Russia & Ukraine: ರೊಚ್ಚಿಗೆದ್ದ ರಷ್ಯಾ ಅಧ್ಯಕ್ಷ ಪುಟಿನ್, ಶತ್ರುಗಳಿಗೆ ತಿಥಿ ವಡೆ ಗ್ಯಾರಂಟಿ?
ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ಕಿರಿಕ್ ಜೋರಾಗುತ್ತಿದೆ. ಒಂದು ಕಡೆ ಇಬ್ಬರೂ ಸೇರಿ ಮಾತುಕತೆ ಮೂಲಕ ಸಮಸ್ಯೆ ಸರಿ ಮಾಡಿಕೊಳ್ಳುತ್ತಾರೆ ಅನ್ನೋ ಭರವಸೆಯಲ್ಲಿ ಇಡೀ ಜಗತ್ತು ಕಾಯುತ್ತಿದೆ. ಆದರೆ ರಷ್ಯಾ & ಉಕ್ರೇನ್ ಮಾತ್ರ ತಮ್ಮ ನಡುವಿನ ಕಿರಿಕ್ ಮುಂದುವರಿಸಿ ಮತ್ತೊಂದು ಮಹಾಯುದ್ಧದ ಭಯ ಹುಟ್ಟುಹಾಕುತ್ತಿವೆ. ಅದರಲ್ಲೂ ನಾವು ಸುಮ್ಮನಿದ್ದರೂ ಉಕ್ರೇನ್ ನಮ್ಮನ್ನು ಕೆಣಕುತ್ತಾ ಇದೆ ಅಂತಾ ರೊಚ್ಚಿಗೆದ್ದಿದ್ದಾರೆ, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್.
ಹೌದು, ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಶುರುವಾಗಿ ಇನ್ನೇನು ಕೆಲವೇ ದಿನಗಳಲ್ಲಿ 3 ತುಂಬಿ 4ನೇ ವರ್ಷಕ್ಕೆ ಬೀಳಲಿದೆ. ಹೀಗಾಗಿಯೇ ಭಯದ ವಾತಾವರಣ ನಿರ್ಮಾಣವಾಗಿದ್ದು, ರಷ್ಯಾ ಯಾವ ಕ್ಷಣದಲ್ಲಿ ಬೇಕಾದರೂ ರೊಚ್ಚಿಗೆದ್ದು ನ್ಯೂಕ್ಲಿಯರ್ ದಾಳಿ ಮಾಡುವ ಆತಂಕ ಕಾಡುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೂ ಅಲರ್ಟ್ ಆಗದ ಉಕ್ರೇನ್ ಮಾತ್ರ ಪದೇ ಪದೇ ರಷ್ಯಾ ಮೇಲೆ ದಾಳಿ ಮಾಡುತ್ತಿದೆ. ಇದರಿಂದ ರಷ್ಯಾ ಮತ್ತಷ್ಟು ರೊಚ್ಚಿಗೇಳುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ ಉಕ್ರೇನ್ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ರಷ್ಯಾ ಅಧ್ಯಕ್ಷರಾದ ಪುಟಿನ್ ಏನು ಹೇಳಿದ್ದಾರೆ ಗೊತ್ತಾ?

ರಷ್ಯಾ ಅಧ್ಯಕ್ಷರಿಂದ ಡೈರೆಕ್ಟ್ ವಾರ್ನಿಂಗ್!
ಉಕ್ರೇನ್ ನಡೆ ಬಗ್ಗೆ ಎಚ್ಚರಿಕೆ ಮಾತುಗಳನ್ನ ಆಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು, ರಷ್ಯಾದ ನೈರುತ್ಯ ಕುರ್ಸ್ಕ್ ಪ್ರದೇಶದ ಮೇಲೆ ಉಕ್ರೇನ್ ನಡೆಸಿರುವ ದಾಳಿ ಪ್ರಚೋದನೆ ನೀಡಿದಂತೆ ಇದೆ. ಇದೇ ರೀತಿಯ ಪರಿಸ್ಥಿತಿ ಮುಂದುವರಿದರೆ, ಅದಕ್ಕೆ ತಕ್ಕನಾದ ಕ್ರಮ ಕೂಡ ನಾವು ಜರುಗಿಸಲು ಸಿದ್ಧ. ಉಕ್ರೇನ್ ಪದೇ ಪದೇ ಈ ರೀತಿಯಾಗಿ ದಾಳಿಗಳನ್ನ ಮಾಡಿ ರಷ್ಯಾ ಸೇನೆಯನ್ನು ಕೆಣಕುತ್ತಿದೆ. ಹೀಗಾಗಿ ರಷ್ಯಾ ಸೇನೆ ಕೂಡ ಪ್ರತಿ ದಾಳಿಗೆ ಸಿದ್ಧವಾಗಿದೆ ಎನ್ನುವ ರೀತಿ ವ್ಲಾದಿಮಿರ್ ಪುಟಿನ್ ಇದೀಗ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಮರುದಾಳಿಗೆ ಸಿದ್ಧತೆ ನಡೆಸಿದ ರಷ್ಯಾ?
ಮತ್ತೊಂದು ಕಡೆ ರಷ್ಯಾ ಮೇಲೆ ಉಕ್ರೇನ್ ಈ ರೀತಿಯ ದಾಳಿ ನಡೆಸಿದ ತಕ್ಷಣ ರಷ್ಯಾ ಅಧ್ಯಕ್ಷ ಪುಟಿನ್ ಅವರು ಹಿರಿಯ ರಕ್ಷಣಾ ಅಧಿಕಾರಿಗಳ ಜತೆ ಮೀಟಿಂಗ್ ಮಾಡಿದರು. ಅಲ್ಲದೆ ಈಗಿರುವ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದಾರೆ. ಮತ್ತೊಂದು ಕಡೆ ಶೆಲ್ ದಾಳಿಗೆ ಒಳಗಾದ ರಷ್ಯಾ ಪ್ರದೇಶದಿಂದ 200ಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. ಅಲ್ಲಿ ವಾಸ ಇದ್ದ ಜನರು ಜೀವವನ್ನು ಉಳಿಸಿಕೊಳ್ಳಲು ಊರು ಬಿಟ್ಟಿದ್ದಾರೆ. ರಷ್ಯಾ ಇದೀಗ ಪ್ರತಿಕಾರದ ದಾಳಿಗೂ ಸಿದ್ಧತೆ ನಡೆಸಿದೆ ಎಂಬ ಆರೋಪ ಕೇಳಿಬಂದಿದ್ದು, ಮತ್ತೊಮ್ಮೆ ಯುರೋಪ್ & ರಷ್ಯಾ ನಡುವೆ ತಿಕ್ಕಾಟವೂ ಬಲು ಜೋರಾಗಿದೆ.












Click it and Unblock the Notifications