ನಿತಾಖತ್: ಸೌದಿಯಲ್ಲಿರುವ ಭಾರತೀಯರ ಉದ್ಯೋಗಕ್ಕೆ ಮಾರಕ?
ಸೌದಿ ಅರೇಬಿಯಾ ಸರ್ಕಾರದ ಪರಿಷ್ಕೃತ ನಿತಾಖತ್ ಯೋಜನೆ ಇಲ್ಲಿನ ಭಾರತೀಯ ವಲಸಿಗರಿಗೆ ದೊಡ್ಡ ಹೊಡೆತಬೀಳುವ ಎಲ್ಲಾ ಲಕ್ಷಣಗಳೂ ನಿಚ್ಛಳವಾಗಿವೆ. ಸೌದಿ ಪ್ರಜೆಗಳಿಗೆ ಹೆಚ್ಚಿನ ಅವಕಾಶ ನೀಡುವ ಕುರಿತ ಈ ಯೋಜನೆಯಿಂದ ವಲಸಿಗ ಭಾರತೀಯರಿಗೆ ಉದ್ಯೋಗಾವಕಾಶದ ಕೊರತೆ ಸಂಭವಿಸುವ ಸಾಧ್ಯತೆ ಇದೆ.
ಪರಿಷ್ಕೃತ ನಿತಾಖತ್ ಯೋಜನೆ 2017ರ ಸೆಪ್ಟೆಂಬರ್ ನಿಂದ ಜಾರಿಗೆ ಬರಲಿದೆ. ಇಲ್ಲಿನ ಪ್ರತಿಷ್ಠಿತ ಕಂಪನಿಗಳಲ್ಲಿ ಸ್ಥಳೀಯರನ್ನೇ ನೇಮಕ ಮಾಡಿಕೊಳ್ಳುವ ಈ ಯೋಜನೆಯಿಂದ ಲಕ್ಷಾಂತರ ಭಾರತೀಯರು ಉದ್ಯೋಗಾವಕಾಶದಿಂದ ವಂಚಿತರಾಗಬಹುದು.

2016ರ ಮಾಹಿತಿ ಪ್ರಕಾರ ಸುಮಾರು 25 ಲಕ್ಷ ಭಾರತೀಯರು ಸೌದಿಯಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ ಇಲ್ಲಿ ಕಾನೂನು ದಿನೇ ದಿನೇ ಬದಲಾಗುತ್ತಿರುವುದರಿಂದ ವಲಸೆ ಹೋಗುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ.












Click it and Unblock the Notifications