ಸೌದಿ ಅರೇಬಿಯಾದ ಯುವರಾಜನಿಗೆ ಗಲ್ಲು ಶಿಕ್ಷೆ
ರಿಯಾದ್, ಅಕ್ಟೋಬರ್ 20: ವ್ಯಕ್ತಿಯೊಬ್ಬನನ್ನು ಗುಂಡಿಟ್ಟು ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ರಾಜ ಮನೆತನದ ಯುವರಾಜನನ್ನು ನೇಣಿಗೇರಿಸಲಾಗಿದೆ.
ಆದೆಲ್ ಅಲ್ ಮಹೆಮಿದೆ ಎಂಬ ಸೌದಿ ನಾಗರಿಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಕ್ಕಾಗಿ ಯುವರಾಜ ತುರ್ಕಿ ಬಿನ್ ಸೌದ್ ಅಲ್ ಕಬೀರ್ ಅವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು. ಈ ವಿಧಿ ವಿಧಾನ ಪೂರ್ಣಗೊಂಡಿದೆ ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸೌದಿಯ ಯುವರಾಜ ತನ್ನ ಸ್ನೇಹಿತನನ್ನು ಹತ್ಯೆ ಮಾಡಿದ ಆರೋಪ ಸಾಬೀತಾಗಿದೆ ಎಂದು ಯುವರಾಜನ ಹೆಸರನ್ನು ನಮೂದಿಸದೆ ನವೆಂಬರ್ 2014ರಲ್ಲಿ ಅರಬ್ ನ ಪತ್ರಿಕೆಯೊಂದು ವರದಿ ಮಾಡಿತ್ತು. ನಂತರ ಈ ಬಗ್ಗೆ ತನಿಖೆ ನಡೆಸಿದಾಗ ಯುವರಾಜ ತಪ್ಪು ಎಸಗಿಸುರುವುದು ಸಾಬೀತಾಗಿತ್ತು,
2012ರ ಡಿಸೆಂಬರ್ನಲ್ಲಿ ಸಮೀಪದ ಕ್ಯಾಂಪ್ನಲ್ಲಿ ಯುವರಾಜ ಮತ್ತು ಆತನ ಸ್ನೇಹಿತನ ನಡುವೆ ವಾಗ್ವಾದ ನಡೆದಿತ್ತು. ಆ ನಂತರ ಯುವರಾಜ ಆತನಿಗೆ ಗುಂಡಿಟ್ಟು ಹತ್ಯೆ ಮಾಡಿದ್ದ ಮತ್ತು ಮತ್ತೋರ್ವನಿಗೆ ಗುಂಡೇಟು ತಗುಲಿತ್ತು. ನಂತರ ಹತ್ಯೆಗೀಡಾದ ವ್ಯಕ್ತಿ ತನ್ನ ಸ್ನೇಹಿತ ಎಂದು ಪೊಲೀಸ ಮುಂದೆ ಯುವರಾಜ ಹೇಳಿಕೊಂಡಿದ್ದ.
ಸೌದಿ ಅರೇಬಿಯಾದಲ್ಲಿ ನ್ಯಾಯಾಂಗ ವ್ಯವಸ್ಥೆ ಕಟ್ಟುನಿಟ್ಟಾಗಿದ್ದು, 2015ರಲ್ಲಿ 158 ಜನರಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು. ಈ ವರ್ಷ ಇದುವರೆಗೂ 134 ಜನರಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ಕೊಲೆ, ಮಾದಕ ವಸ್ತು ಕಳ್ಳ ಸಾಗಣೆ, ದರೋಡೆ, ಅತ್ಯಾಚರ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗುತ್ತದೆ.












Click it and Unblock the Notifications