ಮರಣೋತ್ತರ ಪರೀಕ್ಷೆಯ ವೇಳೆ ಮೃತ ದೇಹದಿಂದ ಹೊರಬಂದ ಹಾವು

ಮರಣೋತ್ತರ ಪರೀಕ್ಷೆಯ ವೇಳೆ ಮೃತ ದೇಹದಿಂದ ಹಾವೊಂದು ಹೊರಬಂದ ವಿಚಿತ್ರ ಘಟನೆ ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ನಡೆದಿದೆ. ಶವಪರೀಕ್ಷೆ ತಂತ್ರಜ್ಞರು ಮೃತದೇಹದೊಳಗೆ ಜೀವಂತ ಹಾವನ್ನು ಪತ್ತೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಶವಪರೀಕ್ಷೆ ತಂತ್ರಜ್ಞರಾದ ಜೆಸ್ಸಿಕಾ ಲೋಗನ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಜೆಸ್ಸಿಕಾ ಲೋಗನ್ ಒಂಬತ್ತು ವರ್ಷಗಳಿಂದ ಶವಪರೀಕ್ಷೆ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಭಯಾನಕ ಅನುಭವವನ್ನು ಹಂಚಿಕೊಂಡ ಅವರು, ಮನುಷ್ಯನ ತೊಡೆಯಲ್ಲಿ ಜೀವಂತ ಹಾವನ್ನು ಕಂಡುಕೊಂಡ ಸಮಯವನ್ನು ನೆನಪಿಸಿಕೊಂಡರು.

ಚರಂಡಿಯಲ್ಲಿ ಪತ್ತೆಯಾದ ಶವವೊಂದು ಮರಣೋತ್ತರ ಪರೀಕ್ಷೆಗೆ ಬಂದಿತ್ತು. ಮೃತರ ದೇಹವು ತುಂಬಾ ಕೆಟ್ಟ ಸ್ಥಿತಿಯಲ್ಲಿತ್ತು. ವ್ಯಕ್ತಿಯ ಸಾವಿನ ನಂತರ ಹಾವು ಅವನ ದೇಹವನ್ನು ಪ್ರವೇಶಿಸಿದೆ. ಇದ್ದಕ್ಕಿದ್ದಂತೆ ಮೃತದೇಹದಿಂದ ಹಾವು ಬಂದ ನಂತರ ನಾನು ಕಿರುಚುತ್ತಾ ಕೋಣೆಯಾದ್ಯಂತ ಓಡಾಡಿದೆ. ಹಾವನ್ನು ಸೆರೆಹಿಡಿಯುವವರೆಗೂ ನಾನು ಆ ಕೋಣೆಗೆ ಹಿಂತಿರುಗಲಿಲ್ಲ ಎಂದು ಜೆಸ್ಸಿಕಾ ಲೋಗನ್ ಹೇಳಿಕೊಂಡಿದ್ದಾರೆ. ಮೃತ ದೇಹವನ್ನು ಹೊಕ್ಕುವ ಹುಳುಗಳನ್ನು ತಡೆಯಲು ಯಾವುದೇ ಮಾರ್ಗವಿಲ್ಲ. ಈ ವೇಳೆ ಹಾವು ಸೇರಿಕೊಂಡಿರಬಹುದು ಎಂದಿದ್ದಾರೆ.

Snake came out of the dead body during the postmortem examination

ಇನ್ನಷ್ಟು ಮಾಹಿತಿ ಹಂಚಿಕೊಂಡ ಜೆಸ್ಸಿಕಾ ಲೋಗನ್, ಮೃತದೇಹ ತಂಪಾಗಿದ್ದರೆ ಸಾಮಾನ್ಯವಾಗಿ ಅದರಲ್ಲಿ ಹೆಚ್ಚಿನ ಕೀಟಗಳು ಕಂಡುಬರುವುದಿಲ್ಲ. ಆದರೆ ಅದು ಬಿಸಿಯಾಗಿದ್ದರೆ ದೇಹದಲ್ಲಿ ಬಹಳಷ್ಟು ಹುಳುಗಳು ಇರುತ್ತವೆ. ನಾನು ಚಳಿಗಾಲದ ಸಮಯದಲ್ಲಿ ಕೊಳೆತ ಶವಗಳ ಪರೀಕ್ಷೆಯನ್ನು ಪ್ರೀತಿಸುತ್ತೇನೆ ಎಂದರು.

Snake came out of the dead body during the postmortem examination

ನಾನು ಶವಪರೀಕ್ಷೆ ತಜ್ಞನಾಗಲು ಯೋಚಿಸಿರಲಿಲ್ಲ. ವೈದ್ಯಕೀಯ ಶಾಲೆಗೆ ಹೋಗಿ ವಿಧಿವಿಜ್ಞಾನ ರೋಗಶಾಸ್ತ್ರಜ್ಞ ಮತ್ತು ವೈದ್ಯಕೀಯ ಪರೀಕ್ಷಕನಾಗಲು ಬಯಸಿದ್ದೆ. ಆದರೆ ಹಣಕಾಸಿನ ಕೊರತೆ ನನಗೆ ಅದನ್ನು ಮಾಡಲು ಬಿಡಲಿಲ್ಲ. ನನ್ನ ಕನಸು ನನಸಾಗಲು ಸಾಧ್ಯವಾಗಲಿಲ್ಲ.

Snake came out of the dead body during the postmortem examination

ಜೆಸ್ಸಿಕಾ ತನ್ನ ಕೆಲಸವನ್ನು ವಿವರಿಸುತ್ತಾ, 'ಹೆಚ್ಚಿನ ಆಸ್ಪತ್ರೆಗಳಲ್ಲಿ ಶವದ ಅಂಗಗಳನ್ನು ಪ್ರತ್ಯೇಕವಾಗಿ ತೆಗೆದುಹಾಕುವ ಮೂಲಕ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗುತ್ತದೆ. ಎಲ್ಲಾ ಅಂಗಗಳನ್ನು ತೆಗೆದುಹಾಕುವುದು ನನ್ನ ಕೆಲಸ. ನಾನು ಕೊಲೊನ್, ಮೂತ್ರಕೋಶ ಮತ್ತು ಪ್ರಾಸ್ಟೇಟ್ ಅನ್ನು ತೆಗೆದು ಹಾಕುವ ಕೆಲಸವನ್ನು ಇಷ್ಟಪಡುತ್ತೇನೆ. ನಂತರ ನಾನು ಗಂಟಲು ಮತ್ತು ನಾಲಿಗೆಯನ್ನು ತೆಗೆಯುತ್ತೇನೆ' ಎಂದು ಜೆಸ್ಸಿಕಾ ಹೇಳಿದರು. ಇಂತಹ ವಿಚಾರಗಳನ್ನು ಜೆಸ್ಸಿಕಾ ತನ್ನ ಸ್ನೇಹಿತರು ಅವಳ ಕೆಲಸದ ಕಥೆಗಳನ್ನು ತಿಳಿಯಲು ಇಷ್ಟಪಡುವುದಾಗಿ ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+