ಐವರು ನುಸುಳುಕೋರರನ್ನು ಸದೆಬಡಿದ ರಷ್ಯಾ, ಉಕ್ರೇನ್ ಹೇಳಿದ್ದೇನು?

ಉಕ್ರೇನ್ ಸೇನೆಯು ರಷ್ಯಾದ ಸೇನಾ ರಕ್ಷಣಾ ಪೋಸ್ಟ್ಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು ಎನ್ನುವ ಆರೋಪವನ್ನು ಉಕ್ರೇನ್ ತಳ್ಳಿ ಹಾಕಿದೆ.

ಈ ಘಟನೆಯಲ್ಲಿ ಐವರು ನುಸುಳುಕೋರರನ್ನು ರಷ್ಯಾ ಸೇನೆ ಸದೆಬಡಿದಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಆದರೆ, ಉಕ್ರೇನ್ ಇದನ್ನು ರಷ್ಯಾದ ಕುತಂತ್ರ ಎಂದು ಬಣ್ಣಿಸಿದ್ದು, ರಷ್ಯಾ ಉದ್ವಿಗ್ನತೆಯನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ.

ಪಾಶ್ಚಿಮಾತ್ಯ ದೇಶಗಳು ರಷ್ಯಾ ತನ್ನ ನೆರೆಯ ದೇಶವನ್ನು ಆಕ್ರಮಿಸಲು ಯೋಜಿಸುತ್ತಿದೆ ಎಂದು ಆರೋಪಿಸಿವೆ. 1991 ರಲ್ಲಿ ಸೋವಿಯತ್ ಒಕ್ಕೂಟದ ಪತನದವರೆಗೂ ಉಕ್ರೇನ್ ರಷ್ಯಾದ ಭಾಗವಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಆದರೆ, ಮಾಸ್ಕೋ ಮಾತ್ರ ಯಾವುದೇ ದಾಳಿಯ ಯೋಜನೆಗಳನ್ನು ನಿರಾಕರಿಸುತ್ತದೆ, ಆದರೆ ಅದು ಸಮಗ್ರ ಭದ್ರತಾ ಖಾತರಿಗಳಿಗೆ ಕರೆ ನೀಡುವುದರ ಜೊತೆಗೆ, ಉಕ್ರೇನ್ ಎಂದಿಗೂ NATO ಗೆ ಸೇರುವುದಿಲ್ಲ ಎಂಬ ಭರವಸೆಯನ್ನು ಸಹ ಕೇಳಿದೆ.

Russian Army Kills 5 Saboteurs From Ukraine On Russian Territory

ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲು ನೆಪ ಹುಡುಕಾಟದಲ್ಲಿ ತೊಡಗಿದೆ ಎಂದು ಉಕ್ರೇನ್ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಪದೇ ಪದೇ ಹೇಳುತ್ತಿರುವ ಹಿನ್ನೆಲೆ ಘಟನೆ ನಡೆದಿರುವುದು ಭಾರಿ ಮಹತ್ವ ಪಡೆದುಕೊಂಡಿದೆ.

"ಘರ್ಷಣೆಯ ಸಮಯದಲ್ಲಿ, ಉಕ್ರೇನ್‌ನಿಂದ ರಷ್ಯಾದ ಗಡಿಗೆ ನುಸುಳುತ್ತಿದ್ದ ಐವರು ವಿಧ್ವಂಸಕರ ಗುಂಪನ್ನು ಹತ್ಯೆಗೈಯಲಾಗಿದೆ" ಎಂದು ರಷ್ಯಾದ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ. ಹೇಳಿಕೆಯ ಪ್ರಕಾರ, ರೋಸ್ಟೊವ್ ಪ್ರದೇಶದ ಮಿತ್ಯಕಿನ್ಸ್ಕಾಯಾ ಗ್ರಾಮದ ಬಳಿ ಸ್ಥಳೀಯ ಸಮಯ ಬೆಳಿಗ್ಗೆ 6:00 ಗಂಟೆಗೆ ಈ ಘಟನೆ ಸಂಭವಿಸಿದೆ.

ರಷ್ಯಾದ FSB ಭದ್ರತಾ ಸೇವೆಯು ಮೊದಲ ಬಾರಿಗೆ ಉಕ್ರೇನ್ ರಷ್ಯಾದ ಗಡಿ ಪೋಸ್ಟ್ ವೊಂದರ ಮೇಲೆ ದಾಳಿ ಮಾಡಿದೆ ಎಂದಿದೆ. ಅಲ್ಲಿನ ಸ್ಥಳೀಯ ಕಾಲಮಾನ ಪ್ರಕಾರ ಬೆಳಗ್ಗೆ 9:50ಕ್ಕೆ ಅಪರಿಚಿತ ಕ್ಷಿಪಣಿಯೊಂದು ನಮ್ಮ ಗಡಿಯೊಳಗೆ ನುಸುಳಿ 150 ಮೀಟರ್ ದೂರದಲ್ಲಿರುವ FSBಪೋಸ್ಟ್‌ ಅನ್ನು ಧ್ವಂಸಗೊಳಿಸಿದೆ ಎಂದು ಹೇಳಿದೆ. ಇದರಲ್ಲಿ ಹೊರ ಠಾಣೆ ಸಂಪೂರ್ಣ ನಾಶವಾಗಿದೆ ಎಂದು ಅದು ಹೇಳಿದೆ.

ಶೆಲ್ ದಾಳಿಯಲ್ಲಿ, ರೋಸ್ಟೊವ್ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಸೇನಾ ನೆಲೆಯು ಸಂಪೂರ್ಣವಾಗಿ ನಾಶವಾಗಿದ್ದು, ಈ ಪೋಸ್ಟ್ ಅನ್ನು ಗಡಿಯಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿ ಬಳಸುತ್ತಿದ್ದರು ಎಂದು ರಷ್ಯಾ ಹೇಳಿದೆ. ರಷ್ಯಾ ಸೇನೆಯು ಭದ್ರತಾ ಪೋಸ್ಟ್ ಅನ್ನು ಅದರ ಸೀಲಿಂಗ್ ಮತ್ತು ಗೋಡೆಗಳನ್ನು ಕೆಡುಹಿದ ಚಿತ್ರಗಳೊಂದಿಗೆ ಮತ್ತು ರಷ್ಯಾದ ಧ್ವಜವನ್ನು ಚದುರಿದ ವೀಡಿಯೊವನ್ನು ಸಹ ಬಿಡುಗಡೆ ಮಾಡಿದೆ.

ಈ ಘಟನೆಗಳು ಉಕ್ರೇನಿಯನ್ ಗಡಿಯಲ್ಲಿ ತನ್ನ ಮಿಲಿಟರಿ ನಿರ್ಮಾಣವನ್ನು ಸಮರ್ಥಿಸಿಕೊಳ್ಳಲು ಮಾಸ್ಕೋ ಮನ್ನಣೆಗಳನ್ನು ಹುಡುಕುತ್ತಿದೆ ಎಂಬ ಕಳವಳವನ್ನು ಹುಟ್ಟುಹಾಕಿದೆ.

ರಷ್ಯಾ ಮತ್ತು ಉಕ್ರೇನ್ ನಡುವೆ ಮಹಾಯುದ್ಧ ಪ್ರಾರಂಭವಾಗಿದೆಯೇ? ಏಕೆಂದರೆ, ಉಕ್ರೇನ್ ಬಾಂಬ್ ದಾಳಿಯಲ್ಲಿ ತನ್ನ ಗಡಿಭಾಗದ ಪೋಸ್ಟ್‌ವೊಂದು ಸ್ಫೋಟಗೊಂಡಿದೆ ಎಂದು ರಷ್ಯಾ ಸೋಮವಾರ ಹೇಳಿಕೊಂಡಿದೆ. ಇನ್ನೊಂದೆಡೆ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ಗಡಿಭಾಗದಲ್ಲಿ ತಮ್ಮ ಜನರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಉಕ್ರೇನ್ ಹಲವಾರು ಬಾರಿ ಹೇಳಿಕೊಂಡಿದೆ.

ಆದರೆ, ಮೊದಲ ಬಾರಿಗೆ, ಉಕ್ರೇನ್‌ನಲ್ಲಿ ಬಾಂಬ್ ದಾಳಿಯಲ್ಲಿ ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (FSB) ಬಳಸಿದ ಗಡಿ ಪೋಸ್ಟ್ ಅನ್ನು ನಾಶಪಡಿಸಲಾಗಿದೆ ಎಂದು ರಷ್ಯಾ ಹೇಳಿಕೊಂಡಿರುವುದು ಇಲ್ಲಿ ಗಮನಾರ್ಹ.

ಪಾಶ್ಚಿಮಾತ್ಯ ದೇಶಗಳ ಹೇಳಿಕೆ - 1.6 ಲಕ್ಷ ರಷ್ಯಾ ಸೈನಿಕರು ಉಕ್ರೇನ್ ಗಡಿಭಾಗದಲ್ಲಿ ಹಲ್ಲೆ ನಡೆಸಲು ಸನ್ನದ್ಧರಾಗಿದ್ದಾರೆಯುದ್ಧವನ್ನು ತಡೆಗಟ್ಟುವಲ್ಲಿ ತಾನು ಗಂಭೀರವಾಗಿರುವುದಾಗಿ ತೋರ್ಪಡಿಸಲು ಎಂದು ತೋರಿಸಲು ಉಕ್ರೇನ್ ಯುರೋಪಿಯನ್ ಒಕ್ಕೂಟದಿಂದ ರಷ್ಯಾ ವಿರುದ್ಧ ನಿರ್ಬಂಧನೆಯನ್ನು ಕೋರಿದೆ. ಇನ್ನೊಂದೆಡೆ ಈ ಕುರಿತು ಹೇಳಿಕೆ ನೀಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ರಷ್ಯಾ "1945ರ ಬಳಿಕ ಯುರೋಪ್ ನಲ್ಲಿ ಅತಿ ದೊಡ್ಡ ಯುದ್ಧದ ಯೋಜನೆ ರೂಪಿಸುತ್ತಿದೆ" ಎಂದು ಹೇಳಿದ್ದಾರೆ.

ಇತ್ತೀಚಿನ ವಾರಗಳಲ್ಲಿ ಉಕ್ರೇನ್ ನ ಗಡಿಭಾಗದಲ್ಲಿ ರಷ್ಯಾ ಪಡೆಗಳ ನಿಯೋಜನೆ ಒಂದು ಆಕ್ರಮಣದ ಸಂಕೇತವಾಗಿದೆ ಎಂದು ಪಾಶ್ಚಿಮಾತ್ಯ ದೇಶಗಳು ಭಯಪಡುತ್ತಿವೆ. ಇದು ಒಂದು ವೇಳೆ ಸಂಭವಿಸಿದಲ್ಲಿ ಮಾಸ್ಕೋ ವಿರುದ್ಧ ಅವು ದೊಡ್ಡ ನಿರ್ಬಂಧವನ್ನು ವಿಧಿಸಲಿವೆ ಎನ್ನಲಾಗುತ್ತಿದೆ. ದಾಳಿ ನಡೆಸುವ ಯಾವುದೇ ಯೋಜನೆಗಳನ್ನು ಪ್ರಸ್ತುತ ರಷ್ಯಾ ನಿರಾಕರಿಸುತ್ತಿದ್ದರೂ ಕೂಡ ಪಾಶ್ಚಿಮಾತ್ಯ ದೇಶಗಳು ಸಮಗ್ರ ಭದ್ರತೆಯನ್ನು ಖಾತರಿಪಡಿಸಲು ಬಯಸುತ್ತಿವೆ.

"ಫೆಬ್ರವರಿ 21 ರಂದು, ಬೆಳಗ್ಗೆ 9:50 a.m. (0650 GMT) ಸುಮಾರಿಗೆ, ಉಕ್ರೇನ್‌ನಿಂದ ಉಡಾವಣೆಯಾದ ಪ್ರಾಜೆಕ್ಟೈಲ್ ರಷ್ಯಾ-ಉಕ್ರೇನಿಯನ್ ಗಡಿಯಿಂದ ಸುಮಾರು 150 ಮೀಟರ್ ದೂರದಲ್ಲಿರುವ ರೋಸ್ಟೋವ್‌ಗೆ ಅಪ್ಪಳಿಸಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ" ಎಂದು ಸೆಕ್ಯೂರಿಟಿ ಸರ್ವಿಸಿಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. "ಪ್ರದೇಶದಲ್ಲಿದ್ದ ಮತ್ತು FSB ಗಡಿ ಕಾವಲು ಸೇವೆಯಿಂದ ಬಳಸಲಾದ ಗಡಿ ಪೋಸ್ಟ್ ಅನ್ನು ನಾಶಪಡಿಸಲಾಗಿದೆ" ಎಂದು ಅವು ಹೇಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+