ಭಾರತೀಯ ಪ್ರಯಾಣಿಕರಿಗೆ ಸಿಂಗಪುರದ ಆಫರ್

'ಏಷ್ಯಾ ಏರ್ ಪಾಸ್'ಎಂಬ ಹೆಸರಿನ ರಿಯಾಯಿತಿ ಯೋಜನೆ ವಿಶೇಷವಾಗಿ ಭಾರತೀಯ ಗ್ರಾಹಕರಿಗೆ ನೀಡಲಾಗುತ್ತಿದೆ. ಸಿಂಗಪುರದಿಂದ ಹಾಂಗ್ ಕಾಂಗ್, ಚೀನಾ, ಜಪಾನ್, ಯುಎಸ್, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಗೆ ತೆರಳುವ ಪ್ರಯಾಣಿಕರಿಗೆ ಪ್ರಯಾಣ ದರದಲ್ಲಿ ವಿಶೇಷ ರಿಯಾಯಿತಿ ಸಿಗುತ್ತಿದೆ. ಉತ್ತರ ಏಷ್ಯಾ ಹಾಗೂ ಆಗ್ನೇಯ ಏಷ್ಯಾ ಸೇರಿ ನಾಲ್ಕು ವಿಭಾಗಗಳ ವಿಮಾನಯಾನಕ್ಕೆ ವಿಶೇಷ ರಿಯಾಯಿತಿ ಸಿಗಲಿದೆ ಎಂದು ಏರ್ ಲೈನ್ಸ್ ಪ್ರಕಟಿಸಿದೆ.
ಈ ಪಾಸ್ ಗಳು ಮಾರ್ಚ್ 31ರ ತನಕ ಲಭ್ಯವಿದ್ದು, ಸಿಂಗಪುರ ಏರ್ ಲೈನ್ಸ್ ವಿಮಾನಯಾನ ಸಂಸ್ಥೆಯ ಅಹಮದಾಬಾದ್, ಬೆಂಗಳೂರು, ಚೆನ್ನೈ, ಕೊಯಮತ್ತೂರು, ದೆಹಲಿ, ಕೊಚ್ಚಿ, ಹೈದರಾಬಾದ್, ಕೋಲ್ಕತ್ತಾ, ಮುಂಬೈ, ತಿರುವನಂತಪುರ, ವಿಶಾಖಪಟ್ಟಣಂ ಕಚೇರಿಗಳಲ್ಲಿ ಹಾಗೂ ಟ್ರಾವೆಲ್ ಏಜೆಂಟ್ ಗಳ ಮೂಲಕ ಹೆಚ್ಚಿನ ವಿವರ ಪಡೆದುಕೊಳ್ಳಬಹುದು.
ಈ ರಿಯಾಯಿತಿ ಪಾಸ್ ಗಳು ಸಿಂಗಪುರ ಏರ್ ಲೈನ್ಸ್ ಹಾಗೂ ಕಡಿಮೆ ದರದ ಸಬ್ಸಿಡಿ ಏರ್ ಲೈನ್ಸ್ ಸಿಲ್ಕ್ ಏರ್ ಎರಡರ ಪ್ರಯಾಣಕ್ಕೂ ಅನವಯವಾಗಲಿದೆ.
ಈ ವಿಶೇಷ ರಿಯಾಯಿತಿ ದರ ಪಾಸ್ ಗಳ ಜತೆಗೆ ಪ್ರಯಾಣಿಕರು 40 ಚಾಂಗಿ ಡಾಲರ್ ವೋಚರ್ ಕೂಡಾ ಪಡೆದುಕೊಳ್ಳಬಹುದು. ಈ ವೋಚರ್ ಗಳನ್ನು ಸಿಂಗಪುರದ ಚಾಂಗಿ ಏರ್ ಪೋರ್ಟ್ ನ ಮಳಿಗೆಗಳು, ರೆಸ್ಟೋರೆಂಟ್ ಅಥವಾ ಲಾಂಚ್ ಗಳಲ್ಲಿ ಬಳಸಬಹುದು ಎಂದು ವಿಮಾನಯಾನ ಸಂಸ್ಥೆ ವಕ್ತಾರರು ಹೇಳಿದ್ದಾರೆ.
ಭಾರತದ 11 ನಗರಗಳಿಂದ ವಾರಕ್ಕೆ ಸುಮಾರು 107 ವಿಮಾನಗಳು ಸಿಂಗಪುರದ ಕಡೆಗೆ ಹಾರುತ್ತವೆ. ಈ ವಿಮಾನಯಾನ ಜಗತ್ತಿನಾದ್ಯಂತ 100ಕ್ಕೂ ಅಧಿಕ ನಗರಗಳಿಗೆ ಸಂಪರ್ಕ ಒದಗಿಸುತ್ತದೆ. ಏಷ್ಯಾದಲ್ಲಿನ ವಿವಿಧ ನಗರಗಳನ್ನು ಒಮ್ಮೆಗೆ ತಲುಪಲು ಬಯಸುವ ಪ್ರಯಾಣಿಕರಿಗೆ SIA ಹಾಗೂ ಸಿಲ್ಕ್ ಏರ್ ಸೂಕ್ತವಾದ ವಿಮಾನಯಾನವಾಗಿದೆ ಎಂದು ಸಿಂಗಪುರ ವಿಮಾನಯಾನ ಸಂಸ್ಥೆ ಪ್ರಧಾನ ವ್ಯವಸ್ಥಾಪಕ ಜಿಎಂ ತೊಹ್ ಹೇಳಿದ್ದಾರೆ. (ಪಿಟಿಐ)












Click it and Unblock the Notifications