Slovakia: ಸ್ಲೊವಾಕಿಯಾ ಪ್ರಧಾನಿ ಮೇಲೆ ಗುಂಡಿನ ದಾಳಿ

ಸ್ಲೊವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಅವರ ಮೇಲೆ ಗುಂಡಿನ ದಾಳಿ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಗುಂಡಿನ ದಾಳಿ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿತಕಿತ್ಸೆ ಪಡೆಯುತ್ತಿದ್ದಾರೆ.

ಸೆಂಟ್ರಲ್ ಸ್ಲೊವಾಕಿಯಾದಲ್ಲಿ ಗುಂಡಿನ ದಾಳಿ ವಿಡಿಯೋ ವೈರಲ್ ಆಗಿದೆ. ಭದ್ರತಾ ಪಡೆಗಳು ಗಾಯಗೊಂಡ ಪ್ರಧಾನಿ ಫಿಕೋರನ್ನು ಎತ್ತಿ ಕಾರಿನಲ್ಲಿ ಕೂರಿಸುತ್ತಿರುವುದನ್ನು ನೋಡಬಹುದು. ಗುಂಡಿನ ದಾಳಿ ಮಾಡಿದ ಆರೋಪಿಯನ್ನು ಸ್ಥಳದಲ್ಲೇ ಬಂಧಿಸಿರುವ ದೃಶ್ಯಗಳು ಕೂಡ ಸೆರೆಯಾಗಿವೆ.

Slovakia s Prime Minister Shot Multiple Times After Cabinet Meeting Suspect Apprehended

ಹ್ಯಾಂಡ್ಲೋವಾದಲ್ಲಿ ದಾಳಿ ನಡೆದ ಸ್ಥಳದಲ್ಲಿ ಪೊಲೀಸರು ಶಂಕಿತ ಬಂದೂಕುಧಾರಿಯನ್ನು ಬಂಧಿಸಿದ್ದಾರೆ, ಸ್ಲೊವಾಕಿಯಾ ಪ್ರಧಾನಿಯ ಮೇಲೆ ದಾಳಿ ಬಗ್ಗೆ ಮಾತನಾಡಿದ, ಸ್ಲೋವಾಕಿಯಾ ಅಧ್ಯಕ್ಷ ಜುಜಾನಾ ಕ್ಯಾಪುಟೋವಾ, ನಾನು ಆಘಾತಕ್ಕೊಳಗಾಗಿದ್ದೇನೆ, ಭಯಾನಕ ಮತ್ತು ಹೇಯ ದಾಳಿಯಿಂದ ನಾವೆಲ್ಲರೂ ಆಘಾತಕ್ಕೊಳಗಾಗಿದ್ದೇವೆ, ಎಂದು ಘಟನೆಯನ್ನು ಖಂಡಿಸಿದ್ದಾರೆ.

ಹ್ಯಾಂಡ್ಲೋವಾದಲ್ಲಿ ಸರ್ಕಾರದ ಸಭೆಯ ನಂತರ, ಫಿಕೋ ಮೇಲೆ ಹತ್ಯೆಯ ಯತ್ನ ನಡೆದಿದೆ, ಸರ್ಕಾರ ಹೇಳಿದ್ದು, ಗಂಭೀರವಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಮರ್-ಎಸ್‌ಡಿ ಪಕ್ಷವನ್ನು ಗೆದ್ದ ಫಿಕೊ, ನಾಲ್ಕು ಬಾರಿ ಪ್ರಧಾನ ಮಂತ್ರಿ ಮತ್ತು ರಾಜಕೀಯ ಅನುಭವಿಯಾಗಿದ್ದು, ಕ್ರೆಮ್ಲಿನ್ ಪರವಾಗಿ ತನ್ನ ದೇಶದ ವಿದೇಶಾಂಗ ನೀತಿಯನ್ನು ತಿರುಗಿಸಿದ ಆರೋಪ ಎದುರಿಸುತ್ತಿದ್ದಾರೆ.

ಶಂಕಿತ ಬಂದೂಕುಧಾರಿ 71 ವರ್ಷದ ಬರಹಗಾರ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ, ಆದರೆ ಪೊಲೀಸರು ಶಂಕಿತ ಆರೋಪಿ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ.

ದಾಳಿಯ ಬಗ್ಗೆ ಖಂಡನೆ

ಸ್ಲೊವಾಕಿಯಾ ಅಧ್ಯಕ್ಷ-ಚುನಾಯಿತ ಮತ್ತು ಫಿಕೊ ಮಿತ್ರ ಪೀಟರ್ ಪೆಲ್ಲೆಗ್ರಿನಿ ಅವರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. "ಉನ್ನತ ಸಾಂವಿಧಾನಿಕ ಅಧಿಕಾರಿಗಳಲ್ಲಿ ಒಬ್ಬರ ಮೇಲಿನ ಹತ್ಯೆಯ ಪ್ರಯತ್ನವು ಸ್ಲೋವಾಕ್ ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಯೂರೋಪ್ ಒಕ್ಕೂಟದ ಮುಖ್ಯಸ್ಥ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು "ನೀಚ ದಾಳಿ" ಯನ್ನು ಖಂಡಿಸಿದ್ದಾರೆ.

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ "ಭಯಾನಕ" ಗುಂಡಿನ ದಾಳಿಯನ್ನು ಖಂಡಿಸಿದರು ಮತ್ತು ಫಿಕೊ ಚೇತರಿಸಿಕೊಳ್ಳಬೇಕೆಂದು ಹಾರೈಸಿದರು.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುಂಡಿನ ದಾಳಿಯನ್ನು "ಘೋರ ಅಪರಾಧ" ಎಂದು ಕರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+