ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಉಕ್ರೇನ್ ಗಡಿ ಪ್ರವೇಶಿಸಿ ಢಂ.. ಢಮಾರ್ ಎಂದ ರಷ್ಯಾದ ಯುದ್ಧ ಟ್ಯಾಂಕರ್!

|
Google Oneindia Kannada News

ಕೀವ್, ಅಕ್ಟೋಬರ್ 13: ಉಕ್ರೇನ್‌ನ ಯುದ್ಧ ಟ್ಯಾಂಕರ್ ನಿರ್ಬಂಧಿತ ಪ್ರದೇಶವನ್ನು ಪ್ರವೇಶಿಸಿದ ಕ್ರೆಮ್ಲಿನ್ ಮಿಲಿಟರಿ ವಾಹನವೊಂದು ದಿಢೀರ್ ಸ್ಫೋಟಗೊಂಡ ಘಟನೆ ನಡೆದಿದ್ದು, ಅದೃಷ್ಟವಶಾತ್ ಸೈನಿಕನು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ. ಈ ಟ್ಯಾಂಕರ್ ಸ್ಫೋಟಗೊಂಡ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಉಕ್ರೇನ್‌ನಲ್ಲಿ ಭೂಮಿಯಲ್ಲಿ ಹೂತಿಡಲಾಗಿದ್ದ ಟ್ಯಾಂಕರ್ ವಿರೋಧಿ ಗಣಿಗಳ ಮೇಲೆ ನೇರವಾಗಿ ಓಡಿಸಿದ ನಂತರ ರಷ್ಯಾದ ಟ್ಯಾಂಕರ್ ದಿಢೀರ್ ಸ್ಫೋಟಗೊಂಡಿದೆ, ಅದಾಗ್ಯೂ, ಸೈನಿಕನು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಟ್ಯಾಂಕರ್ ಸ್ಫೋಟಗೊಳ್ಳುವ ದೃಶ್ಯ ಸ್ಪಷ್ಟವಾಗಿ ಗೋಚರಿಸುತ್ತದೆ. ಸ್ಫೋಟದ ಹೊಡೆತಕ್ಕೆ ರಷ್ಯಾದ ಟ್ಯಾಂಕರ್ ಪೀಸ್ ಪೀಸ್ ಆಗಿ ಆಕಾಶದ ಎತ್ತರಕ್ಕೆ ಚಿಮ್ಮುತ್ತದೆ. ಇದಾಗಿ ಕೆಲವೇ ನಿಮಿಷದಲ್ಲಿ ಸಮವಸ್ತ್ರ ಧರಿಸಿದ ಯುವಕನೊಬ್ಬ ಟ್ಯಾಂಕರ್ ಪಕ್ಕದಲ್ಲಿ ಬಿದ್ದಿದ್ದ ಅವಶೇಷವನ್ನು ಆರಿಸಿಕೊಳ್ಳುತ್ತಿರುವುದು ಕಂಡು ಬರುತ್ತದೆ. ಈ ಸ್ಫೋಟ ಮತ್ತು ಸ್ಫೋಟದ ಹಿಂದಿನ ಅಸಲಿ ಕಥೆಯನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಡ್ರೋನ್ ಮಾದರಿಯಲ್ಲಿ ವೈಮಾನಿಕ ತುಣುಕು

ಡ್ರೋನ್ ಮಾದರಿಯಲ್ಲಿ ವೈಮಾನಿಕ ತುಣುಕು

ಕಣ್ಗಾವಲು ಸಾಮರ್ಥ್ಯಗಳೊಂದಿಗೆ ಅಳವಡಿಸಲಾಗಿರುವ ಡ್ರೋನ್ ಮಾದರಿ ಬಳಸಿಕೊಂಡು ವೈಮಾನಿಕ ತುಣುಕನ್ನು ಚಿತ್ರೀಕರಿಸಲಾಗಿದೆ. ಈ ದೃಶ್ಯದಲ್ಲಿ ರಷ್ಯಾದ ಟ್ಯಾಂಕರ್ ವಾಹನವು ಹೊಲದಿಂದ ರಸ್ತೆಯ ಕಡೆಗೆ ತಿರುಗಿದ ಕ್ಷಣವನ್ನು ವೀಡಿಯೊ ಸೆರೆ ಹಿಡಿಯಲು ಶುರುವಾಗುತ್ತದೆ. ರಸ್ತೆಯ ಮೇಲ್ಮೈಯಲ್ಲಿ ನೆಡಲಾಗಿದ್ದ ಕನಿಷ್ಠ 11 ಗಣಿಗಳ ಕಡೆಗೆ ತಿರುಗುತ್ತದೆ. ಶಸ್ತ್ರಸಜ್ಜಿತ ವಾಹನವು ನೆಲದಲ್ಲಿ ಹೂತಿಟ್ಟಿದ್ದ ಸಾಧನವನ್ನು ಸ್ಪರ್ಶಿಸಿದ ತಕ್ಷಣವೇ ಅದು ಸ್ಫೋಟವಾಗುತ್ತದೆ. ಅದಾಗಿ ಕೆಲವೇ ಕ್ಷಣಗಳ ನಂತರ ಅಚ್ಚರಿ ಮೂಡಿಸುವಂತೆ ಸೈನಿಕನೊಬ್ಬ ಅದರ ಪಕ್ಕದಲ್ಲಿ ನಿಂತಿರುವ ಚಿತ್ರವು ಸೆರೆಯಾಗಿದೆ.

ರಷ್ಯಾದ MT-LB ಬಳಕೆ ಆಗುವುದು ಯಾವುದಕ್ಕೆ?

ರಷ್ಯಾದ MT-LB ಬಳಕೆ ಆಗುವುದು ಯಾವುದಕ್ಕೆ?

ಉಕ್ರೇನ್ ಗಡಿಯಲ್ಲಿ ಸ್ಫೋಟಗೊಂಡ ವಾಹನವನ್ನು ರಷ್ಯಾದ MT-LB ಎಂದು ಗುರುತಿಸಲಾಗಿದೆ. ಇದನ್ನು ಸಾಮಾನ್ಯವಾಗಿ ಸೈನ್ಯವನ್ನು ಸಾಗಿಸಲು ಮತ್ತು ದೊಡ್ಡ ಫಿರಂಗಿ ಉಪಕರಣಗಳನ್ನು ಎಳೆಯಲು ಬಳಸಲಾಗುವ ಟ್ರ್ಯಾಕ್ಡ್ ಶಸ್ತ್ರಸಜ್ಜಿತ ಹೋರಾಟದ ವಾಹನವಾಗಿದೆ. ಈ ಮಾದರಿಯನ್ನು ಸೋವಿಯತ್ ಯುಗದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದರ ನಂತರದಲ್ಲಿ ಹೆಚ್ಚು ಹೆಚ್ಚು ಆಧುನಿಕ ವಾಹನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅದಾಗ್ಯೂ, ಉಕ್ರೇನ್‌ನಲ್ಲಿ ಮಾಸ್ಕೋ ಪಡೆಗಳು MT-LB ಅನ್ನು ವ್ಯಾಪಕವಾಗಿ ಬಳಸಿಕೊಂಡಿವೆ.

ಸ್ವತಂತ್ರ ಸಂಘರ್ಷ ವಿಶ್ಲೇಷಕ ಓರಿಕ್ಸ್ ವರದಿ ಪ್ರಕಾರ, ಉಕ್ರೇನ್‌ನಲ್ಲಿ ಯುದ್ಧ ಪ್ರಾರಂಭವಾದ ದಿನದಿಂದ ಇದುವರೆಗೂ ರಷ್ಯಾದ 281 MT-LB ಮಾದರಿ ವಾಹನಗಳಿಗೆ ಹಾನಿಯಾಗಿದೆ. ಉಕ್ರೇನಿಯನ್ ಅಧಿಕಾರಿಗಳು ಯುದ್ಧದಲ್ಲಿ ಇಲ್ಲಿಯವರೆಗೆ ರಷ್ಯಾದ MT-LB ನಂತಹ 5,000ಕ್ಕೂ ಹೆಚ್ಚು ಶಸ್ತ್ರಸಜ್ಜಿತ ಯುದ್ಧ ವಾಹನಗಳನ್ನು ನಾಶಪಡಿಸಿದ್ದಾರೆ.

ರಷ್ಯಾದ ಆ ಟ್ಯಾಂಕರ್ ಚಾಲಕನಿಗೆ ಕಣ್ಣು ಕಾಣಿಸಲಿಲ್ಲವೇ?

ರಷ್ಯಾದ ಆ ಟ್ಯಾಂಕರ್ ಚಾಲಕನಿಗೆ ಕಣ್ಣು ಕಾಣಿಸಲಿಲ್ಲವೇ?

ಉಕ್ರೇನ್ ಗಡಿ ಪ್ರದೇಶದ ರಸ್ತೆ ಮೇಲ್ಮೈಯಲ್ಲಿ ಸ್ಪಷ್ಟವಾಗಿ ಗೋಚರಿಸುವಂತೆ ರಸ್ತೆಯ ಉದ್ದಕ್ಕೂ ಗಣಿಗಳನ್ನು ನೆಡಲಾಗಿದೆ. ಈ ಬಗ್ಗೆ ರಷ್ಯಾದ ವಾಹನದ ಚಾಲಕ ಏಕೆ ನಿರ್ಲಕ್ಷಿಸಿದ್ದಾನೆ ಎಂಬುದು ಅಸ್ಪಷ್ಟವಾಗಿದೆ.

@UAWeapons ಶೀರ್ಷಿಕೆಯ ಜೊತೆಗೆ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. "ಒಂದು ರಷ್ಯಾದ MT-Lb ಚಾಲಕನು ಸ್ಪಷ್ಟವಾಗಿ ಬಹಳ ಸೀಮಿತ ದೃಷ್ಟಿಯೊಂದಿಗೆ TM-62 ಟ್ಯಾಂಕ್ ವಿರೋಧಿ ಗಣಿಗಳ ಸಾಲಿನ ಮೇಲೆ ಓಡಿಸಿದ್ದಾನೆ, ನಂತರದ ಫಲಿತಾಂಶ ಹೀಗಾಗಿದೆ. TM-62 ಟ್ಯಾಂಕ್ ವಿರೋಧಿ ಗಣಿ ಸೋವಿಯತ್ ಯುಗದಲ್ಲಿ ಅಭಿವೃದ್ಧಿಪಡಿಸಿದ ಮತ್ತೊಂದು ಉಪಕರಣವಾಗಿದ್ದು, ರಷ್ಯಾದ ಪಡೆಗಳು ಮುಂದುವರಿಯುವುದನ್ನು ತಡೆಯಲು ಉಕ್ರೇನಿಯನ್ ಪಡೆಗಳು ಈ ಗಣಿಯನ್ನು ವ್ಯಾಪಕವಾಗಿ ಬಳಸಿತ್ತು.

ಉಕ್ರೇನ್ ಪ್ರತಿದಾಳಿಯಿಂದ ಹಿಂದೆ ಸರಿದ ರಷ್ಯಾ

ಉಕ್ರೇನ್ ಪ್ರತಿದಾಳಿಯಿಂದ ಹಿಂದೆ ಸರಿದ ರಷ್ಯಾ

ಉಕ್ರೇನಿಯನ್ ಪ್ರದೇಶದಲ್ಲಿ ನಡೆಸುತ್ತಿರುವ ದಾಳಿಯನ್ನು ನಿಯಂತ್ರಿಸುವುದಕ್ಕೆ ಹಾಗೂ ತಡೆಗಟ್ಟುವುದಕ್ಕೆ ಕೀವ್ ಆಕ್ರಮಣಕಾರಿ ಕಾರ್ಯಾಚರಣೆ ಅನ್ನು ಶುರು ಮಾಡಿಕೊಂಡಿದೆ. ಇದರಿಂದ ಮಾಸ್ಕೋದ ಸೇನಾ ಪಡೆಗಳು ಒಂದು ಹೆಜ್ಜೆ ಹಿಂದೆ ಸರಿದಿವೆ ಎಂದು ವರದಿಯಾಗಿದೆ. ಯುದ್ಧದಲ್ಲಿ ಉಕ್ರೇನಿಯನ್ ಪಡೆಗಳು ಗಣನೀಯ ಪ್ರಮಾಣದ ಕ್ರೆಮ್ಲಿನ್ ಮಿಲಿಟರಿ ಉಪಕರಣಗಳನ್ನು ನಾಶಪಡಿಸಿವೆ. ಇದನ್ನು ಗಮನಿಸಿ ವಾಪಸ್ ಹೋಗುವ ರಷ್ಯನ್ ಹಾಲಿ ಪಡೆಗಳು ಭಾರೀ ಶಸ್ತ್ರಾಸ್ತ್ರಗಳನ್ನು ಬಿಟ್ಟು ಹೋಗಿವೆ.

ರಷ್ಯಾದ ಪಡೆಗಳು ಬಿಟ್ಟು ಹೋಗಿರುವ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಈಗ ಉಕ್ರೇನ್ ಬಲವನ್ನು ಹೆಚ್ಚಿಸಿದೆ. ಉಕ್ರೇನ್‌ನ ಮಿಲಿಟರಿ ಶಕ್ತಿಯ ಗಣನೀಯ ಭಾಗದಲ್ಲಿ ರಷ್ಯಾದ ಶಸ್ತ್ರಾಸ್ತ್ರಗಳೇ ಇವೆ. ಕೀವ್‌ನ ಸರಿಸುಮಾರು ಅರ್ಧದಷ್ಟು ಟ್ಯಾಂಕ್ ಫ್ಲೀಟ್ ಈಗ ವಶಪಡಿಸಿಕೊಂಡ ರಷ್ಯಾದ ವಾಹನಗಳಿಂದಲೇ ಕೂಡಿದೆ.

English summary
Russian MT-LB driver drove into a row of TM-62 anti-tank mines with very limited vision; Look here how tanker blast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X