Ukraine War: ರಷ್ಯಾ ಗಡಿ ಭಾಗದ ಹಳ್ಳಿಗಳಲ್ಲಿ ಭಾರಿ ಕಟ್ಟೆಚ್ಚರ, ಕಾರಣ ಏನು?
ಉಕ್ರೇನ್ & ರಷ್ಯಾ ನಡುವೆ ನಡೆಯುತ್ತಿರುವ ಯುದ್ಧ ರಣಭೀಕರ ಹಂತಕ್ಕೆ ತಲುಪಿದ್ದು, ಈ ಯುದ್ಧವನ್ನ ಹೀಗೆ ಬಿಟ್ಟರೆ ಇಡೀ ಜಗತ್ತೇ ಸರ್ವನಾಶ ಆಗುವುದು ಗ್ಯಾರಂಟಿ ಎನ್ನಬಹುದು. ಯಾಕಂದ್ರೆ ಇಬ್ಬರ ನಡುವೆ ಪದೇ ಪದೇ ಬಡಿದಾಟ ಸಾಮಾನ್ಯ ಆಗಿದೆ, ರಷ್ಯಾ ಸೇನೆಯಿಂದ ಭಾರಿ ದೊಡ್ಡ ಪ್ರಮಾಣದಲ್ಲಿ ವಾಯುದಾಳಿ & ಭೂದಾಳಿ ನಡೆಯುತ್ತಿದೆ. ಇಂತಹ ಅತ್ಯಂತ ಸೂಕ್ಷ್ಮ ಸಮಯದಲ್ಲೇ ರಷ್ಯಾ ಗಡಿ ಭಾಗದ ಹಳ್ಳಿಗಳಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ, ಅರೆ ಇದಕ್ಕೆ ಕಾರಣ ಏನು?
ರಷ್ಯಾ & ಉಕ್ರೇನ್ ನಡುವೆ ಒಂದು ಕಡೆ ಟರ್ಕಿ ದೇಶದಲ್ಲಿ ಸಂಧಾನ ಮಾತುಕತೆ ನಡೆಯುತ್ತಾ ಇದೆ, ಆದರೆ ಇದೇ ಸಮಯದಲ್ಲಿ ಇನ್ನೊಂದು ಕಡೆ ಬೆಂಕಿಯ ಕಿಡಿ ಹೊತ್ತಿಕೊಂಡಿದೆ. ಹೀಗೆ ಇಬ್ಬರ ನಡುವೆ ತೀವ್ರ ಹಿಂಸಾಚಾರ ನಡೆಯುತ್ತಿರುವ ಕಾರಣಕ್ಕೆ ಭಾರಿ ದೊಡ್ಡ ಸಂಚಲನವೇ ಸೃಷ್ಟಿ ಆಗಿದೆ. ಇಷ್ಟು ದಿನ ರಷ್ಯಾ ರಾಜಧಾನಿ ಮಾಸ್ಕೋ ಟಾರ್ಗೆಟ್ ಮಾಡಿ ದಾಳಿ ಮಾಡಿ ಹವಾ ಎಬ್ಬಿಸಿದ್ದ ಉಕ್ರೇನ್ ಸೇನೆ ಇದೀಗ, ರಷ್ಯಾ ಗಡಿ ಭಾಗದ ಮೇಲೆ ಭಾರಿ ದೊಡ್ಡ ದಾಳಿ ನಡೆಸುವ ಸಾಧ್ಯತೆ ಇದೆ. ಹೀಗಿದ್ದಾಗಲೇ ರಷ್ಯಾ ಸೇನೆ ಗಡಿ ಗ್ರಾಮಗಳ ಜನರಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದೆ.

ಗಡಿ ಭಾಗದ ಹಳ್ಳಿಗಳಲ್ಲಿ ಸಂಚಲನ!
ರಷ್ಯಾ ಸೇನೆ ಯಾವಾಗ ಎಚ್ಚರಿಕೆ ಸಂದೇಶ ನೀಡಿ, ಉಕ್ರೇನ್ ಮಿಲಿಟರಿ ದಾಳಿ ಮಾಡುವ ಬಗ್ಗೆ ಮೆಸೇಜ್ ಕೊಟ್ಟಿತ್ತೋ ಆಗಲೇ ಭಯ ಹುಟ್ಟಿದೆ. ಇದೇ ಕಾರಣಕ್ಕೆ ಜನರು ಕೂಡ ಎದ್ದೂ & ಬಿದ್ದು ಎಸ್ಕೇಪ್ ಆಗಿದ್ದಾರೆ. ಗಡಿ ಗ್ರಾಮಗಳ ಪರಿಸ್ಥಿತಿ ಈಗಾಗಲೇ ಹೀನಾಯವಾಗಿದ್ದು, ಇದೇ ಸಮಯದಲ್ಲಿ ಅಕಸ್ಮಾತ್ ಉಕ್ರೇನ್ ಸೇನೆ ಇನ್ನಷ್ಟು ಭೀಕರ ದಾಳಿ ನಡೆಸಿದ್ದೇ ಆದರೆ ಅಲ್ಲಿನ ಸ್ಥಿತಿ ಇನ್ನಷ್ಟು ಕೈಮೀರುವ ಭಯ ಕಾಡುತ್ತಿದೆ. ಒಟ್ಟಿನಲ್ಲಿ ಆದಷ್ಟು ಬೇಗ ಈ ಯುದ್ಧ ನಿಂತು ಶಾಂತಿ ನೆಲೆಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.












Click it and Unblock the Notifications