ಸೂರ್ಯ ಗ್ರಹಣ 2017: ಚಿತ್ರಗಳಲ್ಲಿ ಈ ಶತಮಾನದ ಅದ್ಭುತ!

By: ವಿಕಾಸ್ ನಂಜಪ್ಪ
Subscribe to Oneindia Kannada

ಅದು ಬೆಳಗ್ಗೆ 10:15 ರ ಸಮಯ(ಅಮೆರಿಕ ಕಾಲಮಾನದ ಪ್ರಕಾರ). ಎಲ್ಲೆಡೆ ಬೆಳಕು ಚೆಲ್ಲುತ್ತಿದ್ದ ಸೂರ್ಯ ಕೊಂಚ ಕೊಂಚವೇ ಮಂಕಾಗುತ್ತ, ಇದ್ದಕ್ಕಿದ್ದಂತೆ ಕಾಣೆಯಾಗಿಬಿಟ್ಟಿದ್ದ! ಬೆಳಗ್ಗಿನ 10:15 ಕ್ಕೇ ಕತ್ತಲಾವರಿಸಿ ಎಲ್ಲವೂ ಅದಲು ಬದಲಾಗಿಬಿಟ್ಟಿತ್ತು! ಇದು ಖಗ್ರಾಸ ಸೂರ್ಯಗ್ರಹಣವೆಂಬ ಖಗೋಳ ವಿಸ್ಮಯ ಮಾಡಿದ ಮೋಡಿ!

1918 ರ ನಂತರ ಅಮೆರಿಕನ್ನರು ನೋಡಿದ ಸೂರ್ಯಗ್ರಹಣ ಇದು. ನಿನ್ನೆ (ಆಗಸ್ಟ್ 21) ಅಮೆರಿಕದ ಹಲವು ಪ್ರದೇಶಗಳಲ್ಲಿ ಕಾಣಿಸಿಕೊಂಡ ಈ ಸೂರ್ಯಗ್ರಹಣವನ್ನು ಲಕ್ಷಾಂತರ ಅಮೆರಿಕನ್ನರು ಸುರಕ್ಷಾ ಕನ್ನಡಕ, ದೂರದರ್ಶಕದ ಮೂಲಕ ನೋಡಿ ಆನಂದಿಸಿದರು.

ಖಗ್ರಾಸ ಸೂರ್ಯಗ್ರಹಣ ವೀಕ್ಷಿಸಿ ಕುಣಿದು ಕುಪ್ಪಳಿಸಿದ ಜನತೆ

ಎರಡು ಗಂಟೆಗಳ ಅವಧಿಯಲ್ಲಿ ಓರಾಗಾನ್ ನಿಂದ ದಕ್ಷಿಣ ಕ್ಯಾಲಿಫೋರ್ನಿಯಾವರೆಗೆ 14 ರಾಜ್ಯಗಳಲ್ಲಿ ಈ ಖಗ್ರಾಸ ಸೂರ್ಯ ಗ್ರಹಣ ಕಂಡುಬಂತು. ಎರಡು ನಿಮಿಷಗಳ ಕಾಲ ಸೂರ್ಯ ಕಾಣದೆ, ಕತ್ತಲಾವರಿಸಿತ್ತು.

ಸೂರ್ಯ ಗ್ರಹಣ ಆಚರಣೆ ಇಲ್ಲ, ಆದರೆ ಈ ರಾಶಿಯವರ ಮೇಲೆ ಪ್ರಭಾವ

ಖಗ್ರಾಸ ಸೂರ್ಯಗ್ರಹಣದ ಸಂಪೂರ್ಣ ದೃಶ್ಯವನ್ನು ನಾಸಾ(ಅಮೆರಿಕಾ ಬಾಹ್ಯಾಕಾಶ ಸಂಸ್ಥೆ) ನೇರಪ್ರಸಾರ ಮಾಡಿ ಈ ವಿಸ್ಮಯದ ಅದ್ಭುತ ಚಿತ್ರಗಳನ್ನು ಜನರಿಗೆ ತಲುಪಿಸಿದೆ. ನಾಸಾ ನೀಡಿ ಆ ಅದ್ಭುತ ಚಿತ್ರಗಳು ನಿಮಗಾಗಿ ಇಲ್ಲಿವೆ. (ಚಿತ್ರ ಕೃಪೆ: ನಾಸಾ)

1918 ರಲ್ಲಿ ಕಂಡಿದ್ದ ಗ್ರಹಣ

1918 ರಲ್ಲಿ ಕಂಡಿದ್ದ ಗ್ರಹಣ

ಅಮೆರಿಕ ಖಂಡದಲ್ಲಿ 1918 ರಲ್ಲಿ ಸೂರ್ಯಗ್ರಹಣ ಕಾಣಿಸಿಕೊಂಡಿತ್ತು. 1979, ಫೆಬ್ರವರಿ 26ರಲ್ಲಿ ಕಾಣಿಸಿಕೊಂಡಿದ್ದ ಖಗ್ರಾಸ ಸೂರ್ಯಗ್ರಹಣದ ನಂತರ, ಅಂದರೆ ಸುಮಾರು 40 ವರ್ಷಗಳ ನಮತರ ಮೊದಲ ಬಾರಿಗೆ ಅಮೆರಿಕನ್ನರು ಖಗ್ರಾಸ ಸೂರ್ಯಗ್ರಹಣಕ್ಕೆ ಸಾಕ್ಷಿಯಾದರು.

ಗೂಗಲ್ ನಲ್ಲೂ ಟಾಪ್ ಟ್ರೆಂಡ್

ಗೂಗಲ್ ನಲ್ಲೂ ಟಾಪ್ ಟ್ರೆಂಡ್

ಖಗ್ರಾಸ ಸೂರ್ಯಗ್ರಹಣಕ್ಕೆ ಸಂಬಂಧಿಸಿದ ಸುದ್ದಿಯ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಪಡೆಯಲು ಲಕ್ಷಾಂತರ ಜನರು ಗೂಗಲ್ ನಲ್ಲಿ ಹುಡುಕಾಟ ನಡೆಸುತ್ತಿದ್ದರು. ನಿನ್ನೆ ಬೆಳಿಗ್ಗೆಯಿಂದ ಸಂಜೆಯವರೆಗೂ ಖಗ್ರಾಸ ಸೂರ್ಯಗ್ರಹಣ, ಗೂಗಲ್ ನಲ್ಲಿ ಟಾಪ್ ಟ್ರೆಂಡಿಂಗ್ ವಿಷಯವಾಗಿತ್ತು.

ಅಪರೂಪದ ಖಗೋಳ ದೃಶ್ಯ

ಅಪರೂಪದ ಖಗೋಳ ದೃಶ್ಯ

ಮನುಕುಲದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಖಗೋಳದ ವಿಸ್ಮಯ ದೃಶ್ಯ ಇದು. ಕೋಟಿ ಕೋಟಿ ಜನ ಇದರ ನೇರ ಪ್ರಸಾರವನ್ನು ಮಾಧ್ಯಮಗಳಲ್ಲಿ ನೋಡಿದರೆ, ಖಗ್ರಾಸ ಸೂರ್ಯಗ್ರಹಣ ಕಾಣಸಿಗುವ ಪ್ರದೇಶದ 70 ಮೈಲಿ ಜಾಗದಲ್ಲಿ 12 ದಶಲಕ್ಷಕ್ಕೂ ಹೆಚ್ಚು ಜನ ಇದನ್ನು ವೀಕ್ಷಿಸಿದ್ದು ವಿಶೇಷ!

ಖಗ್ರಾಸವಾಗಿದ್ದು ಯಾವಾಗ?

ಖಗ್ರಾಸವಾಗಿದ್ದು ಯಾವಾಗ?

ಅಮೆರಿಕ ಕಾಲಮಾನದ ಪ್ರಕಾರ ಬೆಳಿಗ್ಗೆ 10:15ರ ಸಮಯಕ್ಕೆ ಖಗ್ರಾಸ ಸೂರ್ಯಗ್ರಹಣ ಸಂಭವಿಸಿದ್ದು, ಸಂಪೂರ್ಣ ಕತ್ತಲು ಆವರಿಸಿತ್ತು. ನಂತರ ಗ್ರಹಣ ಕ್ಷೀಣಿಸುತ್ತಾ ಮಧ್ಯಾಹ್ನ 2:49 ಖಗೋಳ ವಿಸ್ಮಯ ಮುಕ್ತಾಯಗೊಂಡಿದೆ.

ಚಂದ್ರನ ನೆರಳು ಭೂಮಿಯ ಮೇಲೆ!

ಚಂದ್ರನ ನೆರಳು ಭೂಮಿಯ ಮೇಲೆ!

ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ಸೂರ್ಯನ ಬೆಳಕು ಚಂದ್ರನಿಂದ ತಡೆಯಲ್ಪಟ್ಟು, ಭೂಮಿಗೆ ನೆರಳು ಕಾಣಿಸುವ ಪ್ರಕ್ರಿಯೆಯೇ ಸೂರ್ಯಗ್ರಹಣ.

ಸೂರ್ಯಂಗೂ ಬಂತು ಕೋಡು!

ಸೂರ್ಯಂಗೂ ಬಂತು ಕೋಡು!

ಸೂರ್ಯನ ಎದುರು ಚಂದ್ರ ಬಂದು, ಕೊಂಚವೇ ದೂರ ಸರಿದಾಗ ಕೋಡಿನಂತೆ ಕಂಡ ಸೂರ್ಯನ ಈ ಚಿತ್ರ ಅಮೋಘವೇ ಸರಿ!

ಬೆಂಕಿ ಉಂಡೆಯ ಮೇಲೆ ಮಣಿಗಳ ಮಾಲೆ!

ಬೆಂಕಿ ಉಂಡೆಯ ಮೇಲೆ ಮಣಿಗಳ ಮಾಲೆ!

ಸೂರ್ಯ ಗ್ರಹಣದ ಕೊನೆಯ ಕ್ಷಣಗಳಲ್ಲಿ ಚಂದ್ರ ಸೂರ್ಯನಿಂದ ದೂರ ಸರಿಯುತ್ತಿರುವಾಗ ಬೆಂಕಿಯುಂಡೆಯ ಮೇಲೆ ಮಣಿಪೋಣಿಸಿದಂತೆ ಕಾಣುವ ದೃಶ್ಯ ಇದು.

ಅತಿ ನೇರಳೆ ಕಿರಣ

ಅತಿ ನೇರಳೆ ಕಿರಣ

ಸೂರ್ಯನಿಂದ ಚಂದ್ರ ಹಂತ ಹಂತವಾಗಿ ಸರಿಯುತ್ತಿರುವಾಗ ಕಂಡ ಅತಿ ನೇರಳೆ ಕಿರಣದ ದೃಶ್ಯ.

ಶತಮಾನದ ಖಗೋಳ ವಿಸ್ಮಯ

ಶತಮಾನದ ಖಗೋಳ ವಿಸ್ಮಯ

ಸಂಪೂರ್ಣ ಸೂರ್ಯಗ್ರಹಣ ಸಂಭವಿಸಿದಾಗ ಕಂಡ ಸೂರ್ಯನ ಅಪರೂಪದ ದೃಶ್ಯ ಇದು. ಇದೇ ಈ ಶತಮಾನದ ಅದ್ಭುತ ಖಗೋಳ ವಿಸ್ಮಯದ ದೃಶ್ಯ.

ಕೊನೇ ಕ್ಷಣದ ಕೌತುಕ

ಕೊನೇ ಕ್ಷಣದ ಕೌತುಕ

ಚಂದ್ರ ಸೂರ್ಯನಿಂದ ಮರೆಯಾಗುವ ಕೊನೆಯ ಕ್ಷಣ ಕಂಡ ಕೌತುಕದ, ಅಪರೂಪದ ಸೂರ್ಯನ ಚಿತ್ರ ಇದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Solar Eclipse 2017 took place on Monday and it sure was a spectacular event. The moon blacked out the sun marking the first total solar eclipse in a century. Millions of Americans gathered to look at the sky and watched the specter through protective glasses, telescopes and cameras. The eclipse drew cheers from the crowds. NASA covered the entire event live and produced some fantastic pictures of the marvel.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ