ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ ಅರೇಬಿಯಾದಲ್ಲಿ ಗಂಡನಿಂದ ಮುಂದೆ ನಡೆದಿದ್ದಕ್ಕೂ ವಿಚ್ಛೇದನ!

By Sachhidananda Acharya
|
Google Oneindia Kannada News

ಸೌದಿ ಅರೇಬಿಯಾ, ಆಗಸ್ಟ್ 23: ಮಂಗಳವಾರವಷ್ಟೇ ಭಾರತದ ಸುಪ್ರಿಂ ಕೋರ್ಟ್ ತ್ರಿವಳಿ ತಲಾಖ್ ಅಸಂವಿಧಾನಿಕ ಎಂದು ಆದೇಶ ನೀಡಿದೆ. ಇದೇ ವೇಳೆ ಸೌದಿ ಅರೇಬಿಯಾದಲ್ಲಿ ಇತ್ತೀಚೆಗೆ ನಡೆದ ಕ್ಷುಲ್ಲಕ ವಿಚ್ಛೇದನ ಪ್ರಕರಣಗಳು ಸುದ್ದಿ ಕೇಂದ್ರಕ್ಕೆ ಬಂದಿವೆ.

ತಲಾಖ್ ವಿರುದ್ಧ ಗೆದ್ದ 5 ಮುಸ್ಲಿಂ ಮಹಿಳೆಯರು ಇವರೇ!ತಲಾಖ್ ವಿರುದ್ಧ ಗೆದ್ದ 5 ಮುಸ್ಲಿಂ ಮಹಿಳೆಯರು ಇವರೇ!

ಸೌದಿ ಅರೇಬಿಯಾದಲ್ಲಿ ತಕ್ಷಣದ ತಲಾಖ್ ಜಾರಿಯಲ್ಲಿಲ್ಲ. ಹೀಗಿದ್ದರೂ ತನಗಿಂತ ಮುಂದೆ ಹೆಂಡತಿ ನಡೆದಳು ಎಂಬ ಕ್ಷುಲ್ಲಕ ಕಾರಣಕ್ಕೆ ಗಂಡನೊಬ್ಬ ವಿಚ್ಛೇದನ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

Saudi Man Divorces Wife For 'Walking Ahead', amid of Triple Talaq issue

ವ್ಯಕ್ತಿಯೊಬ್ಬ ತನ್ನ ಹಿಂದೆ ಬರುವಂತೆ ಹೆಂಡತಿಗೆ ಪದೇ ಪದಪೇ ಎಚ್ಚರಿಕೆ ನೀಡಿದ್ದ. ಆದರೆ, ಹೆಂಡತಿ ತನಗಿಂತ ಮುಂದೆ ಹೋಗಿದ್ದಕ್ಕೆ ವಿಚ್ಛೇದನ ನೀಡಿದ್ದಾನೆ ಎಂದು 'ಗಲ್ಫ್ ನ್ಯೂಸ್' ವರದಿ ಮಾಡಿದೆ.

ಇನ್ನೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳೆಯರಿಗೆ ಭೋಜನ ಕೂಟ ಹಮ್ಮಿಕೊಂಡಿದ್ದ. ಇದರಲ್ಲಿ ಬಡಿಸುವ ವೇಳೆ ಗೆಳೆಯರಿಗೆ ತಲೆ ಮಾಂಸ ಹಾಕುವುದನ್ನು ಹೆಂಡತಿ ಮರೆತಿದ್ದಳು. ಇದೇ ಕಾರಣಕ್ಕೆ ಗಂಡ ವಿಚ್ಛೇದನ ನೀಡಿಯೇ ಬಿಟ್ಟಿದ್ದಾರೆ.

ತ್ರಿವಳಿ ತಲಾಖ್ ಅಸಂವಿಧಾನಿಕ, ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪುತ್ರಿವಳಿ ತಲಾಖ್ ಅಸಂವಿಧಾನಿಕ, ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪು

ಹೀಗೆ ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ಗಂಡಂದಿರುವ ತೀರಾ ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.

English summary
Saudi Arabia does not allow instant talaq like India. Eventhough a man has divorced his wife for walking ahead of him despite repeated warnings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X