ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಬ್ಲಿಘಿ ಜಮಾತ್ ಸಂಘಟನೆಗೆ ನಿಷೇಧ ಹೇರಿದ ಸೌದಿ ಅರೇಬಿಯಾ

|
Google Oneindia Kannada News

ರಿಯಾದ್, ಡಿಸೆಂಬರ್ 12: ಸೌದಿ ಅರೇಬಿಯಾ ತಬ್ಲಿಘಿ ಜಮಾತ್ ಅನ್ನು ನಿಷೇಧಿಸಲು ಮುಂದಾಗಿದೆ, ಈ ಸಂಘಟನೆಯನ್ನು 'ಸಮಾಜಕ್ಕೆ ಅಪಾಯ' ಎಂದು ಕರೆದಿದೆ. ಸೌದಿ ಅರೇಬಿಯಾ ದೇಶದಲ್ಲಿ ಸುನ್ನಿ ಇಸ್ಲಾಮಿಕ್ ಮಿಷನರಿ ತಬ್ಲೀಘಿ ಜಮಾತ್ ಅನ್ನು ನಿಷೇಧಿಸಲು ಸರ್ಕಾರ ನಿರ್ಧರಿಸಿದೆ. ಸೌದಿ ಆಡಳಿತವು ಜಮಾತ್ ಅನ್ನು "ಸಮಾಜಕ್ಕೆ ಅಪಾಯ" ಮತ್ತು "ಭಯೋತ್ಪಾದನೆಯ ದ್ವಾರಗಳಲ್ಲಿ ಒಂದಾಗಿದೆ" ಎಂದು ಪರಿಗಣಿಸಿದೆ.

ದೇಶದ ಇಸ್ಲಾಮಿಕ್ ವ್ಯವಹಾರಗಳ ಸಚಿವರು, ಈ ಬಗ್ಗೆ ಪ್ರತಿಕ್ರಿಯಿಸಿ, ಸಾಮಾಜಿಕ ಮಾಧ್ಯಮದಲ್ಲಿ ಶುಕ್ರವಾರದ ಧರ್ಮೋಪದೇಶದ ಸಮಯದಲ್ಲಿ ತಬ್ಲಿಘಿಗಳ ಸಹವಾಸ ಮಾಡದಂತೆ ಇತರರಿಗೆ ಎಚ್ಚರಿಸಲು ಮಸೀದಿಗಳಿಗೆ ನಿರ್ದೇಶಿಸಲಾಗಿದೆ ಎಂದಿದ್ದಾರೆ.

"ಇಸ್ಲಾಮಿಕ್ ವ್ಯವಹಾರಗಳ ಸಚಿವ ಡಾ.ಅಬ್ದುಲ್ಲತೀಫ್ ಅಲ್_ಅಲ್ಶೇಖ್ ಅವರು ಮಸೀದಿಗಳ ಬೋಧಕರು ಮತ್ತು ಶುಕ್ರವಾರದ ಪ್ರಾರ್ಥನೆಯನ್ನು ತಾತ್ಕಾಲಿಕವಾಗಿ ನಡೆಸುವ ಮಸೀದಿಗಳಿಗೆ ಮುಂದಿನ ಶುಕ್ರವಾರದ ಧರ್ಮೋಪದೇಶ 5/6/1443 ಎಚ್ ಅನ್ನು (ತಬ್ಲಿಘಿ ಮತ್ತು ದವಾಹ್ ಗುಂಪಿನ ವಿರುದ್ಧ ಎಚ್ಚರಿಕೆ ನೀಡುವಂತೆ ನಿರ್ದೇಶಿಸಿದರು. ಇದನ್ನು (ಅಲ್ ಅಹಬಾಬ್) ಎಂದು ಕರೆಯಲಾಗುತ್ತದೆ" ಎಂದು ಸೌದಿ ಅರೇಬಿಯಾದ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದೆ.

https://kannada.oneindia.com/news/hubballi/anti-conversion-law-not-intended-to-target-any-community-says-cm-242071.html

ತಬ್ಲಿಘಿ ಜಮಾತ್ ಸಮಾಜಕ್ಕೆ ಒಡ್ಡುವ ಅಪಾಯದ ಬಗ್ಗೆ ಜನರಿಗೆ ತಿಳಿಸಲು ಸೌದಿ ಸರ್ಕಾರ ಮಸೀದಿಗಳಿಗೆ ಆದೇಶಿಸಿದೆ.

"ಈ ಗುಂಪಿನ ದಾರಿತಪ್ಪುವಿಕೆ, ವಿಚಲನ ಮತ್ತು ಅಪಾಯ" ದ ಘೋಷಣೆಯನ್ನು ಒಳಗೊಂಡಿರಬೇಕು ಮತ್ತು ಅದು "ಭಯೋತ್ಪಾದನೆಗೆ ಕರೆದೊಯ್ಯುವ ದ್ವಾರಗಳಲ್ಲಿ ಒಂದಾಗಿದೆ, ಅವರು ಬೇರೆ ರೀತಿಯಲ್ಲಿ ಹೇಳಿಕೊಂಡರೂ ನಂಬಬೇಡಿ" ಎಂದು ಘೋಷಿಸುವಂತೆ ಸಚಿವ ಡಾ ಅಬ್ದುಲ್ಲತೀಫ್ ಅಲ್-ಶೇಖ್ ಸೂಚಿಸಿದ್ದಾರೆ.

ಹೆಚ್ಚುವರಿಯಾಗಿ, ಘೋಷಣೆಯಲ್ಲಿ "ಅತ್ಯಂತ ಪ್ರಮುಖ ತಪ್ಪುಗಳನ್ನು" ಉಲ್ಲೇಖಿಸಬೇಕು, ಅವುಗಳು "ಸಮಾಜಕ್ಕೆ ಅಪಾಯ" ಮತ್ತು "(ತಬ್ಲಿಘಿ ಮತ್ತು ದಾವಾ ಗುಂಪು) ಸೇರಿದಂತೆ ಪಕ್ಷಪಾತದ ಗುಂಪುಗಳೊಂದಿಗೆ ಸಂಬಂಧವನ್ನು ಸೌದಿ ಸಾಮ್ರಾಜ್ಯದಲ್ಲಿ ನಿಷೇಧಿಸಲಾಗಿದೆ ಎಂದು ಹೇಳಿಕೆ ನೀಡಬೇಕು.

ತಬ್ಲಿಘಿ ಜಮಾತ್, ಗಮನಾರ್ಹವಾಗಿ, ಒಂದು ಬಹುರಾಷ್ಟ್ರೀಯ ಸುನ್ನಿ ಇಸ್ಲಾಮಿಕ್ ಮಿಷನರಿ ಚಳುವಳಿಯಾಗಿದ್ದು, ಇದು ಮುಸ್ಲಿಮರನ್ನು ಉತ್ತೇಜಿಸಲು ಮತ್ತು ಸುನ್ನಿ ಇಸ್ಲಾಂನ ಶುದ್ಧ ರೂಪವನ್ನು ಅನುಸರಿಸಲು ಸಹ ಸದಸ್ಯರನ್ನು ಉತ್ತೇಜಿಸಲು ಕೇಂದ್ರೀಕರಿಸುತ್ತದೆ. ತಬ್ಲಿಘಿ ಜಮಾತ್ ನಂಬಿಕೆಯನ್ನು ಹರಡುವ ಗುಂಪು. ಇದು ಸುನ್ನಿ ಇಸ್ಲಾಮಿಕ್ ಮಿಷನರಿ ಚಳವಳಿಯಾಗಿದ್ದು, ಧಾರ್ಮಿಕ, ಉಡುಗೆ ಮತ್ತು ವೈಯಕ್ತಿಕ ನಡವಳಿಕೆಯ ವಿಷಯಗಳಲ್ಲಿ ಮುಸ್ಲಿಮರನ್ನು ತಲುಪುವ ಗುರಿ ಹೊಂದಿದೆ.

ತಬ್ಲೀಘಿ ಆರು ತತ್ವಗಳನ್ನು ಆಧರಿಸಿದೆ. ಅವುಗಳು ಕಾಲಿಮಾ, ಸಲಾತ್, ಇಲ್ಮ್ ಮತ್ತು ಧಿಕ್ರ್, ಇಕ್ರಮ್-ಇ-ಮುಸ್ಲಿಂ, ಇಖ್ಲಾಸ್-ಇ-ನಿಯಾ ಮತ್ತು ದಾವತ್-ಒ-ತಬ್ಲೀಗ್ ಆಗಿವೆ.

ಇದನ್ನು 1927ರಲ್ಲಿ ಮೌಲಾನಾ ಮುಹಮ್ಮದ್ ಇಲ್ಯಾಸ್ ಖಂಡಲಾವ್ ಮೇವಾಟ್ ನಲ್ಲಿ ಪ್ರಾರಂಭಿಸಿದರು. ಇಲ್ಯಾಸ್ ಮುಸ್ಲಿಮರನ್ನು ಸಾಂಪ್ರದಾಯಿಕ ಇಸ್ಲಾಂ ಧರ್ಮಕ್ಕೆ ಮರಳಿಸುವ ಗುರಿಯನ್ನು ಹೊಂದಿದ್ದರು ಮತ್ತು ಅವರು ದಿಯೋಬಂದ್ ಮತ್ತು ಸಹರನ್ ಪುರದ ಹಲವಾರು ಯುವಕರಿಗೆ ತರಬೇತಿ ನೀಡಿ ಅವರನ್ನು ಮೇವಾತ್‌ಗೆ ಕಳುಹಿಸಿದರು. ಇಲ್ಲಿಯೇ ತಬ್ಲಿಘಿ ಮಸೀದಿಗಳು ಮತ್ತು ಮದರಸಾಗಳ ಜಾಲವನ್ನು ಸ್ಥಾಪಿಸಿದರು.

1947ರ ಭಾರತದ ವಿಭಜನೆಯ ನಂತರ, ಲಾಹೋರ್‌ನ ರೈವಿಂಡ್‌ನಲ್ಲಿ ಪಾಕಿಸ್ತಾನದ ಘಟಕ/ಕೇಂದ್ರವನ್ನು ರಚಿಸಲಾಯಿತು. ಸದ್ಯ ಅತಿದೊಡ್ಡ ಕೇಂದ್ರವು ಬಾಂಗ್ಲಾದೇಶದಲ್ಲಿದೆ. ಇದು ಮಲೇಷ್ಯಾ, ಸಿಂಗಾಪುರ್ ಮತ್ತು ಇಂಡೋನೇಷ್ಯಾವನ್ನು ಹೊರತುಪಡಿಸಿ ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್‌ನಲ್ಲಿ ಕೇಂದ್ರಗಳನ್ನು ಸಹ ಹೊಂದಿದೆ. ಬೆಳಿಗ್ಗೆ 8 ರಿಂದ 11 ರವರೆಗಿನ ಅದರ ಚರ್ಚೆಗಳು ನಡೆಯುತ್ತದೆ. ಅಲ್ಲಿ ಜನರನ್ನು ಸುಮಾರು 10 ಜನರ ಗುಂಪುಗಳಾಗಿ ವಿಂಗಡಿಸಲಾಗಿದೆ. ನಂತರ ಪ್ರತಿ ಗುಂಪು ಒಬ್ಬ ನಾಯಕನನ್ನು ಆಯ್ಕೆ ಮಾಡುತ್ತದೆ. ವ್ಯಕ್ತಿಗಳು ಎಷ್ಟು ಹಣವನ್ನು ತಂದಿದ್ದಾರೆ ಎಂಬುದರ ಆಧಾರದ ಮೇಲೆ ಗುಂಪಿಗೆ ಗುರಿ ನೀಡಲಾಗುತ್ತದೆ. ಮಧ್ಯಾಹ್ನ 3 ರಿಂದ 5 ರ ನಡುವೆ ಹೊಸಬರಿಗೆ ಇಸ್ಲಾಂ ಧರ್ಮದ ಕುರಿತು ಮಾತುಕತೆ ನಡೆಯುತ್ತಿದೆ. ಸೂರ್ಯಾಸ್ತದ ನಂತರ, ಕುರಾನ್‌ ಪಠಣ ಮಾಡಲಾಗುತ್ತದೆ.

Recommended Video

Rohit Sharma ಮುಂಬೈ ತಂಡದ ನಾಯಕತ್ವದ ಬಗ್ಗೆ ಬಾಯ್ಬಿಟ್ಟ ಸತ್ಯ | Oneindia Kannada

English summary
Saudi Arabia has decided to ban the Tablighi Jamaat, which is a transnational Sunni Islamic missionary movement, in the country. The Saudi administration termed the Jamaat as a “danger to society” and “one of the gates of terrorism.”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X