ಮಾರ್ಚ್ 2ರಂದು ರಷ್ಯಾ-ಉಕ್ರೇನ್ 2ನೇ ಸುತ್ತಿನ ಸಂಧಾನ ಮಾತುಕತೆ
ಕೀವ್, ಮಾರ್ಚ್ 1: ರಷ್ಯಾ ಮತ್ತು ಉಕ್ರೇನ್ ನಡುವಿನ ಎರಡನೇ ಸುತ್ತಿನ ಮಾತುಕತೆಯು ಮಾರ್ಚ್ 2ರಂದು ನಡೆಯಲಿದೆ ಎಂದು ರಷ್ಯಾದ TASS ಅನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ,.
ಸೋಮವಾರ ನಡೆದ ಮೊದಲ ಸುತ್ತಿನ ಸಂಧಾನ ಮಾತುಕತೆಯಲ್ಲಿ ಯಾವುದೇ ಸ್ಪಷ್ಟ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಉಭಯ ರಾಷ್ಟ್ರಗಳು ಮತ್ತೊಮ್ಮೆ ಭೇಟಿಯಾಗಿ ಸಭೆ ನಡೆಸಲು ನಿರ್ಧರಿಸಿವೆ. ಬೆಲಾರಸ್‌ನ ಗಡಿ ಪಟ್ಟಣವಾದ ಗೋಮೆಲ್‌ನಲ್ಲಿ ನಡೆದ ಮೊದಲ ಸುತ್ತಿನಲ್ಲಿ ಐದು ಗಂಟೆಗಳವರೆಗೂ ಚರ್ಚೆ ನಡೆಸಲಾಗಿತ್ತು.
ಮೊದಲ ಸುತ್ತಿನಲ್ಲಿ ರಷ್ಯಾ ಮತ್ತು ಉಕ್ರೇನ್ ಪ್ರತಿನಿಧಿಗಳು "ಕೆಲವು ವಿಷಯಗಳ ಬಗ್ಗೆ ಒಪ್ಪಿಕೊಂಡಿದ್ದಾರೆ" ಎಂದು ತೋರುತ್ತಿದೆ. ಈಗ, ಉಭಯ ರಾಷ್ಟ್ರಗಳ ಪ್ರತಿನಿಧಿಗಳು ಎರಡನೇ ಸುತ್ತಿನ ಚರ್ಚೆಗಾಗಿ ಆಗಮಿಸುವುದಕ್ಕೂ ಮೊದಲು ತಮ್ಮ ಸರ್ಕಾರದ ಮುಖ್ಯಸ್ಥರನ್ನು ಸಂಪರ್ಕಿಸುತ್ತಾರೆ ಎಂದು ರಷ್ಯಾ ಟುಡೆ (ಆರ್‌ಟಿ) ವರದಿ ಮಾಡಿದೆ.

ಯುರೋಪಿಯನ್ ಒಕ್ಕೂಟಕ್ಕೆ ಉಕ್ರೇನ್:
ಯುರೋಪಿಯನ್ ಒಕ್ಕೂಟಕ್ಕೆ ಸೇರುವ ಉಕ್ರೇನ್ ಅರ್ಜಿಯನ್ನು ಯುರೋಪಿಯನ್ ಪಾರ್ಲಿಮೆಂಟ್ ಮಂಗಳವಾರ ಸ್ವೀಕರಿಸಿದೆ. ರಾತ್ರಿ 9 ಗಂಟೆಗೆ ವಿಶೇಷ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಯುರೋಪಿಯನ್ ಯೂನಿಯನ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ನಂತರ ಈ ಬೆಳವಣಿಗೆಯಾಗಿದೆ. ತನ್ನ ಭಾಷಣದಲ್ಲಿ, ಝೆಲೆನ್ಸ್ಕಿ ಬ್ಲಾಕ್ನ ಎಲ್ಲಾ ದೇಶಗಳು ಹೇಗೆ ಏಕೀಕರಿಸಲ್ಪಟ್ಟವು ಎಂಬುದನ್ನು ಸೂಚಿಸಿದರು ಮತ್ತು ಉಕ್ರೇನ್ ಅದರ ಭಾಗವಾಗಲು ತನ್ನ ಬಯಕೆಯನ್ನು ವ್ಯಕ್ತಪಡಿಸಿದ್ದರು.
ಮೊದಲ ಸುತ್ತಿನ ಮಾತುಕತೆಯಲ್ಲಿ ಏನಾಯಿತು?:
ಉಕ್ರೇನ್ ಮತ್ತು ರಷ್ಯಾ ನಡುವಿನ ಮುಂದಿನ ಸುತ್ತಿನ ಮಾತುಕತೆಗಳು ಪೋಲೆಂಡ್-ಬೆಲಾರಸ್ ಗಡಿಯಲ್ಲಿ ನಡೆಯಲಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ. ಇದಕ್ಕೂ ಮೊದಲು ಉಕ್ರೇನ್‌ನೊಂದಿಗಿನ ಶಾಂತಿ ಮಾತುಕತೆಯಲ್ಲಿ ಎರಡೂ ಕಡೆಯ ಹಿತಾಸಕ್ತಿಗಳಿಗೆ ಅನುಗುಣವಾಗಿ ಒಪ್ಪಂದಕ್ಕೆ ಬರಲು ರಷ್ಯಾ ಆಸಕ್ತಿ ಹೊಂದಿದೆ ಎಂದು ರಷ್ಯಾದ ಸಮಾಲೋಚಕ ವ್ಲಾಡಿಮಿರ್ ಮೆಡಿನ್ಸ್ಕಿ ಹೇಳಿದ್ದರು.
ಕೀವ್ ಕಡೆಗೆ ಮುಖ ಮಾಡಿ ನಿಂತ ರಷ್ಯಾ ಮಿಲಿಟರಿ:
ಯುಎಸ್ ತಂತ್ರಜ್ಞಾನ ಸಂಸ್ಥೆ ಮ್ಯಾಕ್ಸರ್ ಟೆಕ್ನಾಲಜೀಸ್ ಸೋಮವಾರ ತೆಗೆದ ಉಪಗ್ರಹ ಚಿತ್ರಗಳಲ್ಲಿ ರಷ್ಯಾದ 64-ಕಿಲೋಮೀಟರ್ (40-ಮೈಲಿ) ಉದ್ದದ ಮಿಲಿಟರಿ ಬೆಂಗಾವಲು ಪಡೆ ಉಕ್ರೇನ್‌ನ ರಾಜಧಾನಿ ಕೀವ್ ಕಡೆಗೆ ಹೋಗುತ್ತಿರುವುದನ್ನು ತೋರಿಸಿದೆ. ರಷ್ಯಾದ ಮಿಲಿಟರಿ ಬೆಂಗಾವಲು ಪಡೆ ಕೀವ್‌ನ ಉತ್ತರದಿಂದ ಮುನ್ನಡೆಯುತ್ತಿದೆ. ಈ ಹಿಂದೆ ವರದಿ ಮಾಡಿದ್ದಕ್ಕಿಂತ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವುದನ್ನು ಚಿತ್ರಗಳು ಬಹಿರಂಗಪಡಿಸಿವೆ.
ಇತ್ತೀಚಿನ ನವೀಕರಣದ ಪ್ರಕಾರ, ಬೆಂಗಾವಲು ಪಡೆ ಕೀವ್‌ನ ಮಧ್ಯಭಾಗದಿಂದ 17 ಮೈಲಿಗಳು (25 ಕಿಲೋಮೀಟರ್) ದೂರದಲ್ಲಿದ್ದು, ಬೃಹತ್ ಬೆಂಗಾವಲು ಶಸ್ತ್ರಸಜ್ಜಿತ ವಾಹನಗಳು, ಟ್ಯಾಂಕ್‌ಗಳು, ಫಿರಂಗಿ ಮತ್ತು ಬೆಂಬಲ ವಾಹನಗಳನ್ನು ಒಳಗೊಂಡಿತ್ತು.












Click it and Unblock the Notifications