ಸಿಬಿಎಸ್‌ಇ: ಸಿಂಗಪುರದಲ್ಲಿ ಸಾಧನೆ ಮೆರೆದ ಭಾರತ ಸಂಜಾತರು

Written By:
Subscribe to Oneindia Kannada

ಸಿಂಗಪುರ, ಮೇ 25 : ಸಿಂಗಪುರದ ಕ್ಷೀನ್ಸ್ ಟೌನ್ ಕ್ಯಾಂಪಸ್ ನಲ್ಲಿರುವ ಗ್ಲೋಬಲ್ ಇಂಡಿಯನ್ ಇಂಟರ್ ನ್ಯಾಶನಲ್ ಸ್ಕೂಲ್ ನ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. ಏಶಿಯನ್ ರಿಜನ್ ಸಿಬಿಎಸ್ ಇ 2016 ರ ಪರೀಕ್ಷೆಯ ಕ್ಲಾಸ್ 12 ನಲ್ಲಿ ಅನುಷ್ಕಾ ಗಾಯಕ್ ವಾಡ್ ಮತ್ತು ಶುಭಂ ಸರಾಫ್ ಟಾಪರ್ ಗಳಾಗಿ ಹೊರಹೊಮ್ಮಿದ್ದಾರೆ.

ಅನುಷ್ಕಾ 500ಕ್ಕೆ 491 ಅಂಕ ಗಳಿಸಿ ಶೇ. 98.2 ಸಾಧನೆ ಮಾಡಿದ್ದರೆ, ಶುಭಂ 490 ಅಂಕ ದಾಖಲಿಸಿ ಶೇ. 98 ಫಲಿತಾಂಶ ಪಡೆದುಕೊಂಡಿದ್ದಾರೆ. ಈ ಬಗ್ಗೆ ಸಂಭ್ರಮ ಹಂಚಿಕೊಂಡ ವಿದ್ಯಾಲಯದ ಸಿಒಒ ಕಮಲ್ ಗುಪ್ತಾ, ವಿದ್ಯಾರ್ಥಿಗಳು ಶಾಲೆಗೆ ಹೆಮ್ಮೆ ತಂದಿದ್ದಾರೆ. ಈ ಸಾಧನೆಗೆ ಕಾರಣರಾದ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.[ಸಿಬಿಎಸ್ ಇ ಫಲಿತಾಂಶ ಪೂರ್ಣ ಪಟ್ಟಿ]

cbse

ಭಾರತವನ್ನು ಹೊರತುಪಡಿಸಿ ಹೇಳುವುದಾದರೆ ಅನುಷ್ಕಾ ಅವರದ್ದು ಮೊದಲ ಶ್ರೇಯಾಂಕ. ಗ್ಲೋಬಲ್ ಇಂಡಿಯನ್ ಇಂಟರ್ ನ್ಯಾಶನಲ್ ಸ್ಕೂಲ್ ಬ್ಯಾಚ್ ನ ಅರ್ಧಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಶೇ. 90ಕ್ಕಿಂತ ಅಧಿಕ ಅಂಕ ಸಾಧನೆ ಮಾಡಿದ್ದಾರೆ.[ಯುಪಿಎಸ್ಸಿ: ಕರ್ನಾಟಕದ ಸಾಧಕರಿಗೊಂದು ಅಭಿನಂದನೆ']

cbse

ಅನುಷ್ಕಾ ಮತ್ತು ಶುಭಂ ಪುಣೆ ಮೂಲದವರಾಗಿದ್ದು 2008 ರಿಂದ ಸಿಂಗಪುರದಲ್ಲಿ ನೆಲೆಸಿದ್ದಾರೆ. ಗ್ಲೋಬಲ್ ಇಂಡಿಯನ್ ಇಂಟರ್ ನ್ಯಾಶನಲ್ ಸ್ಕೂಲ್ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮಾರ್ಗದರ್ಶನ ನೀಡುತ್ತಿದ್ದು ಭಾರತ ಮೂಲದವರ ಅಚ್ಚುಮೆಚ್ಚಿನ ವಿದ್ಯಾಸಂಸ್ಥೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Anushka Gaikwad from Global Indian International School (GIIS), Queenstown Campus in Singapore topped the ASEAN region in the 2016 CBSE Class 12 exams scoring 491 out of 500 marks or 98.2 percent. Shubham Saraf came in at the second position scoring 490 out of 500 marks or 98 percent. Mr Kamal Gupta, COO & Regional Director, shared, “We are proud of our students. Their determination and able guidance from teachers have echoed in giving GIIS its best result ever".
Please Wait while comments are loading...