ಅಮೆರಿಕ ವಿರುದ್ಧ ಪುಟಿನ್ ಪರಮಾಣು ದಾಳಿ ಎಚ್ಚರಿಕೆ?
ಮಾಸ್ಕೋ: ರಷ್ಯಾ ಅಧ್ಯಕ್ಷ ಪುಟಿನ್ ಭಾಷಣ ಅಂದ್ರೆ ಖದರ್ ಇರುತ್ತೆ. ಅದ್ರಲ್ಲೂ ಪುಟಿನ್ ಮಾತಿನಲ್ಲಿ ಶತ್ರು ಪಡೆಗೆ ವಾರ್ನಿಂಗ್ ಇದ್ದೇ ಇರುತ್ತೆ. ಇದೇ ರೀತಿ ಇಂದು ರಷ್ಯಾದ ವಿಜಯ ದಿನಸ ಆಚರಣೆ ವೇಳೆ ದೊಡ್ಡಣ್ಣ ಅಮೆರಿಕಗೆ ಪರಮಾಣು ದಾಳಿ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಪುಟಿನ್. ಅಲ್ಲದೆ ಪುಟಿನ್ ಹೇಳಿರುವ ಅದೊಂದು ಮಾತು ಸಂಚಲನ ಸೃಷ್ಟಿಸಿದೆ.
Putin: The West provokes conflicts and upheavals, destroys traditional values in order to continue to dictate its own rules, and in fact, a system of robbery and violence pic.twitter.com/bb1lF0yWBl
— Spriter (@Spriter99880) May 9, 2023
ನಾಜಿ ಜರ್ಮನಿ ಸಂಪೂರ್ಣ ನಾಶವಾಗಿ ರಷ್ಯಾ ಮುಂದೆ ಮಂಡಿ ಊರಿದ ಸವಿ ನೆನಪಿಗೆ ರಷ್ಯಾ ದೇಶ ಪ್ರತಿವರ್ಷ ಮೇ 9ರಂದು 'ವಿಜಯ ದಿವಸ' ಆಚರಿಸುತ್ತದೆ. ಇಂದು 'ವಿಜಯ ದಿವಸ'ದ ಸಮಾರಂಭದಲ್ಲಿ ರಷ್ಯಾ ದೇಶದ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಮೆರಿಕ ನಾಯಕರ ಎದೆಯಲ್ಲಿ ನಡುಕ ತರುವ ಮಾತುಗಳನ್ನಾಡಿದ್ದಾರೆ. ನಮ್ಮ ತಂಟೆಗೆ ಬಂದರೆ ಯಾರನ್ನೂ ಸುಮ್ಮನೆ ಬಿಡುವ ಮಾತೇ ಇಲ್ಲವೆಂದು ಪುಟಿನ್ ಪರೋಕ್ಷ ಎಚ್ಚರಿಕೆ ಕೊಟ್ಟಿದ್ದಾರೆ. ಪುಟಿನ್ ಹೇಳಿದ ಆ ಮಾತು ಸಂಚಲನದ ಸಾಗರ ಸೃಷ್ಟಿಸಿದೆ.

ಪರಮಾಣು ಬಾಂಬ್ ಹಾಕೋದು ಪಕ್ಕಾ?
ಹೌದು, ಇಂದು ರಷ್ಯಾದ ಐತಿಹಾಸಿಕ ಗೆಲುವಿನ ಬಗ್ಗೆ ಸ್ಮರಣೆ ಮಾಡುತ್ತಾ ಪುಟಿನ್ ಭಾಷಣ ಮಾಡುವಾಗ ಆ ಒಂದು ಮಾತು ಖಡಕ್ ಆಗಿ ಹೇಳಿದ್ದಾರೆ. ಅದೇನಂದ್ರೆ 'ನಾಗರಿಕತೆ ಮತ್ತೊಮ್ಮೆ ನಿರ್ಣಾಯಕ ತಿರುವಿನಲ್ಲಿದೆ' ಎಂದಿದ್ದಾರೆ. ಇದು ಹಲವು ಊಹಾಪೋಹಕ್ಕೆ ಪುಷ್ಟಿ ನೀಡುವ ಜೊತೆಗೆ, ಜಪಾನ್ ಮೇಲೆ ಅಮೆರಿಕ ಹಾಕಿದ್ದ ಭೀಕರ ಅಣುಬಾಂಬ್ ದಾಳಿಯನ್ನ ಮತ್ತೊಮ್ಮೆ ನೆನಪಿಸುವಂತಿದೆ. 2ನೇ ಮಹಾಯುದ್ಧದ ಬಳಿಕ ಮತ್ತೊಮ್ಮೆ ಅಂತಹ ಭೀಕರ ನ್ಯೂಕ್ಲಿಯರ್ ದಾಳಿ ಭಯ ಶುರುವಾಗಿದೆ. ನಾಗರಿಕೆಯ ವಿಚಾರ ಪ್ರಸ್ತಾಪ ಮಾಡಿದ್ದು ಯಾಕೆ ಪುಟಿನ್ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.
'ಪಶ್ಚಿಮ ದೇಶಗಳು ಯುದ್ಧ ಪ್ರಚೋದಿಸುತ್ತವೆ!'
ಮತ್ತೊಂದ್ಕಡೆ ಭಾಷಣದಲ್ಲಿ ಅಮೆರಿಕ ಸೇರಿದಂತೆ ಪಶ್ಚಿಮ ರಾಷ್ಟ್ರಗಳ ವಿರುದ್ಧ ಪುಟಿನ್ ಕೆಂಡಕಾರಿದ್ದಾರೆ. ಈ ಸಂದರ್ಭದಲ್ಲಿ ರಷ್ಯಾ ತಾಕತ್ತು ಎಂತಹದ್ದು ಎಂಬುದನ್ನೂ ಒತ್ತಿ ಹೇಳಿದ್ದಾರೆ ಪುಟಿನ್. 'ಪಶ್ಚಿಮದ ದೇಶಗಳು ಯುದ್ಧ ಹಾಗೂ ದಂಗೆ ಪ್ರಚೋದಿಸುತ್ತವೆ. ತಮ್ಮದೇ ನಿಯಮ ಜಾರಿಗೆ ತರಲು ಸಾಂಪ್ರದಾಯಿಕ ಮೌಲ್ಯ ನಾಶ ಮಾಡುತ್ತವೆ. ಇದು ವಾಸ್ತವವಾಗಿ ದರೋಡೆ ಮತ್ತು ಹಿಂಸಾಚಾರದ ವ್ಯವಸ್ಥೆ' ಎಂದು ಪರೋಕ್ಷವಾಗಿ ಅಮೆರಿಕ ಬೆಂಕಿ ಹಚ್ಚುವ ದೇಶ ಎಂದು ಆರೋಪಿಸಿದ್ದಾರೆ ಪುಟಿನ್.
ಪುಟಿನ್ ಹೇಳಿಕೆಯಿಂದ ಭಯ ಭಯ!
ಅಷ್ಟಕ್ಕೂ ಪುಟಿನ್ ಹೇಳಿಕೆಯ ಬಳಿಕ ಈಗ ಪರಮಾಣು ಅಥವಾ ನ್ಯೂಕ್ಲಿಯರ್ ಭೀತಿ ಶುರುವಾಗಲು ಪ್ರಮುಖ ಕಾರಣ ಇದೆ. ಉಕ್ರೇನ್‌ನ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರ ಸುತ್ತಮುತ್ತ ವಾಸ ಇರುವ ಜನರನ್ನ ಅಲ್ಲಿಂದ ಖಾಲಿ ಮಾಡಿಸಿದೆ ರಷ್ಯಾ ಸೇನೆ. ಈ ಮೂಲಕ ಭೀಕರ ಅಣು ಯುದ್ಧಕ್ಕೆ ರಷ್ಯಾ ಸೇನೆ ತಯಾರಿ ನಡೆಸಿತಾ? ಎಂಬ ಅನುಮಾನ ಮೂಡಿದೆ. ಸುಮಾರು 1 ವರ್ಷದಿಂದ ಜಪೋರಿಝಿಯಾ ಅಣುಸ್ಥಾವರ ರಷ್ಯಾ ಕಂಟ್ರೋಲ್‌ಗೆ ಬಂದಿದ್ದು, ಉಕ್ರೇನ್ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಅಣು ಸ್ಥಾವರ ಬಳಸಿಕೊಳ್ಳಬಹುದು ಎಂಬ ಆರೋಪ ಕೇಳಿಬರುತ್ತಿದೆ. ಈ ಘಟನೆ ಬೆನ್ನಲ್ಲೇ ಪುಟಿನ್ ವಾರ್ನಿಂಗ್ ಸಹಜವಾಗಿ ಭಯ ಹುಟ್ಟುಹಾಕಿದೆ.

7 ಸುತ್ತಿನ ಕೋಟೆ ರಷ್ಯಾ ರಾಜಧಾನಿ
ಹಿಟ್ಲರ್‌ನ ಜರ್ಮನಿ ಸೇನೆ ವಿರುದ್ಧ ರಷ್ಯಾ ಸೇನೆ ಐತಿಹಾಸಿಕ ಜಯ ಸಾಧಿಸಿದ್ದು 1945ರ ಮೇ 8ರಂದು. ಆದ್ರೆ ರಷ್ಯಾ ಆಚರಣೆ ನಡೆಯುವುದು ಮೇ 9ಕ್ಕೆ! ಇದಕ್ಕೆ ಕಾರಣ ರಷ್ಯಾದ ಟೈಂ. ಅಂದಹಾಗೆ ನಾಜಿ ಜರ್ಮನಿ ರಷ್ಯಾ ಎದುರು ಶರಣಾಗಿ ಮಂಡಿಯೂರಿದ ಸಮಯ ಮೇ 8, ಆದರೆ ಅದೇ ಹೊತ್ತಲ್ಲಿ ರಷ್ಯಾ ಟೈಮಿಂಗ್ಸ್ ಮೇ 9ನ್ನು ತಲುಪಿತ್ತು. ಈ ಕಾರಣಕ್ಕೆ ರಷ್ಯಾದಲ್ಲಿ ನಾಜಿ ಜರ್ಮನಿ ವಿರುದ್ಧದ ಗೆಲುವಿನ 'ವಿಜಯ ದಿವಸ' ಆಚರಣೆ ಮೇ 9ಕ್ಕೆ ನಡೆಯುತ್ತದೆ. ಈ ಬಾರಿ 'ರೆಡ್ ಸ್ಕ್ವೇರ್ ಪರೇಡ್' ನಡೆಯುವುದೇ ಅನುಮಾನವಾಗಿತ್ತು. ಭೀತಿ ಮರೆಯಾಗಿ ರಷ್ಯಾ ಸೇನೆ ಪರೇಡ್ ನಡೆಸಿದ್ದು, ಭದ್ರತೆ ಕಾರಣಕ್ಕೆ ರಷ್ಯಾ ರಾಜಧಾನಿ ಮಾಸ್ಕೋ 7 ಸುತ್ತಿನ ಕೋಟೆಯಂತಾಗಿದೆ.












Click it and Unblock the Notifications