ಫುಟ್ಬಾಲ್ ವಿಶ್ವಕಪ್: ಸೋನಿಗಿದೆ ಭರ್ಜರಿ ನಿರೀಕ್ಷೆ

ಮುಂಬೈ, ಮೇ.30: ಬ್ರೆಜಿಲ್ ನಲ್ಲಿ ನಡೆಯಲಿರುವ 2014ರ ಫೀಫಾ ವಿಶ್ವಕಪ್ ಗೆ ಭರ್ಜರಿ ತಯಾರಿ ನಡೆದಿದೆ. ಈ ನಡುವೆ ಇಂಡಿಯನ್ ಪ್ರಿಮಿಯರ್ ಲೀಗ್ ನಂತರ ಫುಟ್ಬಾಲ್ ವಿಶ್ವಕಪ್ ಪಂದ್ಯಗಳ ನೇರ ಪ್ರಸಾರದ ಹಕ್ಕನ್ನು ಸೋನಿ ಸಿಕ್ಸ್ ಚಾನೆಲ್ ಪಡೆದುಕೊಂಡಿದ್ದು, ಜಾಹೀರಾತುಗಳ ಮೂಲಕ ಸುಮಾರು 200 ಕೋಟಿ ರು ಆದಾಯ ಗಳಿಕೆ ನಿರೀಕ್ಷೆಯಲ್ಲಿದೆ.

10 ಸೆಕೆಂಡು ಜಾಹೀರಾತಿಗೆ 2.5 ಲಕ್ಷರು ನಂತೆ ಆಡ್ ಸ್ಪಾಟ್ ಮಾರಾಟ ಮಾಡುತ್ತಿರುವ ಸೋನಿ ಸಿಕ್ಸ್ ಸುಮಾರು 64 ಪಂದ್ಯಗಳ ನಂತರ ಜಾಹೀರಾತುಗಳಿಂದ 200 ಕೋಟಿ ಗೂ ಅಧಿಕ ಹಣ ಗಳಿಸುವ ನಿರೀಕ್ಷೆಯಲ್ಲಿದೆ ಎಂದು ಸೋನಿ ಸಿಕ್ಸ್ ಮಾಲಿಕತ್ವ ಸಂಸ್ಥೆ ಮಲ್ಟಿ ಸ್ಕ್ರೀನ್ ಮೀಡಿಯಾದ ನೆಟ್ವರ್ಕ್ ಸೇಲ್ಸ್ ಅಧ್ಯಕ್ಷ ರೋಹಿತ್ ಗುಪ್ತಾ ಹೇಳಿದ್ದಾರೆ.

Sony Six sees ₹200-cr ad revenue from football World Cup

ಐಪಿಎಲ್ ಪಂದ್ಯಗಳಿಗೆ ಹೋಲಿಕೆ ಮಾಡಿದರೆ ಫುಟ್ಬಾಲ್ ಪಂದ್ಯಗಳಲ್ಲಿ ಹೆಚ್ಚಿನ ಜಾಹೀರಾತು ತುಂಬುವುದು ಕಷ್ಟಕರ. ಒಂದು ಐಪಿಎಲ್ ಪಂದ್ಯಕ್ಕೆ 2,400 ಸೆಕೆಂಡುಗಳಷ್ಟು ಜಾಹೀರಾತು ಅವಕಾಶ ಸಿಕ್ಕತೆ ಫೀಫಾ ಪಂದ್ಯಗಳಲ್ಲಿ 800 ಸೆಕಂಡುಗಳು ಮಾತ್ರ ಸಿಗಲಿದೆ. ಪ್ರಾಯೋಜಕತ್ವ ಸಂಸ್ಥೆಗಳಿಂದ ಕನಿಷ್ಠ 18 ರಿಂದ 20 ಕೋಟಿ ರು ಪಡೆಯುವ ಯೋಜನೆಯನ್ನು ಸೋನಿ ಹಾಕಿಕೊಂಡಿದೆ.

ಐಪಿಎಲ್ 7 ಇದುವರೆವಿಗೂ 225 ಮಿಲಿಯನ್ ವೀಕ್ಷಕರನ್ನು ತಲುಪಿದೆ. ಇದರ ಶೇ 60ರಷ್ಟು ವೀಕ್ಷಕರು ಫೀಫಾ ವಿಶ್ವಕಪ್ ನೋಡಿದರೆ ಸಾಕು ಎನ್ನುತ್ತಿದ್ದಾರೆ ರೋಹಿತ್, ಜೋಲೋ ಮೊಬೈಲ್ ಸದ್ಯಕ್ಕೆ ಪ್ರಯೋಜಕತ್ವಕ್ಕೆ ಮುಂದೆ ಬಂದಿದೆ. ಜೂ.12 ರಿಂದ ಜುಲೈ 13 ರ ತನಕ ಪಂದ್ಯಾವಳಿಗಳು ನಡೆಯಲಿದ್ದು,

ಭಾರತೀಯ ಕಾಲಮಾನ ಪ್ರಕಾರ ರಾತ್ರಿ ಹಾಗೂ ತಡರಾತ್ರಿ ಮಾತ್ರ ಪಂದ್ಯ ವೀಕ್ಷಿಸಲು ಸಾಧ್ಯ ಹೀಗಾಗಿ ಜಾಹೀರಾತು ನೀಡಲು ಹಲವು ಸಂಸ್ಥೆಗಳು ಹಿಂದೇಟು ಹಾಕುತ್ತಿವೆ. ಇಂಥ ಪರಿಸ್ಥಿತಿಯಲ್ಲೂ ಸೋನಿ ಲಾಭ ಮಾಡುವ ಯೋಜನೆ ಫಲಕೊಡುವುದೇ ಕಾದು ನೋಡಬೇಕಿದೆ. ಫೀಫಾ ಜತೆ ಪ್ರಾಯೋಜಕರಾಗಿ ಸೋನಿ ಅಲ್ಲದೆ ಅಡಿಡಾಸ್, ಕೋಕಾ ಕೋಲಾ, ಹ್ಯುಂಡೈ, ಕಿಯಾ ಮೋಟರ್ಸ್, ಎಮಿರೈಟ್ಸ್, ವೀಸಾ, ಕ್ಯಾಸ್ಟ್ರಾಲ್, ಜಾನ್ಸನ್ ಅಂಡ್ ಜಾನ್ಸನ್, ಮೆಕ್ ಡೋನಾಲ್ಡ್,..ಮುಂತಾದ ಕಂಪನಿಗಳಿವೆ. [ಫೀಫಾ ವಿಶ್ವಕಪ್ 2010 ಮೆಲುಕು]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+