ಮೋದಿ-ನವಾಜ್ ರಿಂದ ವ್ಯಾಪಾರ ಕುದುರಿಸುವ ಮಾತುಕತೆ
ಮಾಸ್ಕೋ, ಜುಲೈ 10: ಸರಿ ಸುಮಾರು ಒಂದು ವರ್ಷದ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಮತ್ತೊಮ್ಮೆ ಮುಖಾಮುಖಿಯಾಗಿದ್ದಾರೆ. ದ್ವಿಪಕ್ಷೀಯ ಮಾತುಕತೆಯಲ್ಲಿ ವ್ಯಾಪಾರ ಅಭಿವೃದ್ಧಿ, ಗಡಿ ವಿಚಾರ, ಉಗ್ರಗಾಮಿಗಳ ಮೇಲೆ ಹತೋಟಿ ಇನ್ನೂ ಅನೇಕ ವಿಷಯಗಳು ಚರ್ಚೆಗೊಂಡಿವೆ.
ಎಸ್ ಸಿಒ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರ ಜೊತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊವಲ್, ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಇದ್ದರೆ, ನವಾಜ್ ಅವರ ಜೊತೆ ವಿದೇಶಾಂಗ ವ್ಯವಹಾರ ಸಲಹೆಗಾರರಾದ ಸರ್ತಾಜ್ ಅಜೀಜ್ ಮುಂತಾದವರಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಆಯೋಜಿಸಿದ್ದ ಡಿನ್ನರ್ ನಲ್ಲಿ ಉಭಯ ನಾಯಕರು ಸೇರಿದಂತೆ ಬ್ರಿಕ್ಸ್ ರಾಷ್ಟ್ರಗಳು ಹಾಗೂ ಎಸ್ ಸಿಒ ದೇಶಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಶಾಂಘೈ ಸಹಕಾರ ಸಂಘ (ಎಸ್ ಸಿಒ) ಸಭೆಯಲ್ಲಿ ಪಾಲ್ಗೊಂಡಿರುವ ಮೋದಿ ಹಾಗೂ ಷರೀಫ್ ಅವರು ಒಂದು ಗಂಟೆಗಳ ಕಾಲ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ.
Neighbourhood engagement. PM @narendramodi meets PM Nawaz Sharif on sidelines of SCO Summit pic.twitter.com/csMUUdECLI
— Vikas Swarup (@MEAIndia) July 10, 2015 ಕಳೆದ ವರ್ಷ ನವೆಂಬರ್ ನಲ್ಲಿ ಸಾರ್ಕ್ ಶೃಂಗಸಭೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಉಫಾ ನಗರದಲ್ಲಿ ಭಾರತ ಹಾಗೂ ಪಾಕಿಸ್ತಾನ ಜಂಟಿ ಸುದ್ದಿಗೋಷ್ಠಿ ನಡೆಸಲಾಗಿದೆ
* ನವಾಜ್ ಆಹ್ವಾನ ಸ್ವೀಕರಿಸಿದ ಮೋದಿ, ಪಾಕಿಸ್ತಾನಕ್ಕೆ ಬರುತ್ತೇನೆ ಎಂದಿದ್ದಾರೆ.
* 2016 ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಪ್ರಧಾನಿ ಮೋದಿ ಅವರಿಂದ ಸಮ್ಮತಿ.
* ಭಯೋತ್ಪಾದನೆ ನಿಗ್ರಹ ಕುರಿತಂತೆ ಹೆಚ್ಚಿನ ಚರ್ಚೆ ಮಾಡಲಾಗಿದೆ.
ಮಾತುಕತೆ ವೇಳೆ ಪ್ರಧಾನಿ ಮೋದಿಯವರು 26/11ರ ಮುಂಬೈ ದಾಳಿ ರೂವಾರಿ ಝಾಕಿ-ಉರ್-ರೆಹ್ಮಾನ್ ಲಖ್ವಿ ವಿಚಾರಣೆಗೆ ಸಂಬಂಧಿಸಿದಂತೆ ಚರ್ಚೆ ನಡೆದಿದ್ದು, ಉಗ್ರನ ಧ್ವನಿ ಮುದ್ರಿಕೆ ಸೇರಿದಂತೆ ಅಗತ್ಯ ಪುರಾವೆಗಳನ್ನು ಪಾಕಿಸ್ಥಾನಕ್ಕೆ ಕಳುಹಿಸಿಕೊಡಲಾಗುವುದು ಎಂದು ಮಾತುಕತೆಯ ನಂತರ ವಿದೇಶಾಂಗ ಕಾರ್ಯದರ್ಶಿ ಜೈ ಶಂಕರ್ ಹೇಳಿದ್ದಾರೆ. ಇದುವರೆಗೆ ಭಾರತ ಪೂರೈಸಿರುವ ಮಾಹಿತಿಗಳು ವಿಚಾರಣೆಗೆ ಸಾಕಾಗುತ್ತಿಲ್ಲ ಎಂದು ನವಾಜ್ ಷರೀಫ್ ಹೇಳಿದ್ದಾರೆ.
ಭಯೋತ್ಪಾದನೆ ನಿಗ್ರಹ ಕುರಿತಂತೆ ಎರಡ ದೇಶಗಳ ವಿದೇಶಾಂಗ ಖಾತೆ ಅಧಿಕಾರಿಗಳು ನವದೆಹಲಿಯಲ್ಲಿ ಮಾತುಕತೆ ನಡೆಸುವ ಬಗ್ಗೆಯೂ ತೀರ್ಮಾನಿಸಲಾಗಿದೆ. ಜಮ್ಮು-ಕಾಶ್ಮೀರದ ಗಡಿಯಲ್ಲಿ ನಿರಂತರ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿದ್ದು, ಅದನ್ನು ತಡೆಗಟ್ಟುವ ಬಗ್ಗೆಯೂ ಚರ್ಚೆ ನಡೆಯಲಿದೆ. (ಪಿಟಿಐ)












Click it and Unblock the Notifications