ಜಾನ್ ಎಫ್.ಕೆನಡಿ ವಿಮಾನ ನಿಲ್ದಾಣದಲ್ಲಿ ಶೂಟೌಟ್ ?

Posted By:
Subscribe to Oneindia Kannada

ನ್ಯೂಯಾರ್ಕ್, ಆಗಸ್ಟ್ 15: ನ್ಯೂಯಾರ್ಕ್ ನ ಜಾನ್ ಎಫ್.ಕೆನಡಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಶೂಟೌಟ್ ನಡೆದಿದೆ ಎಂದು ಸುದ್ದಿ ಹರಡಿ ಆತಂಕಕ್ಕೆ ಕಾರಣವಾಯಿತು.

ಶೂಟಿಂಗ್ ಸುದ್ದಿಯನ್ನು ಆಧರಿಸಿ ಪೊಲೀಸರು ವಿಮಾನ ನಿಲ್ದಾಣದಲ್ಲಿ ತನಿಖೆ ಮುಂದುವರಿಸಿದ್ದು, ಯಾವುದೇ ಶೂಟರ್ ಪತ್ತೆಯಾಗಿಲ್ಲ ಮತ್ತು ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

Shoot out at John F Kenedy airport?

ಟ್ವಿಟರ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು, 'ಜಾನ್ ಎಫ್. ಕೆನಡಿ ಏರ್ ಪೋರ್ಟ್ ನಲ್ಲಿ ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಯಾರಿಗೂ ಗಾಯಗಳಾಗಿಲ್ಲ. ಈ ವರೆಗೆ ಗುಂಡು ಹಾರಿದ ಚಹರೆಯಾಗಲೀ ಅಥವಾ ಶೂಟೌಟ್ ಬಗೆಗಿನ ಯಾವುದೇ ಸಾಕ್ಷಿಗಳಾಗಲೀ ದೊರೆತಿಲ್ಲ' ಎಂದು ತಿಳಿಸಿದ್ದಾರೆ. ಆದರೆ ತನಿಖೆ ಮುಂದುವರಿದಿದೆ ಎಂದು ತಿಳಿಸಲಾಗಿದೆ.

ಮಹಿಳೆಯೊಬ್ಬರು ವಿಮಾನದಿಂದ ಇಳಿದುಬಂದು, ನನಗೆ ಗುಂಡು ಹಾರಿಸಿದಂತೆ ಶಬ್ದ ಕೇಳಿಸಿತು ಎನ್ನುವ ಮೂಲಕ ಈ ಪ್ರಕರಣ ಆರಂಭವಾಯಿತು. ಇಬ್ಬರು ಕಾನೂನು ಜಾರಿ ಅಧಿಕಾರಿಗಳು ಹೇಳಿದ ಪ್ರಕಾರ ಒಬ್ಬರಿಗೆ ಗುಂಡು ಹಾರಿಸಿದ ಶಬ್ದ ಕೇಳಿಸಿದೆ ಎಂದು ಕಾನೂನು ಜಾರಿ ಹಿರಿಯ ಅಧಿಕಾರಿ ತಿಳಿಸಿದ್ದಾರೆ ಎಂದು ಎನ್ ಬಿಸಿ ನ್ಯೂಸ್ ವರದಿ ಮಾಡಿದೆ,

ಒಲಿಂಪಿಕ್ಸ್ ನೋಡುತ್ತಿದ್ದವರ ಚಪ್ಪಾಳೆ, ಕೇಕೆ, ಸಂಭ್ರಮವು ಹೊಡೆದಾಟ, ಗುಂಡು ಹಾರಿಸಿದಂತೆ ಕೇಳಿರುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟರ್ಮಿನಲ್ 1 ಹಾಗೂ 8ರಲ್ಲಿದ್ದ ಸಿಸಿ ಟಿವಿ ವಿಡಿಯೋ ಪರೀಕ್ಷಿಸಿದಾಗ ಶೂಟರ್ ನ ಯಾವುದೇ ಸಾಕ್ಷಿ ಪತ್ತೆಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಎಲ್ಲ ವಿಮಾನಗಳ ಹಾರಾಟ ನಿಲ್ಲಿಸಲಾಗಿದೆ. ನಿಲ್ದಾಣದಲ್ಲಿ ಇತರೆಡೆಯಿಂದ ಬರುತ್ತಿರುವ ವಿಮಾನ ಮಾತ್ರ ಇಳಿಯುತ್ತಿವೆ ಎಂದು ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ದೃಷ್ಟಿಯಿಂದ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣದಿಂದ ದೇಶೀಯ ವಿಮಾನ ಹಾರಾಟವನ್ನು ಭಾನುವಾರ ರಾತ್ರಿ 11.30ರ ವರೆಗೆ ನಿಲ್ಲಿಸಲಾಗಿದೆ ಎಂದು ವಿಮಾನಯಾನ ಆಡಳಿತ ಮಂಡಳಿ ತಿಳಿಸಿದೆ.

Shoot out at John F Kenedy airport?

ವಿಮಾನ ನಿಲ್ದಾಣ ನಿರ್ಗಮನ ವಿಭಾಗದ ಟರ್ಮಿನಲ್ 8ರಲ್ಲಿ ಭಾನುವಾರ ಸ್ಥಳೀಯ ಕಾಲಮಾನ ರಾತ್ರಿ 9.30ರಲ್ಲಿ ಗುಂಡು ಹಾರಿಸಿದ ಶಬ್ದ ಕೇಳಿಸಿತು. ಮುಂಜಾಗ್ರತಾ ಕ್ರಮವಾಗಿ ಟರ್ಮಿನಲ್ ತೆರವು ಮಾಡಿದೆವು ಎಂದು ವಿಮಾನ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಮೊದಲಿಗೆ ವರದಿಯಾಗಿತ್ತು.

ಮತ್ತೊಮ್ಮೆ ಗುಂಡಿನ ಶಬ್ದ ಕೇಳಿಬಂತು ಎಂಬ ಕಾರಣಕ್ಕೆ ರಾತ್ರಿ 10.15ರ ಹೊತ್ತಿಗೆ ಟರ್ಮಿನಲ್ 1 ಸಹ ಮುಚ್ಚಲಾಯಿತು ಮತ್ತು ಸಮೀಪದಲ್ಲಿರುವ್ ವಾನ್ ವ್ಯಾಕ್ ಎಕ್ಸ್ ಪ್ರೆಸ್ ರಸ್ತೆ ಸಹ ಬಂದ್ ಮಾಡಲಾಯಿತು ಎಂದು ವಿಮಾನ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Precautionary measures taken after reporting of shootout at John F Kenedy Airport in Newyork. Terminal 1 and 8 evacuated.
Please Wait while comments are loading...