SpaceX Mission: 20 ದಿನಗಳ ನಂತರ ಆಕಾಶದಿಂದ ಭೂಮಿಗೆ ಬಂದ ವಿಜ್ಞಾನಿ ಶುಭಾಂಶು ಶುಕ್ಲಾ!
ಭಾರತೀಯ ಬಾಹ್ಯಾಕಾಶ ಲೋಕದಲ್ಲಿ ಇಂದು ಮತ್ತೊಂದು ಇತಿಹಾಸ ನಿರ್ಮಾಣ ಆಗಿದ್ದು, ಭಾರತೀಯ ವಿಜ್ಞಾನಿ ಶುಭಾಂಶು ಶುಕ್ಲಾ ಅವರು 20 ದಿನಗಳ ನಂತರ ಆಕಾಶದಿಂದ ಭೂಮಿಗೆ ಬಂದಿದ್ದಾರೆ. ಮನುಷ್ಯರ ಭವಿಷ್ಯದ ದೃಷ್ಟಿಯಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಹಲವು ಸಂಶೋಧನೆ ನಡೆಸುವ ಅಗತ್ಯತೆ ಇದ್ದು, ಇದಕ್ಕಾಗಿ ಶುಭಾಂಶು ಶುಕ್ಲಾ ಅವರು ನಾಸಾ ಸಂಸ್ಥೆ ಯೋಜನೆಯಲ್ಲಿ ಪಾಲ್ಗೊಂಡಿದ್ದರು. ಹೀಗೆ ಎಲ್ಲಾ ಸಂಶೋಧನೆಗಳನ್ನು ಯಶಸ್ವಿಯಾಗಿ ಪೂರೈಸಿ ಇದೀಗ ವಾಪಸ್ ಭೂಮಿಗೆ ಬಂದಿದ್ದಾರೆ.
ಬಾಹ್ಯಾಕಾಶ ಸಂಶೋಧನೆಗಳಿಗೆ ಅಂತಾನೇ ನಾಸಾ ಸೇರಿದಂತೆ ಜಾಗತಿಕ ಬಾಹ್ಯಾಕಾಶ ಸಂಶೋಧನೆ ನಡೆಸುವ ಸಂಸ್ಥೆಗಳು ಒಗ್ಗಟ್ಟಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ ಮಾಡಿವೆ. ಈ ಮೂಲಕ ಭಾರಿ ದೊಡ್ಡ ಮಟ್ಟದಲ್ಲಿ ಸಂಶೋಧನೆ ನಡೆಸಲಾಗುತ್ತಿದೆ. ಪದೇ ಪದೇ ಭೂಮಿಯಿಂದ ವಿಜ್ಞಾನಿಗಳನ್ನ ಅಲ್ಲಿಗೆ ಅಂದ್ರೆ ಭೂಮಿಯ ಸುತ್ತಲೂ ಸುತ್ತುತ್ತಾ ಇರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿ, ಸಂಶೋಧನೆ ನಡೆಸಲಾಗುತ್ತಿದೆ. ಅದೇ ರೀತಿ ಭಾರತೀಯ ವಿಜ್ಞಾನಿ ಶುಭಾಂಶು ಶುಕ್ಲಾ ಅವರ ನೇತೃತ್ವದಲ್ಲಿ ಕಳೆದ ತಿಂಗಳು ಬಾಹ್ಯಾಕಾಶ ಯಾನ ಕೈಗೊಳ್ಳಲಾಗಿತ್ತು.

ಬಾಹ್ಯಕಾಶದಲ್ಲಿ ಭರ್ಜರಿ ಸಂಶೋಧನೆ
ಶುಭಾಂಶು ಶುಕ್ಲಾ ಅವರ ನೇತೃತ್ವದಲ್ಲಿ ಜೂನ್ 25 ಬುಧವಾರ ಆಕ್ಸಿಯಮ್-4 ಮಿಷನ್ ಉಡಾವಣೆ ಮಾಡಿತ್ತು ನಾಸಾ ಸಂಸ್ಥೆ. ಆ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ್ದ ಶುಭಾಂಶು ಶುಕ್ಲಾ ನೇತೃತ್ವದ ತಂಡ, ಸುಮಾರು 20 ದಿನಗಳ ಕಾಲ ಭರ್ಜರಿಯಾಗಿ ಸಂಶೋಧನೆ ನಡೆಸಿದೆ. ಭೂಮಿಯಿಂದ ಹೊರಗಡೆ, ಅಂದ್ರೆ ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಬೆಳೆಸುವುದು ಸೇರಿದಂತೆ ಹಲವು ಸೂಕ್ಷ್ಮ ಜೀವಿಗಳ ಮೇಲೆ ಭಾರಿ ಗಂಭೀರ ಅಧ್ಯಯನ ನಡೆಸಲಾಗಿತ್ತು. ಇದೀಗ ಅದೆಲ್ಲಾ ಯಶಸ್ವಿಯಾಗಿದ್ದು, ಶುಭಾಂಶು ಶುಕ್ಲಾ ಅವರು ಭೂಮಿಗೆ ವಾಪಸ್ ಬಂದಿದ್ದಾರೆ.












Click it and Unblock the Notifications