಕಿದೆ. [ಇಂಜಿನಿಯರಿಂಗ್ ಪದವಿಧರರ ವ್ಯಥೆ ಬಿಚ್ಚಿಟ್ಟ ಸಮೀಕ್ಷೆ]

students

ಕೆಲವೊಂದು ಸಂಘಟನೆಗಳು ಇದೊಂದು ಕಾನೂನು ಬಾಹಿರ ನಿರ್ಧಾರ ಎಂದು ಕಿಡಿ ಕಾರಿವೆ. ಯುವತಿಯರು ದೈಹಿಕ ಸಂಪರ್ಕದಿಂದ ದೂರವಿದ್ದು, ಓದಿನ ಕಡೆ ಹೆಚ್ಚುಗಮನ ನೀಡುವಂತೆ ಮಾಡಲು ಈ ವಿಶೇಷ ವೇತನ ನೀಡುವ ಯೋಜನೆಯನ್ನು ಈ ವರ್ಷ ಜಾರಿಗೆ ತರಲಾಗಿದೆ ಎಂದು ವಿವಿ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. [ಮಹಿಳಾ ದೌರ್ಜನ್ಯ ವಿರುದ್ದ ದನಿಯಾದ ವಾಮಾ ಬಲ್ದೋಟ]

ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಿದ ಯುವತಿಯರು ರಜೆ ಮುಗಿಸಿ ಬಂದ ಬಳಿಕ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ಅವರು ಕನ್ಯತ್ವ ಕಳೆದುಕೊಂಡಿದ್ದರೆ, ವೇತನವನ್ನು ಹಿಂಪಡೆಯಲಾಗುತ್ತದೆ ಎಂದು ಹೇಳಿರುವುದು ವಿದ್ಯಾರ್ಥಿ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಮಹಿಳೆಯರ ಮೇಲಿನ ಶೋಷಣೆಯನ್ನು ಖಂಡಿಸುವ ಪೋವಾ ಸಂಘಟನೆ ಈ ನಿರ್ಧಾರವನ್ನು ಖಂಡಿಸಿದ್ದು, ವಿದ್ಯಾರ್ಥಿನಿಯರಿಗೆ ಕನ್ಯತ್ವ ಪರೀಕ್ಷೆ ಮಾಡುವುದು ಅವರ ಖಾಸಗಿ ತನಕ್ಕೆ ಧಕ್ಕೆ ತರುವ ವಿಚಾರವಾಗಿದೆ ಎಂದು ಹೇಳಿದೆ.

ಭಾರತದಲ್ಲೂ ಕನ್ಯತ್ವದ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿವೆ. ಋತುಮತಿಯಾದ ಮಹಿಳೆಯರು ದೇವಾಲಯ ಪ್ರವೇಶ ಮಾಡಬಾರದು ಎಂದು ಹಿಂದೊಮ್ಮೆ ಹೇಳಿಕೆ ನೀಡಿದ್ದ ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರಯಾರ್ ಗೋಪಾಲಕೃಷ್ಣನ್‌ ವಿರುದ್ಧ ಮಹಿಳೆಯರು ತಿರುಗಿ ಬಿದ್ದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ 'ಹ್ಯಾಪಿ ಟು ಬ್ಲೀಡ್ ' ಎಂಬ ಅಭಿಯಾನವೇ ಆರಂಭವಾಗಿತ್ತು. [ಪಿಟಿಐ ಚಿತ್ರ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A South African region has launched a grant scheme for girls who remain virgins throughout their university studies. News of the scheme sparked outrage from civil society groups, with one women’s association branding it unconstitutional.
Please Wait while comments are loading...