• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭೂತಾನ್ ಗಡಿಯಲ್ಲಿ 4 ಹೊಸ ಗ್ರಾಮ ನಿರ್ಮಿಸಿದ ಚೀನಾ!

|
Google Oneindia Kannada News

ನವದೆಹಲಿ, ನವೆಂಬರ್ 18: ಗಡಿ ಪ್ರದೇಶಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಚೀನಾ ತನ್ನದೇ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿರುವುದನ್ನು ಮುಂದುವರಿಸಿದೆ. ಅರುಣಾಚಲ ಪ್ರದೇಶದ ಗಡಿಯಲ್ಲಿ 100 ಮನೆಗಳನ್ನು ನಿರ್ಮಿಸಿರುವ ಚೀನಾ, ಭೂತಾನ್ ಗಡಿ ಪ್ರಾಂತ್ಯದಲ್ಲಿ ನಾಲ್ಕು ಗ್ರಾಮಗಳನ್ನೇ ನಿರ್ಮಿಸಿರುವುದನ್ನು ಉಪಗ್ರಹ ಚಿತ್ರಗಳು ಸಾಕ್ಷೀಕರಿಸಿವೆ.

ಚೀನಾದ ಸೇನೆ ಕಾರ್ಯಚಟುವಟಿಕೆಗಳ ನಡುವೆ ಗಡಿ ಪ್ರದೇಶಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಉಪಗ್ರಹ ಚಿತ್ರಗಳು ಬಿಡುಗಡೆಯಾಗಿದೆ. ಉಪಗ್ರಹ ಚಿತ್ರಗಳ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಭೂತಾನ್ ಪ್ರದೇಶದಲ್ಲಿ ಚೀನಾ ಸೇನೆಯು ನಾಲ್ಕು ಗ್ರಾಮಗಳನ್ನು ನಿರ್ಮಿಸಿದೆ. ಸರಿಸುಮಾರು 100 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹಲವಾರು ಹೊಸ ಹಳ್ಳಿಗಳು ಹರಡಿಕೊಂಡಿವೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಅರುಣಾಚಲ ಗಡಿಯಲ್ಲಿ 100 ಮನೆ ಕಟ್ಟಿದ ಚೀನಾ; ಏನು ಹೇಳುತ್ತೆ ಭಾರತ?ಅರುಣಾಚಲ ಗಡಿಯಲ್ಲಿ 100 ಮನೆ ಕಟ್ಟಿದ ಚೀನಾ; ಏನು ಹೇಳುತ್ತೆ ಭಾರತ?

ವಿವಾದಿತ ಭೂಮಿ ಡೋಕ್ಲಾಂ ಪ್ರಸ್ಥಭೂಮಿಯ ಸಮೀಪದಲ್ಲಿದೆ. ಕಳೆದ 2017ರಲ್ಲಿ ಇದೇ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೇನೆಗಳು ಮುಖಾಮುಖಿಯಾಗಿದ್ದವು. ಇದು ನವದೆಹಲಿ ಮತ್ತು ಬೀಜಿಂಗ್ ನಡುವಿನ ವಿವಾದಕ್ಕೆ ಕಾರಣವಾಗಿದ್ದು, ಈ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಚಟುವಟಿಕೆಯನ್ನು ಚೀನಾ ಪುನರಾರಂಭಿಸಿತು. ಇಂಟೆಲ್ ಲ್ಯಾಬ್‌ನ ಜಾಗತಿಕ ಸಂಶೋಧಕ @detresfa ಅವರ ಟ್ವೀಟ್, ಇದು ಭೌಗೋಳಿಕ ರಾಜಕೀಯ ಗುಪ್ತಚರ ತಜ್ಞರ ಆಳವಾದ ವಿಶ್ಲೇಷಣೆಯನ್ನು ಒಳಗೊಂಡಿದೆ.

ಹೊಸ ಆತಂಕ ಸೃಷ್ಟಿಸಿದ ಚೀನಾದ ಗ್ರಾಮ ನಿರ್ಮಾಣ ಕಾರ್ಯ

ಹೊಸ ಆತಂಕ ಸೃಷ್ಟಿಸಿದ ಚೀನಾದ ಗ್ರಾಮ ನಿರ್ಮಾಣ ಕಾರ್ಯ

ಭೂತಾನ್ ನೆಲದಲ್ಲಿ ಚೀನಾ ಗ್ರಾಮಗಳ ನಿರ್ಮಾಣ ಭಾರತಕ್ಕೆ ಹೊಸ ತಲೆನೋವು ತಂದಿಟ್ಟಿದೆ. ಏಕೆಂದರೆ ಐತಿಹಾಸಿಕವಾಗಿ ಭೂತಾನ್‌ಗೆ ತನ್ನ ಬಾಹ್ಯ ಸಂಬಂಧ ನೀತಿಯ ಬಗ್ಗೆ ಸಲಹೆ ನೀಡಿರುವ ಭಾರತವು ಅದರ ಸಶಸ್ತ್ರ ಪಡೆಗಳಿಗೆ ತರಬೇತಿ ನೀಡುವುದನ್ನು ಮುಂದುವರೆಸಿದೆ. ಭೂತಾನ್ ತನ್ನ ಭೂ ಗಡಿಗಳ ಬಗ್ಗೆ ಮರು ಮಾತುಕತೆ ನಡೆಸಲು ಚೀನಾದಿಂದ ನಿರಂತರ ಒತ್ತಡವನ್ನು ಎದುರಿಸುತ್ತಿದೆ. ಈ ಒಪ್ಪಂದದ ಬಾಹ್ಯರೇಖೆಗಳನ್ನು ಎಂದಿಗೂ ಸಂಪೂರ್ಣವಾಗಿ ವಿವರಿಸಲಾಗಿಲ್ಲ. ತನ್ನ ನೆಲದಲ್ಲಿ ಈ ಹೊಸ ಹಳ್ಳಿಗಳ ನಿರ್ಮಾಣ ಮಾಡುತ್ತಿರುವುದು ಒಪ್ಪಂದದ ಒಂದು ಭಾಗವಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಚೀನಾ ಗ್ರಾಮಗಳ ನಿರ್ಮಾಣ ಯಾವಾಗ?

ಚೀನಾ ಗ್ರಾಮಗಳ ನಿರ್ಮಾಣ ಯಾವಾಗ?

ಭೂತಾನ್ ಪ್ರಾಂತ್ಯದಲ್ಲಿ ಚೀನಾ ಸೇನಾ ಪಡೆಗಳು 2020ರ ಮೇ ತಿಂಗಳಿನಿಂದ 2021ರ ನವೆಂಬರ್ ತಿಂಗಳ ನಡುವೆ ನಾಲ್ಕು ಗ್ರಾಮಗಳನ್ನು ನಿರ್ಮಿಸಿದೆ. ಡೋಕ್ಲಾಮ್ ಪ್ರಸ್ಥಭೂಮಿಯ ಸಮೀಪದಲ್ಲಿ ಚೀನಾ ಗ್ರಾಮವನ್ನು ನಿರ್ಮಿಸುತ್ತಿದೆ ಎಂದು ಕಳೆದ ವರ್ಷ ಎನ್‌ಡಿಟಿವಿ ವರದಿ ಮಾಡಿತ್ತು, ಅಲ್ಲಿ ಚೀನಾ ಮತ್ತು ಭಾರತೀಯ ಮಿಲಿಟರಿಗಳು 2017 ರಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಹೊಂದಿದ್ದವು.

ಪರಿಸ್ಥಿತಿ ತೋರಿಸುವ ಉಪಗ್ರಹ ಚಿತ್ರಗಳು

ಪರಿಸ್ಥಿತಿ ತೋರಿಸುವ ಉಪಗ್ರಹ ಚಿತ್ರಗಳು

ಚೀನಾದ ಸರ್ಕಾರಿ ಮಾಧ್ಯಮದೊಂದಿಗೆ ಹಿರಿಯ ಪತ್ರಕರ್ತರೊಬ್ಬರು ಪೋಸ್ಟ್ ಮಾಡಿದ ಉಪಗ್ರಹದ ಚಿತ್ರಗಳಿಂದ ಈ ಗ್ರಾಮವು 2 ಕಿಲೋಮೀಟರ್ ಭೂತಾನ್ ಪ್ರದೇಶದೊಳಗೆ, ಡೋಕ್ಲಾಮ್‌ಗೆ ಬಹಳ ಹತ್ತಿರದಲ್ಲಿದೆ ಎಂಬುದನ್ನು ತೋರಿಸುತ್ತಿದೆ.

  ಮೂಲೆಗುಂಪಾದವರ ಆಟ ನೋಡಿ ಶಾಕ್ ಆದ ಐಪಿಎಲ್ ಫ್ರಾಂಚೈಸಿಗಳು | Oneindia Kannada
  ಗಡಿ ಪ್ರದೇಶದಲ್ಲಿ 100 ಮನೆ ನಿರ್ಮಿಸಿದ ಚೀನಾ

  ಗಡಿ ಪ್ರದೇಶದಲ್ಲಿ 100 ಮನೆ ನಿರ್ಮಿಸಿದ ಚೀನಾ

  ಭಾರತದ ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶದಲ್ಲಿ ಚೀನಾ ಹೊಸ ಗ್ರಾಮ ರಚಿಸಿಕೊಂಡಿರುವುದು ಬಾಹ್ಯಾಕಾಶದಲ್ಲಿ ಸೆರೆಯಾದ ಚಿತ್ರಗಳು ತೋರಿದ್ದವು. 101ಕ್ಕೂ ಹೆಚ್ಚು ಮನೆಗಳನ್ನು ಈ ಗ್ರಾಮದಲ್ಲಿ ಕಟ್ಟಿಕೊಳ್ಳಲಾಗಿದ್ದು, ನವೆಂಬರ್.01ರ 2020ರಲ್ಲಿ ಇದೇ ಚಿತ್ರಗಳ ಮೇಲೆ ವಿಮರ್ಶೆ ಮಾಡಲಾಗಿತ್ತು. ಅಂದು ಚೀನಾ ಸೇನೆಯು ಭಾರತದ ಗಡಿಗೆ ಸೇರಿದ ಸರಿ ಸುಮಾರು 4.5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಚೀನಾ ಸೇನೆಯು ಪ್ರವೇಶಿಸುತ್ತಿದೆ ಎಂದು ಆರೋಪಿಸಲಾಗಿತ್ತು.

  ಹಿಮಾಲಯದ ಪರ್ವತಗಳ ಪೂರ್ವ ಭಾಗದಲ್ಲಿ ಗಡಿ ವಿಚಾರಕ್ಕೆ ದಶಕಗಳ ಕಾಲದಿಂದಲೂ ಸಂಘರ್ಷ ಮತ್ತು ಹೋರಾಟ ನಡೆಯುತ್ತಿವೆ. ಇದರ ಮಧ್ಯೆ ಅರುಣಾಚಲ ಪ್ರದೇಶ ಸುಬನ್ಸಿರಿ ಜಿಲ್ಲೆ ಮೇಲ್ಭಾಗದಲ್ಲಿರುವ ಹಾಗೂ ತ್ಸಾರಿ ಚು ನದಿಗೆ ಹೊಂದಿಕೊಂಡಂತೆ ಈ ಗ್ರಾಮವನ್ನು ರಚಿಸಿಕೊಳ್ಳಲಾಗಿದೆ. ಇದೇ ಗಡಿ ಪ್ರದೇಶವು ದಶಕಗಳ ಕಾಲದಿಂದಲೂ ಭಾರತ ಮತ್ತು ಚೀನಾದ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ವಿವಾದ ಇತ್ಯರ್ಥಕ್ಕೂ ಮೊದಲೇ ಚೀನಾ ಅಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿರುವುದು ಗೋಚರಿಸಿತ್ತು.

  ನವೆಂಬರ್.01, 2020 ಮತ್ತು 2019ರ ಆಗಸ್ಟ್.26ರ ಭಾವಚಿತ್ರಗಳ ನಡುವೆ ಸಾಕಷ್ಟು ವ್ಯತ್ಯಾಸಗಳು ಕಾಣುತ್ತಿವೆ. ಕಳೆದ 2019ರಲ್ಲಿ ಯಾವುದೇ ರೀತಿ ಕಾಮಗಾರಿಯಿಲ್ಲದೇ ಬಣಗುಡುತ್ತಿದ್ದ ಪ್ರದೇಶದ ಚಿತ್ರಣ ಇದೀಗ ಸಂಪೂರ್ಣ ಬದಲಾದಂತಿದೆ. ಅಂದರೆ ಒಂದು ವರ್ಷದಲ್ಲಿಯೇ ಚೀನಾ ಗಡಿಯಲ್ಲಿ ತನ್ನ ಕಾರ್ಯ ಸಾಧನೆ ಮಾಡಿಕೊಂಡಿದೆಯಾ ಎಂಬ ಅನುಮಾನಗಳನ್ನು ಇದೊಂದು ಚಿತ್ರವು ಹುಟ್ಟು ಹಾಕುತ್ತಿದೆ.

  English summary
  Satellite Images Shows China Built 4 Village in Last one Year at Bhutanese Territory. Know More.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X