• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

4 ತಿಂಗಳ ಹೆಣ್ಣುಮಗುವನ್ನು ಆಟಿಕೆ ರೀತಿ ಎಸೆದಾಡಿದ ದಂಪತಿ, ಪೊಲೀಸ್ ವಶಕ್ಕೆ

|

ಕೌಲಾಲಂಪುರ್ (ಮಲೇಷ್ಯಾ), ಫೆಬ್ರವರಿ 5: ರಷ್ಯಾ ಮೂಲದ ದಂಪತಿಯನ್ನು ಮಲೇಷ್ಯಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ದಂಪತಿಯು ನಾಲ್ಕು ತಿಂಗಳ ತಮ್ಮ ಮಗುವಿನ ಕಾಲನ್ನು ಹಿಡಿದು ಮೇಲಕ್ಕೆ ಎಸೆದು, ಮತ್ತೆ ಹಿಡಿದು, ತಮ್ಮ ಕೈಗಳ ಮೇಲೆ ಆ ಮಗುವನ್ನು ನಿಲ್ಲಿಸಿಕೊಂಡು ರಸ್ತೆ ಮಧ್ಯೆ ಪ್ರದರ್ಶನ ನೀಡಿದ್ದಾರೆ.

ಈ ದಂಪತಿ ವಿಶ್ವ ಪರ್ಯಟನೆ ಮಾಡುತ್ತಿದ್ದು, ಅದರ ಸಲುವಾಗಿ ಹಣ ಸಂಗ್ರಹ ಮಾಡಬೇಕು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ಇಪ್ಪತ್ತೆಂಟು ವರ್ಷದ ಪತಿ, ಇಪ್ಪತ್ತೇಳು ವರ್ಷದ ಹೆಂಡತಿ ತಮ್ಮ ನಾಲ್ಕು ತಿಂಗಳ ಮಗುವನ್ನು ಹೀಗೆ ಹಿಂಸಾತ್ಮಕವಾಗಿ ಬಳಸಿಕೊಂಡಿರುವುದು ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ.

ಬ್ಯಾಂಕಾಕಿನಲ್ಲಿ ವಾಯು ಮಾಲಿನ್ಯ, ಜನರ ಕಣ್ಣು, ಮೂಗಲ್ಲಿ ರಕ್ತಸ್ರಾವ

ಮಲೇಷ್ಯಾದ ರಾಜಧಾನಿ ಕೌಲಾಲಂಪುರ್ ನಲ್ಲಿ ಸೋಮವಾರ ಈ ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ. "ಆ ದಂಪತಿಯನ್ನು ವಶಕ್ಕೆ ಪಡೆದಿದ್ದೇವೆ. ನಾಲ್ಕು ತಿಂಗಳ ಹೆಣ್ಣುಮಗುವಿನ ಮೇಲೆ ದೌರ್ಜನ್ಯ ಎಸಗಿದ ಆರೋಪ ಅವರ ಮೇಲೆ ಇದೆ" ಎಂದು ಪೊಲೀಸರು ತಿಳಿಸಿದ್ದಾರೆ.

ಒಂದೂವರೆ ನಿಮಿಷದ ವಿಡಿಯೋ ಭಾನುವಾರದಂದು ಫೇಸ್ ಬುಕ್ ನಲ್ಲಿ ವೈರಲ್ ಆಗಿತ್ತು. ಸಣ್ಣ ಮಗುವನ್ನು ತಲೆ ಕೆಳಗಾಗಿ ಮಾಡಿ, ಅದರ ಕಾಲು ಹಿಡಿದು, ಮೇಲಕ್ಕೆ ಚಿಮ್ಮುತ್ತಿರುವ ದೃಶ್ಯಗಳು ಅದರಲ್ಲಿ ಇದ್ದವು. ಹಿನ್ನೆಲೆಯಲ್ಲಿ ಸಂಗೀತವೊಂದು ಕೇಳಿಬರುತ್ತಿತ್ತು.

ರಸ್ತೆ ಮೇಲೆ ಕುಳಿತಿದ್ದ ಆತನ ಪತ್ನಿ, ನಾವು ಪ್ರಪಂಚದಾದ್ಯಂತ ಸುತ್ತಾಡುತ್ತಿದ್ದೇವೆ ಎಂದು ಪ್ಲಕಾರ್ಡ್ ಹಿಡಿದಿರುವುದು ಕಂಡುಬರುತ್ತದೆ. ಕುತೂಹಲದಿಂದ ಜನರು ಒಟ್ಟು ಸೇರಿ, ಈ ಪ್ರದರ್ಶನ ವೀಕ್ಷಿಸಿದ್ದಾರೆ. ಆ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು, ಇದು ಮೂರ್ಖತನ. ಹೀಗೆ ಮಾಡಬಾರದು ಎಂದು ಹೇಳುವುದು ಕೇಳಿಬರುತ್ತದೆ.

ಕೆಲಸದ ಕೊನೆ ದಿನ ಸ್ಪೈಡರ್ ಮ್ಯಾನ್ ದಿರಿಸಿನಲ್ಲಿ ಬಂದು ಸುದ್ದಿಯಾದ ಬ್ಯಾಂಕರ್

ಈ ರಷ್ಯನ್ ದಂಪತಿ ಶುಕ್ರವಾರದಂದು ಪಕ್ಕದ ಥಾಯ್ಲೆಂಡ್ ನಿಂದ ಮಲೇಷ್ಯಾ ಪ್ರವೇಶ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Russian couple accused of violently swinging their four-month-old baby during a street performance to fund their world tour have been detained, Malaysian police said Monday. The buskers, a 28-year-old man and his 27-year-old wife, were picked up after trying to woo spectators in the heart of the capital Kuala Lumpur.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more