ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ಉದ್ದೇಶಿತ ಗುರಿಯನ್ನು ಸಾಧಿಸಿಯೇ ತೀರುತ್ತದೆ: ಪುಟಿನ್

|
Google Oneindia Kannada News

ಮಾಸ್ಕೋ, ಮಾರ್ಚ್ 3: ರಷ್ಯಾವು ಉಕ್ರೇನ್ ಅಲ್ಲಿ ಅಂದುಕೊಂಡಿರುವ ಉದ್ದೇಶಿತ ಗುರಿಯನ್ನು ಸಾಧಿಸಿಯೇ ತೋರುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಉಕ್ರೇನ್​ನಲ್ಲಿ ಉಂಟಾಗಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ ಪುಟಿನ್ ಜೊತೆ ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರನ್‌ ಮಾತನಾಡಿದ್ದಾರೆ. ಇದಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಮ್ಯಾಕ್ರನ್​, ಉಕ್ರೇನ್​ ದೇಶವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದುಕೊಳ್ಳುವ ಉದ್ದೇಶ ಪುಟಿನ್​ ಹೊಂದಿದ್ದಾರೆ. ಈ ನಿರ್ಧಾರದಿಂದ ಬರುವ ದಿನಗಳು ಉಕ್ರೇನ್​ಗೆ ಕೆಟ್ಟದಾಗಿರಲಿವೆ ಎಂದರು.

ರಷ್ಯಾವು ಉಕ್ರೇನ್‌ನಲ್ಲಿ ನಿಷೇಧಿತ ಶಸ್ತ್ರಾಸ್ತ್ರ ಬಳಕೆ ಮಾಡುತ್ತಿದೆಯೇ?ರಷ್ಯಾವು ಉಕ್ರೇನ್‌ನಲ್ಲಿ ನಿಷೇಧಿತ ಶಸ್ತ್ರಾಸ್ತ್ರ ಬಳಕೆ ಮಾಡುತ್ತಿದೆಯೇ?

ಯುದ್ಧ ಶುರುವಾಗಿ ಎಂಟು ದಿನ ಕಳೆಯುತ್ತಾ ಬಂದಿದ್ದು, ಈ ವೇಳೆ ಮಾತನಾಡಿರುವ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್​, ಉಕ್ರೇನ್​​ನಲ್ಲಿ ರಷ್ಯಾ ತನ್ನ ಗುರಿ ಸಾಧಿಸಲಿದೆ ಎಂದಿದ್ದಾರೆ. ಫ್ರೆಂಚ್ ನಾಯಕ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗಿನ ಮಾತುಕತೆ ವೇಳೆ ಮಾತನಾಡಿರುವ ಪುಟಿನ್,​​ ಉಕ್ರೇನ್​ನಲ್ಲಿ ನಾವು ಅಂದುಕೊಂಡಿರುವುದನ್ನು ಸಾಧಿಸಲಿದ್ದೇವೆ ಎಂದಿದ್ದಾರೆ.

Russia Will Achieve Its Goals In Ukraine No Matter What: Putin Tells Macron

ರಷ್ಯಾ ಮತ್ತು ಉಕ್ರೇನ್​ ನಡುವೆ ಬೆಲಾರಸ್​- ಪೋಲೆಂಡ್ ಗಡಿಯಲ್ಲಿ ಎರಡನೇ ಸುತ್ತಿನ ಶಾಂತಿ ಮಾತುಕತೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರಷ್ಯಾ ವಿದೇಶಾಂಗ ಸಚಿವರು, ಸದ್ಯದ ಪರಿಸ್ಥಿತಿ ಕೊನೆಗೊಂಡು ಉಕ್ರೇನ್​ನಲ್ಲಿ ಶಾಂತಿಯುತ ಜೀವನ ನಡೆಸಲು ಅಲ್ಲಿನ ಜನರು ಅನುವು ಮಾಡಿಕೊಡುತ್ತಾರೆಂಬ ವಿಶ್ವಾಸವಿದೆ ಎಂದಿದ್ದಾರೆ.

ಉಕ್ರೇನ್ ಮೇಲಿನ ರಷ್ಯಾ ಮಿಲಿಟರಿ ದಾಳಿ ಮುಂದುವರೆದಿರುವಂತೆಯೇ ಇತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸರ್ಕಾರಕ್ಕೆ ಮತ್ತೊಂದು ಜಾಗತಿಕ ಮುಖಭಂಗವಾಗಿದ್ದು, ಫಾರ್ಮುಲಾ ಒನ್ ಟೂರ್ನಿ ಆಯೋಜನೆ ಒಪ್ಪಂದ ರದ್ದಾಗಿದೆ.

ಹೌದು.. ಉಕ್ರೇನ್‌ನ ಮೇಲೆ ರಷ್ಯಾ ಆಕ್ರಮಣಕ್ಕೆ ಜಾಗತಿಕ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಫಾರ್ಮುಲಾ ಒನ್ ರಷ್ಯಾ ಗ್ರ್ಯಾಂಡ್ ಪ್ರಿಕ್ಸ್‌ನೊಂದಿಗಿನ ತನ್ನ ಒಪ್ಪಂದವನ್ನು ರದ್ದು ಮಾಡಿದೆ. ಅಂತೆಯೇ ಭವಿಷ್ಯದಲ್ಲಿ ರಷ್ಯಾದಲ್ಲಿ ಎಫ್1 ರೇಸ್ ಗಳ ಆಯೋಜನೆ ಇರುವುದಿಲ್ಲ ಎಂದು ಗುರುವಾರ ಫಾರ್ಮುಲಾ ಒನ್ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದೇ ಸೆಪ್ಟೆಂಬರ್ 25ರಿಂದ ರಷ್ಯನ್ ಗ್ರಾಂಡ್ ಪ್ರಿಕ್ಸ್ ಸ್ಪರ್ಧೆ ನಡೆಯಬೇಕಿತ್ತು. ಆದರೆ ಉಕ್ರೇನ್ ಮೇಲೆ ರಷ್ಯಾ ದಾಳಿ ಹಿನ್ನಲೆಯಲ್ಲಿ ಕಳೆದೆರಡು ವಾರಗಳಿಂದ ನಡೆದ ಸತತ ಸಭೆಗಳ ಬಳಿಕ ಫಾರ್ಮುಲಾ ಒನ್ ಟೂರ್ನಿ ಆಯೋಜನೆ ರದ್ದು ಮಾಡಿತ್ತು. ಅಲ್ಲದೆ ರಷ್ಯಾದಲ್ಲಿನ ಭವಿಷ್ಯದ ಟೂರ್ನಿಗಳ ಮೇಲೂ ಕೆಂಗಣ್ಣು ಬೀರಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಎಫ್1 2025 ರವರೆಗೆ ರಷ್ಯಾದಲ್ಲಿ ಫಾರ್ಮುಲಾ ಒನ್ ಟೂರ್ನಿ ಆಯೋಜನೆ ಮಾಡದಂತೆ ಎಲ್ಲ ಸರಣಿಗಳನ್ನೂ ರದ್ದು ಮಾಡಿದೆ.

ಇತ್ತೀಚೆಗಷ್ಟೇ ನಾಲ್ಕು ಬಾರಿ F1 ಚಾಂಪಿಯನ್ ಸೆಬಾಸ್ಟಿಯನ್ ವೆಟ್ಟೆಲ್ ಸೇರಿದಂತೆ ಹಲವು ಸ್ಟಾರ್ ಎಫ್ 1 ರೇಸರ್ ಗಳು ರಷ್ಯಾ ಟೂರ್ನಿಯಿಂದ ಹಿಂದಕ್ಕೆ ಸರಿದಿದ್ದರು. ಅಲ್ಲದೆ ಭವಿಷ್ಯದಲ್ಲಿ ರಷ್ಯಾಗೆ ತಾವು ಟೂರ್ನಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

Recommended Video

ಮೃತ ನವೀನ್ ತಂದೆಗೆ ಕರೆ ಮಾಡಿದ ಮೋದಿ ಹೇಳಿದ್ದೇನು | Oneindia Kannada

English summary
Russian President Vladimir Putin told French leader Emmanuel Macron on Thursday that Russia would achieve the goals of its military intervention in Ukraine whatever happens, the Kremlin said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X