ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದ ಪರ ಸೌದಿ ಪಟ್ಟು; ತೈಲ ಉತ್ಪಾದನೆ ಕಡಿತದಿಂದ ಅಮೆರಿಕಾಗೆ ಬೀಳುತ್ತಾ ಪೆಟ್ಟು?

|
Google Oneindia Kannada News

ಮಾಸ್ಕೋ, ಅಕ್ಟೋಬರ್ 14: ಜಾಗತಿಕ ಮಟ್ಟದಲ್ಲಿ ತೈಲ ಉತ್ಪಾದನೆಯನ್ನು ತಗ್ಗಿಸುತ್ತಿರುವುದರ ಕುರಿತು ಒಪೆಕ್+ ರಾಷ್ಟ್ರಗಳ ನಿರ್ಧಾರಕ್ಕೆ ವಿಶ್ವದ ದೊಡ್ಡಣ್ಣ ಯುನೈಟೆಡ್ ಸ್ಟೇಟ್ಟ್ ಕೆರಳಿ ಕೆಂಡವಾಗಿದೆ.

ಒಪೆಕ್+ ರಾಷ್ಟ್ರಗಳ ಒಕ್ಕೂಟದಲ್ಲಿ ರಷ್ಯಾ ಸಹ ಸೇರಿಕೊಂಡಿದೆ. ಹೀಗಾಗಿಯೇ ರಷ್ಯಾದ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಸೌದಿ ಒಪೆಕ್ ಒಕ್ಕೂಟದ ನೇತೃತ್ವ ವಹಿಸಿಕೊಂಡಿರುವ ಸೌದಿ ಅರೇಬಿಯಾ ತೈಲದ ಉತ್ಪಾದನೆಯನ್ನು ಕಡಿತಗೊಳಿಸಲು ನಿರ್ಧರಿಸಿದೆ ಎಂದು ವಾಶಿಂಗ್ಟನ್ ಆರೋಪಿಸಿದೆ.

ದುಬಾರಿ ದುನಿಯಾದಲ್ಲಿ ಭಾರತಕ್ಕೆ ಬಂಪರ್ ಆಫರ್ ನೀಡಿರುವ ರಾಷ್ಟ್ರ ಯಾವುದು?ದುಬಾರಿ ದುನಿಯಾದಲ್ಲಿ ಭಾರತಕ್ಕೆ ಬಂಪರ್ ಆಫರ್ ನೀಡಿರುವ ರಾಷ್ಟ್ರ ಯಾವುದು?

ಸೌದಿ ನೇತೃತ್ವದ ಒಪೆಕ್ + ಕಾರ್ಟೆಲ್ ರಷ್ಯಾವನ್ನು ಒಳಗೊಂಡಿದೆ. ನವೆಂಬರ್‌ನಿಂದ ದಿನಕ್ಕೆ ಎರಡು ಮಿಲಿಯನ್ ಬ್ಯಾರೆಲ್‌ಗಳಷ್ಟು ಉತ್ಪಾದನೆಯನ್ನು ಕಡಿತಗೊಳಿಸುವ ಮೂಲಕ ಶ್ವೇತಭವನ ಕಣ್ಣು ಕೆಂಪಾಗಿಸಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಗಗನಕ್ಕೇರುವ ಬಗ್ಗೆ ಆತಂಕ ಸೃಷ್ಟಿಯಾಗಿದೆ. ಇದರ ಮಧ್ಯೆ ಸೌದಿ ಅರೇಬಿಯಾ ಗುರುವಾರ ಅಪರೂಪದ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಉಕ್ರೇನ್‌ನಲ್ಲಿ ರಷ್ಯಾ ಯುದ್ಧವನ್ನು ಮಾಡುತ್ತಿದ್ದು, "ಅಂತರಾಷ್ಟ್ರೀಯ ಸಂಘರ್ಷಗಳಲ್ಲಿ ಒಕ್ಕೂಟವನ್ನು ಸೇರಿಸಿದ ಆರೋಪವನ್ನು ತಳ್ಳಿ ಹಾಕಲಾಗಿದೆ.

ರಷ್ಯಾ ಆದಾಯ ಹೆಚ್ಚಿಸುವುದಕ್ಕೆ ಈ ಕ್ರಮ ಎಂದು ದೂಷಣೆ

ರಷ್ಯಾ ಆದಾಯ ಹೆಚ್ಚಿಸುವುದಕ್ಕೆ ಈ ಕ್ರಮ ಎಂದು ದೂಷಣೆ

ಸೌದಿ ಅರೇಬಿಯಾ ನೇತೃತ್ವದ ಒಕ್ಕೂಟವು ಇಂಧನ ಉತ್ಪಾದನೆ ಕಡಿತಗೊಳಿಸುವುದರಿಂದ ರಷ್ಯಾದ ಆದಾಯದಲ್ಲಿ ಏರಿಕೆ ಆಗಲಿದೆ. ಈ ನಿರ್ಬಂಧಗಳು ಪರಿಣಾಮಕಾರಿತ್ವವನ್ನು ಮತ್ತಷ್ಟು ಮಂದಗೊಳಿಸುತ್ತವೆ. ಹೀಗಾಗಿ ಇದೊಂದು ತಪ್ಪು ನಡೆ ಎಂದು ಯುಎಸ್ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ. ತೈಲ ಉತ್ಪಾದನೆ ಕಡಿತಗೊಳಿಸಿದ ಬೆಳವಣಿಗೆ ಬೆನ್ನಲ್ಲೇ ಸಮೃದ್ಧವಾದ ತೈಲ ಸಾಮ್ರಾಜ್ಯದ ಜೊತೆಗೆ ಸಂಬಂಧ ಭದ್ರಗೊಳಿಸಿಕೊಳ್ಳಲು ಮುಂದಾಗಿದ್ದ ವಾಷಿಂಗ್ಟನ್‌ಗೆ ರಾಜತಾಂತ್ರಿಕ ಕಪಾಳಮೋಕ್ಷವನ್ನು ಕೊಟ್ಟಂತೆ ಆಗಿದೆ.

ಸೌದಿ ಅರೇಬಿಯಾಗೆ ತೆರಳಿದ್ದ ಜೋ ಬೈಡೆನ್

ಸೌದಿ ಅರೇಬಿಯಾಗೆ ತೆರಳಿದ್ದ ಜೋ ಬೈಡೆನ್

ಕಳೆದ ಜುಲೈ ತಿಂಗಳಿನಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ಸೌದಿ ಅರೇಬಿಯಾಕ್ಕೆ ತೆರಳಿದ್ದು, ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅನ್ನು ಭೇಟಿಯಾಗಿದ್ದರು. ಇಬ್ಬರು ಉನ್ನತ ಮಟ್ಟದ ಮುಷ್ಟಿಯೊಂದಿಗೆ ಪರಸ್ಪರ ಶುಭಾಶಯ ಕೋರಿದರು. ಈ ಹಿಂದೆ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯ ನಂತರ ದೇಶವನ್ನು ಅಂತಾರಾಷ್ಟ್ರೀಯ "ಪರಿಯಾ" ಮಾಡಲು ಬೈಡೆನ್ ಪ್ರತಿಜ್ಞೆ ಮಾಡಿದ್ದರು.

ಸೌದಿ ಅರೇಬಿಯಾಗೆ ತಿರುಗೇಟು ಕೊಟ್ಟ ಯುಎಸ್

ಸೌದಿ ಅರೇಬಿಯಾಗೆ ತಿರುಗೇಟು ಕೊಟ್ಟ ಯುಎಸ್

"ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯವು ಸತ್ಯವನ್ನು ತಿರುಚುವುದಕ್ಕೆ ಪ್ರಯತ್ನಿಸಬಹುದು, ಆದರೆ ಸತ್ಯಗಳು ಸರಳವಾಗಿದೆ. ರಷ್ಯಾದ ಆಕ್ರಮಣವನ್ನು ಎದುರಿಸುವಲ್ಲಿ ಜಗತ್ತು ಉಕ್ರೇನ್‌ನ ಹಿಂದೆ ಒಟ್ಟುಗೂಡುತ್ತಿದೆ," ಎಂದು ಯುಎಸ್ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ. ಅಲ್ಲದೇ ಇತರ OPEC + ರಾಷ್ಟ್ರಗಳು ಸೌದಿಯ ನಿರ್ದೇಶನವನ್ನು ಬಲವಂತವಾಗಿ ಬೆಂಬಲಿಸುತ್ತಿವೆ," ಎಂದು ಹೇಳಿದರು.

ಯುಎಸ್ ಚುನಾವಣೆ ವೇಳೆಯಲ್ಲೇ ತೈಲ ದರ ಇಳಿಕೆ ಆತಂಕ

ಯುಎಸ್ ಚುನಾವಣೆ ವೇಳೆಯಲ್ಲೇ ತೈಲ ದರ ಇಳಿಕೆ ಆತಂಕ

ನವೆಂಬರ್‌ನಲ್ಲಿ ಡೆಮಾಕ್ರಟಿಕ್ ಪಕ್ಷವು ಮಧ್ಯಂತರ ಚುನಾವಣೆಗಳನ್ನು ಎದುರಿಸುತ್ತಿರುವಾಗ ಬೈಡೆನ್‌ಗೆ ತೈಲ ಉತ್ಪಾದನೆಯ ಕಡಿತವು ಸೂಕ್ಷ್ಮವಾಗಿರುತ್ತದೆ. ಇದರಿಂದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟುವ ಆತಂಕವಿದೆ. ಸೌದಿ ಅರೇಬಿಯಾ "ವಾಸ್ತವಗಳನ್ನು ಆಧರಿಸಿರದ ಮತ್ತು OPEC + ನಿರ್ಧಾರವನ್ನು ಅದರ ಆರ್ಥಿಕ ಸನ್ನಿವೇಶದಿಂದ ಚಿತ್ರಿಸುವುದನ್ನು ಆಧರಿಸಿದ ಹೇಳಿಕೆಗಳ" ವಿರುದ್ಧ ತನ್ನನ್ನು ತಾನು ಸಮರ್ಥಿಸಿಕೊಂಡಿದೆ. OPEC + ನಿರ್ಧಾರಗಳನ್ನು "ಸಂಪೂರ್ಣವಾಗಿ ಆರ್ಥಿಕ ಪರಿಗಣನೆಗಳ ಮೇಲೆ" ತೆಗೆದುಕೊಳ್ಳಲಾಗಿದೆ ಎಂದು ಒತ್ತಾಯಿಸಲಾಗಿದೆ.

ಚುನಾವಣೆವರೆಗೂ ಉತ್ಪಾದನೆ ಕಡಿತಗೊಳಿಸಲು ಮನವಿ

ಚುನಾವಣೆವರೆಗೂ ಉತ್ಪಾದನೆ ಕಡಿತಗೊಳಿಸಲು ಮನವಿ

ಯುಎಸ್ ಮಧ್ಯಂತರ ಮತದಾನದ ಸಂದರ್ಭದಲ್ಲಿ ತೈಲ ಉತ್ಪಾದನೆಯನ್ನು ಯಾವುದೇ ರೀತಿ ಕಡಿತಗೊಳಿಸದಂತೆ ಅಧ್ಯಕ್ಷ ಜೋ ಬೈಡೆನ್ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಸೌದಿ ಅರೇಬಿಯಾಕ್ಕೆ "ಪರಿಣಾಮಗಳ" ಬಗ್ಗೆ ಭರವಸೆ ನೀಡಿದ್ದರು, ಆದರೆ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನ ಮೇಲಿನ ಆಕ್ರಮಣಕ್ಕೆ ನಿಧಿಯನ್ನು ನೀಡಲು ಹೆಚ್ಚಾಗಿ ತೈಲ ಬೆಲೆಗಳನ್ನು ಅವಲಂಬಿಸಿದ್ದಾರೆ. ಕೆಲವು US ಶಾಸಕರು ರಿಯಾದ್‌ನೊಂದಿಗಿನ ಎಲ್ಲಾ ಸಹಕಾರವನ್ನು ನಿಲ್ಲಿಸಲು ವಾಷಿಂಗ್ಟನ್‌ಗೆ ಕರೆ ನೀಡಿದ್ದಾರೆ.

ಸೌದಿ ಆಯ್ಕೆ ಈ ಬಾರಿ ಯುಎಸ್ ಅಲ್ಲ ರಷ್ಯಾ

ಸೌದಿ ಆಯ್ಕೆ ಈ ಬಾರಿ ಯುಎಸ್ ಅಲ್ಲ ರಷ್ಯಾ

ಜಾಗತಿಕ ಮಟ್ಟದಲ್ಲಿ ಬಿಕ್ಕಟ್ಟು ಸೃಷ್ಟಿಯಾದ ಸಂದರ್ಭದಲ್ಲಿ ಸೌದಿಗಳು ನಮ್ಮನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ನಾವು ತಿಳಿದುಕೊಳ್ಳಲು ಬಯಸಿದ್ದೇವೆ," ಎಂದು ಸೆನೆಟರ್ ಬಾಬ್ ಮೆನೆಂಡೆಜ್ ಈ ವಾರ ಹೇಳಿದ್ದರು. ಆದರೆ ಈ ಬಾರಿ ಸೌದಿಗಳು ಅದನ್ನು ಮಾಡಲಿಲ್ಲ, ಬದಲಿಗೆ ಅವರು ರಷ್ಯಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಎರಡನೆ ಮಹಾಯುದ್ಧದ ನಂತರ ಯುನೈಟೆಡ್ ಸ್ಟೇಟ್ಸ್ ಮತ್ತು ಸೌದಿ ಅರೇಬಿಯಾ ನಡುವಿನ ಸಂಪರ್ಕ ಕಡಿಡುಕೊಂಡಿತ್ತು.

ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರಕಾರ, ಬಿಕ್ಕಟ್ಟುಗಳಿಂದ ಕೂಡಿರುವ ಈ ಸಂಬಂಧವನ್ನು ಬೈಡೆನ್‌ನ ಪೂರ್ವವರ್ತಿ ಆಗಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಜ್ಜೀವನಗೊಳಿಸಿದರು. ಅವರ ಅವಧಿಯಲ್ಲಿ ರಿಯಾದ್ ಯುಎಸ್ ಶಸ್ತ್ರಾಸ್ತ್ರ ರಫ್ತನ್ನು ಪ್ರಾರಂಭಿಸಿತ್ತು. ಸೌದಿ ಅರೇಬಿಯಾ 300 ಪೇಟ್ರಿಯಾಟ್ MIM-104E ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸಲಿದೆ ಎಂದು ಸೌದಿ ಅರೇಬಿಯಾ ಆಗಸ್ಟ್‌ನಲ್ಲಿ ಒಪ್ಪಂದವನ್ನು ಮುಂದುವರೆಸಿದೆ.

English summary
Saudi Arabia, United States clash in Public over reason for OPEC+ oil cut. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X