ಟರ್ಕಿಯ ರಷ್ಯನ್ ರಾಯಭಾರಿಯನ್ನು ಕೊಂದ ಅಂಗರಕ್ಷಕ

Posted By:
Subscribe to Oneindia Kannada

ಇಸ್ತಾನ್ ಬುಲ್, ಡಿಸೆಂಬರ್ 20: ಟರ್ಕಿಗೆ ರಷ್ಯಾದ ರಾಯಭಾರಿಯಾಗಿದ್ದ ಆಂಡ್ರ್ಯೂ ಕರ್ಲೋವ್‌ ಅವರನ್ನು ಅವರ ಅಂಗರಕ್ಷಕನೇ ಹತ್ಯೆ ಮಾಡಿದ್ದಾರೆ. ಸೋಮವಾರ ರಾತ್ರಿ ಅಲೆಪ್ಪೊದಲ್ಲಿ ನಡೆದ ಈ ಘಟನೆ ಪ್ರತಿಕಾರದ ಪ್ರತೀಕ ಎಂದು ಗನ್ ಹಿಡಿದ ಪೊಲೀಸ್ ಘೋಷಿಸಿದ್ದಾನೆ.

Russian Ambassador to Turkey Andrei Karlov Killed

ಅಲೆಪ್ಪೊದಲ್ಲಿ ಕಲಾ ಗ್ಯಾಲರಿಯೊಂದನ್ನು ಉದ್ಘಾಟಿಸಿ ಭಾಷಣ ಮಾಡುತ್ತಿದ್ದ ಕರ್ಲೋವ್‌ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ತಕ್ಷಣವೇ ಕಾರ್ಲೋವ್ ಅವರನ್ನು ಆಸ್ಪತ್ರೆಗೆ ಕರೆದೊಯ್ಡು ಚಿಕಿತ್ಸೆ ನೀಡುವ ಪ್ರಯತ್ನ ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Russian Ambassador to Turkey Andrei Karlov Killed

'ಗಾಯಗೊಂಡಿದ್ದ ಕರ್ಲೋವ್‌ ಅವರು ನಿಧನ ಹೊಂದಿದ್ದಾರೆ. ಇದನ್ನು ನಾವು ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಿದ್ದೇವೆ' ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಝಖರೋವಾ ತಿಳಿಸಿದ್ದಾರೆ.

ವಿಡಿಯೋ ವೈರಲ್: ಅಂಗರಕ್ಷಕನೇ ರಾಯಭಾರಿಯನ್ನು ಕೊಲ್ಲುವ ದೃಶ್ಯ ಟರ್ಕಿ ಟಿವಿ ಚಾನೆಲ್ ಟಿಆರ್ ಟಿಯಲ್ಲಿ ನೇರ ಪ್ರಸಾರವಾಗಿದೆ.


ನಂತರ ಕೊಲೆಗಾರ ಟರ್ಕಿಷ್ ಭಾಷೆಯಲ್ಲಿ ಮಾತನಾಡಿ, 'ಅಲೆಪ್ಪೊ ಮರೆಯಬೇಡಿ, ಸಿರಿಯಾ ಮರೆಯಬೇಡಿ' ಎಂದು ಕೂಗಿದ್ದಾನೆ. ನಂತರ ಅಲ್ಲಾಹು ಅಕ್ಬರ್ ಎಂದಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Russia’s ambassador to Turkey, Andrei Karlov, was shot and killed in Ankara on Monday by a young Turkish policeman
Please Wait while comments are loading...