Donald Trump: ಅಮೆರಿಕದ ಕಾಲು ಹಿಡಿಯುವ ಕೆಲಸ ಮಾಡಿದ ಪಾಕಿಸ್ತಾನ ಪ್ರಧಾನಿ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಭಾರತದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡಿ, ಸರಿಯಾಗಿ ತಿರುಗೇಟು ಪಡೆದು ಸುಮ್ಮನೆ ಆಗುತ್ತಿದ್ದಾರೆ. ಈಗ ಅಮೆರಿಕದ ಕಾಲು ಹಿಡಿಯಲು ಪಾಕ್ ಪ್ರಧಾನಿ ಷರೀಫ್ ಮುಂದಾಗಿದ್ದು, ಸಾಲದ ಹಣಕ್ಕಾಗಿ ಅಮೆರಿಕಗೆ ಜೈ ಅಂತಿದೆ ಪಾಕಿಸ್ತಾನ. ಮತ್ತೊಮ್ಮೆ ಭಾರತ & ಪಾಕಿಸ್ತಾನ ಯುದ್ಧದ ವಿಚಾರ ಪ್ರಸ್ತಾಪ ಮಾಡಿರುವ ಷರೀಫ್, ಈ ಯುದ್ಧ ನಿಂತಿದ್ದು ಟ್ರಂಪ್ ಅವರಿಂದಲೇ ಅಂತಾ ಮತ್ತೊಮ್ಮೆ ಹೇಳಿದ್ದಾರೆ. ಈ ಮೂಲಕ ಪಾಕಿಸ್ತಾನ ಪ್ರಧಾನಿಯ ಈ ಹೇಳಿಕೆಯು ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ. ಆದರೆ ಅಮೆರಿಕದ ಬಳಿ ಸಾಲದ ಹಣಕ್ಕಾಗಿ ಪಾಕಿಸ್ತಾನ ಈ ರೀತಿ ಆಡುತ್ತಿದೆ ಅನ್ನೋ ಮಾತು ಕೂಡ ಕೇಳಿಬಂದಿದೆ.

ಅಂದಹಾಗೆ ದಿಢೀರ್ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಭಾರತದ ವಿರುದ್ಧ ಒಂದು ಹೇಳಿಕೆ ನೀಡಿದ್ದಾರೆ. ಭಾರತ & ಪಾಕಿಸ್ತಾನ ನಡುವೆ ನಡೆದ ಮೇ ತಿಂಗಳ ಯುದ್ಧ ನಿಲ್ಲಿಸಿದ್ದು ಡೊನಾಲ್ಡ್ ಟ್ರಂಪ್ ಎಂದಿದ್ದಾರೆ. ಈ ಯುದ್ಧ ಕೊನೆಗಾಣಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಧೈರ್ಯಶೀಲ & ನಿರ್ಣಾಯಕ ನೇತೃತ್ವ ಸಹಾಯ ಮಾಡಿತು ಎಂದು ಹೇಳಿದ ಶರೀಫ್, ಈ ಮೂಲಕ ಭಾರತದ ವಿರುದ್ಧ ಮಾತನಾಡಿದ್ದಾರೆ. ಕೈಲಾಗದ ಹೇಡಿಯಂತೆ ಹೋಗಿ ಅಮೆರಿಕದಲ್ಲಿ ಕೈಕಾಲು ಹಿಡಿದು ಯುದ್ಧ ನಿಲ್ಲಿಸಿತ್ತು ಪಾಕಿಸ್ತಾನ. ಆದರೆ, ಈಗ ಮತ್ತೆ ಬುರುಡೆ ಬಿಡಲು ಶುರು ಮಾಡಿದೆ.

Shehbaz Sharif Expresses Gratitude to Trump for Indo-Pak Ceasefire Mediation

ಪಾಕಿಸ್ತಾನದ ಬುದ್ಧಿ ಬದಲಾಗೋದೆ ಇಲ್ಲ!

ಅಜರ್ಬೈಜಾನ ವಿಕ್ಟರಿ ಪೆರೇಡ್‌ ವೇಳೆ ಮಾತನಾಡಿದ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್, ದಕ್ಷಿಣ ಏಷ್ಯಾದಲ್ಲಿ ಶಾಂತಿ ಪುನಃಸ್ಥಾಪಿಸಲು ಈ ಮೂಲಕ ಭೀಕರ ಯುದ್ಧ ತಪ್ಪಿಸಿ ಲಕ್ಷಾಂತರ ಜೀವಗಳನ್ನ ಉಳಿಸಲು ಟ್ರಂಪ್ ಕಾರಣ ಎಂದು ಹೇಳಿದ್ದಾರೆ. ಪ್ರತಿಬಾರಿ ಹೋಗಿ ಅಮೆರಿಕದ ಕಾಲು ಹಿಡಿಯುವ ಪಾಕಿಸ್ತಾನ ಮತ್ತೊಮ್ಮೆ ಅದೇ ಕೆಲಸ ಮಾಡಿದೆ.

ಒಂದು ಕಡೆ ಡೊನಾಲ್ಡ್ ಟ್ರಂಪ್ ಕೂಡ, ನಾನೇ ಈ ಯುದ್ಧ ನಿಲ್ಲಿಸಿದ್ದು ಅಂತಾ ಹೇಳುತ್ತಿದ್ದರೆ. ಇನ್ನೊಂದು ಕಡೆ ಪಾಕಿಸ್ತಾನ ಕೂಡ ಸಾಲಕ್ಕಾಗಿ ಅಮೆರಿಕದ ಕಾಲಿಗೆ ಬೀಳುವ ಕೆಲಸ ಮಾಡುತ್ತಿದೆ. ಒಟ್ನಲ್ಲಿ ಈ ಕಿರಿಕ್ ಮತ್ತಷ್ಟು ಜೋರಾಗಿದ್ದು, ಕೆಲವು ದಿನಗಳ ಹಿಂದಷ್ಟೇ ಪಾಕಿಸ್ತಾನದ ಸೇನೆಗೆ ತಾಲಿಬಾನ್ ಸರಿಯಾಗಿ ಏಟು ಕೊಟ್ಟಿತ್ತು.

ಹಣಕ್ಕಾಗಿ ಪಾಕಿಸ್ತಾನದ ನಾಟಕ ಶುರು!

ಒಟ್ನಲ್ಲಿ ಪಾಪಿ ಪಾಕಿಸ್ತಾನದ ಬುದ್ಧಿ ಬದಲಾಗುವುದಿಲ್ಲ, ತನ್ನ ಕುತಂತ್ರ ಬುದ್ದಿ ಮೂಲಕ ಪಾಕಿಸ್ತಾನ ರಾಜಕಾರಣಿಗಳು ಇದೇ ರೀತಿ ವರ್ತನೆ ಮುಂದುವರಿಸಿಕೊಂಡು ಹೋಗುತ್ತಾರೆ ಎಂಬುದು ಮತ್ತೊಮ್ಮೆ ಈಗ ಕನ್ಫರ್ಮ್ ಆಗಿದೆ. ಆರ್ಥಿಕವಾಗಿ ಬೀದಿಗೆ ಬಿದ್ದಿರುವ ಪಾಕಿಸ್ತಾನಕ್ಕೆ ಅಮೆರಿಕ ಭಾರಿ ಪ್ರಮಾಣದ ಹಣದ ಸಹಾಯವನ್ನ ಮಾಡುತ್ತಿರುವ ಕಾರಣಕ್ಕೆ ಇಂತಹ ನಾಟಕ ಶುರುವಾಗಿದೆ ಎಂಬ ಆರೋಪ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+