ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಝಪೊರಿಝಿಯಾ ಅಣು ಸ್ಥಾವರದ ಮೇಲೆ ಶೆಲ್ ದಾಳಿ

|
Google Oneindia Kannada News

ಕೀವ್, ಆಗಸ್ಟ್ 8: ದಕ್ಷಿಣ ಉಕ್ರೇನ್‌ನಲ್ಲಿರುವ ಯುರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಶೆಲ್ ದಾಳಿ ನಡೆಸಲಾಗುತ್ತಿದೆ ಎಂದು ರಷ್ಯಾ ಮತ್ತು ಉಕ್ರೇನ್ ಪರಸ್ಪರ ಆರೋಪ ಮಾಡಿಕೊಳ್ಳುತ್ತಿವೆ.

ಉಕ್ರೇನಿಯನ್ ಶೆಲ್ಲಿಂಗ್ ದಾಳಿಯಿಂದಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಉತ್ಪಾದನೆಯನ್ನು ಕಡಿಮೆ ಮಾಡಲು ಸಿಬ್ಬಂದಿಯನ್ನು ಒತ್ತಾಯಿಸಿದೆ ಎಂದು ರಷ್ಯಾ ಹೇಳಿಕೊಳ್ಳುತ್ತಿದೆ. ಆದರೆ ರಷ್ಯಾ ತನ್ನ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದೆ ಎಂದು ಉಕ್ರೇನ್ ದೂಷಿಸಿದೆ.

ಇದರ ಮಧ್ಯೆ ಯುದ್ಧದ ಆರಂಭದಲ್ಲಿ ರಷ್ಯಾ ವಶಪಡಿಸಿಕೊಂಡ ಝಪೊರಿಝಿಯಾ ಪರಮಾಣು ವಿದ್ಯುತ್ ಕೇಂದ್ರವು ಹೆಚ್ಚಿನ ಶೆಲ್ ದಾಳಿಯ ಅಪಾಯವನ್ನು ಎದುರಿಸುತ್ತಿದೆ ಎಂದು ಪರಮಾಣು ತಜ್ಞರು ಎಚ್ಚರಿಸಿದ್ದಾರೆ.

Shelling on Europes biggest nuclear power plant in southern Ukraine

ಯುರೋಪ್ ಪಾಲಿಗೆ ದುರಂತ: ಕ್ರೆಮ್ಲಿನ್ ಸೋಮವಾರ ಈ ಕುರಿತು ಹೇಳಿಕೆಯನ್ನು ನೀಡಿದ್ದು, ಉಕ್ರೇನಿಯನ್ ಶೆಲ್ ದಾಳಿಯು ಯುರೋಪ್‌ ಪಾಲಿನ ದೊಡ್ಡ "ದುರಂತದ" ಪರಿಣಾಮವನ್ನು ಉಂಟು ಮಾಡಬಹುದು ಎಂದು ಹೇಳಿಕೊಂಡಿದೆ.

ಉಕ್ರೇನ್‌ನ ಮಿಲಿಟರಿ ಗುಪ್ತಚರ ಮುಖ್ಯಸ್ಥ ಆಂಡ್ರಿ ಯುಸೊವ್, ರಷ್ಯಾದ ಹೇಳಿಕೆಗಳಿಗೆ ಪ್ರತಿಯಾಗಿ ತಮ್ಮ ಸಂಘಟನೆಯು ಹಲವಾರು ಮೂಲಗಳಿಂದ ವಿಶ್ವಾಸಾರ್ಹ ಮಾಹಿತಿಯನ್ನು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

ಆ ಮೂಲಕ ರಷ್ಯಾದ ಪಡೆಗಳು ಝಪೊರಿಝಿಯಾ ಸ್ಥಾವರದಲ್ಲಿ ಸ್ಫೋಟಕಗಳನ್ನು ಇರಿಸಿದೆ ಎಂದು ಹೇಳಿದ್ದಾರೆ. ಈ ಹಿಂದೆ, ಉಕ್ರೇನಿಯನ್ ಅಧಿಕಾರಿಗಳು ರಷ್ಯಾವು ಸ್ಥಾವರದಿಂದ ದಾಳಿಗಳನ್ನು ಪ್ರಾರಂಭಿಸುತ್ತಿದೆ ಮತ್ತು ಅದರ ಉಕ್ರೇನಿಯನ್ ಕಾರ್ಮಿಕರನ್ನು ಮಾನವ ಗುರಾಣಿಗಳಾಗಿ ಬಳಸುತ್ತಿದೆ ಎಂದು ಹೇಳಿದ್ದಾರೆ.

English summary
Shelling on Europe's biggest nuclear power plant in southern Ukraine. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X