ಕಣ್ಮರೆಯಾಗಿದ್ದ ರಷ್ಯಾದ ವಿಮಾನದ ಅವಶೇಷ ಕಪ್ಪು ಸಮುದ್ರದಲ್ಲಿ ಪತ್ತೆ

Posted By:
Subscribe to Oneindia Kannada

ಮಾಸ್ಕೋ, ಡಿಸೆಂಬರ್ 25: ಸಿರಿಯಾ ಕಡೆಗೆ ತೆರಳುತ್ತಿದ್ದ ರಷ್ಯಾದ ರಕ್ಷಣಾ ಸಚಿವಾಲಯದ ಏರ್ ಕ್ರಾಫ್ಟ್ ಭಾನುವಾರ ಬೆಳಗ್ಗೆ ನಾಪತ್ತೆಯಾಗಿದೆ. 91 ಪ್ರಯಾಣಿಕರನ್ನು ಹೊಂದಿದ್ದ ಟು-154 ವಿಮಾನ ನಾಪತ್ತೆಯಾಗಿತ್ತು. ಈಗ ಕಣ್ಮರೆಯಾಗಿದ್ದ ವಿಮಾನದ ಅವಶೇಷಗಳು ಕಪ್ಪು ಸಮುದ್ರದಲ್ಲಿ ಪತ್ತೆಯಾಗಿದೆ.

ಸೋಚಿಯ ಬ್ಲಾಕ್ ಸೀ ರೆಸಾರ್ಟ್ ನಿಂದ ಟೇಕ್ ಆಫ್ ಆದ ಕೆಲ ಕ್ಷಣಗಳಲ್ಲೇ ರೇಡಾರ್ ವ್ಯಾಪ್ತಿಗೆ ಸಿಗುತ್ತಿಲ್ಲ ಎಂದು ರಷ್ಯಾದ ತುರ್ತು ನಿಗಾ ಸಚಿವಾಲಯ ತಿಳಿಸಿತ್ತು.

Russian aircraft headed to Syria goes off Radar

ನಾಪತ್ತೆಯಾಗಿರುವ ವಿಮಾನ ರಷ್ಯಾದ ದಕ್ಷಿಣ ನಗರ ಸೋಚಿಯಿಂದ ಸಿರಿಯಾದ ಲಟಾಕಿಯಾ ಪ್ರದೇಶಕ್ಕೆ ಪ್ರಯಾಣ ಬೆಳೆಸಿತ್ತು. ವಿಮಾನದಲ್ಲಿ 8 ಸಿಬ್ಬಂದಿ ಸೇರಿ ಸುಮಾರು 91 ಪ್ರಯಾಣಿಕರಿದ್ದಾರೆ. ಕಪ್ಪು ಸಮುದ್ರದ ಮೇಲೆ ಹಾರುವ ಸಂದರ್ಭ ಕಾಣೆಯಾಗಿದೆ ಎಂದು ತಿಳಿದು ಬಂದಿದೆ. .

ಭಾನುವಾರ ಬೆಳಗ್ಗೆ 5.20ಕ್ಕೆ ಪ್ರಯಾಣ ಆರಂಭಿಸಿದ್ದ ವಿಮಾನ 20 ನಿಮಿಷಗಳ ನಂತರ ರೇಡಾರ್​ ಸಂಪರ್ಕ ಕಡಿತಗೊಂಡಿದೆ. ಕ್ರಾಸ್ನೊಡರ್ ಕ್ರಾಯ್ ಪ್ರದೇಶದಲ್ಲಿ ಪತನಗೊಂಡಿರುವ ವ್ಯಕ್ತವಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Russian military aircraft has gone off the radar the Russian media has reported. Russian air traffic controllers lost contact with a Tu-154 airliner reportedly belonging to the Russian Defense Ministry, rt.com reported.
Please Wait while comments are loading...