ಉಕ್ರೇನ್ ವಿರುದ್ಧದ ಯುದ್ಧ ಘೋಷಣೆ ನಿರ್ಧಾರ ಸಮರ್ಥಿಸಿಕೊಂಡ ರಷ್ಯಾ ರಾಯಭಾರಿ
ವಾಶಿಂಗ್ಟನ್, ಫೆಬ್ರವರಿ 24: ಉಕ್ರೇನ್‌ನಲ್ಲಿ ಯುದ್ಧ ಘೋಷಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿರ್ಧಾರವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆಯಲ್ಲಿ ರಷ್ಯಾದ ರಾಯಭಾರಿ ವಾಸಿಲಿ ಅಲೆಕ್ಸೆವಿಚ್ ನೆಬೆನ್ಜ್ಯಾ ಸಮರ್ಥಿಸಿಕೊಂಡಿದ್ದಾರೆ.
ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನ ತುರ್ತು ಸಭೆಯಲ್ಲಿ ಪೂರ್ವ ಉಕ್ರೇನ್‌ನ ಡಾನ್‌ಬಾಸ್ ಪ್ರದೇಶದಲ್ಲಿ ಮಿಲಿಟರಿ ಕ್ರಮ ಕೈಗೊಳ್ಳುವ ರಷ್ಯಾದ ನಿರ್ಧಾರದ ಬಗ್ಗೆ ಅವರು ಉಲ್ಲೇಖಿಸಿದ್ದಾರೆ.
Recommended Video
"ಉಕ್ರೇನ್ ಇಂದಿನ ಬಿಕ್ಕಟ್ಟಿಗೆ ಉಕ್ರೇನ್‌ನ ಹಿಂದಿನ ಕ್ರಮಗಳೇ ಮೂಲವಾಗಿವೆ, ಅವರು ಹಲವು ವರ್ಷಗಳಿಂದ ಮಿನ್ಸ್ಕ್ ಒಪ್ಪಂದದ ಅಡಿಯಲ್ಲಿ ತನ್ನ ಜವಾಬ್ದಾರಿಗಳನ್ನು ಮರೆತು ವರ್ತಿಸುತ್ತಿದ್ದಾರೆ," ಎಂದು ನೆಬೆನ್ಜ್ಯಾ ಹೇಳಿದರು.

ರಷ್ಯಾ ರಾಯಭಾರಿ ಹೇಳಿದ ಮಾತು:
ಕಳೆದ ಎಂಟು ವರ್ಷಗಳಿಂದ ಉಕ್ರೇನ್‌ನ ಶೆಲ್ ದಾಳಿಯಿಂದ ಭಯಭೀತರಾಗಿದ್ದಾರೆ. ರಷ್ಯಾದ ಕಾರ್ಯಾಚರಣೆಯು ಪೂರ್ವ ಉಕ್ರೇನ್‌ನ ಪ್ರತ್ಯೇಕತಾವಾದಿ ಪರ ಮಾಸ್ಕೋ ಪ್ರದೇಶಗಳಲ್ಲಿನ ನಿವಾಸಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ," ಎಂದು ಅವರು ಹೇಳಿದ್ದಾರೆ.
"ಡಾನ್‌ಬಾಸ್‌ನಲ್ಲಿರುವವರ ವಿರುದ್ಧ ಉಕ್ರೇನಿಯನ್ ಪ್ರಚೋದನೆಯು ನಿಂತಿಲ್ಲ, ಬದಲಿಗೆ ತೀವ್ರಗೊಂಡಿದೆ. ಇದರಿಂದ ಲುಹಾನ್ಸ್ಕ್ ಮತ್ತು ಡೊನೆಟ್ಸ್ಕ್ ಪ್ರದೇಶಗಳಲ್ಲಿ ಪ್ರತ್ಯೇಕತಾವಾದಿ ನಾಯಕರು ರಷ್ಯಾದ ಸಹಾಯ ಕೋರಲು ಪ್ರೇರೇಪಿಸಿತು ಎಂದು ಅವರು ಪ್ರತಿಪಾದಿಸಿದ್ದಾರೆ.
ಯುದ್ಧ ನಿಲ್ಲಿಸಲು ಉಕ್ರೇನ್ ರಾಯಭಾರಿ ಒತ್ತಾಯ:
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ "ಯುದ್ಧವನ್ನು ನಿಲ್ಲಿಸಲು" ವಿಶ್ವಸಂಸ್ಥೆಯ ಉಕ್ರೇನಿಯನ್ ರಾಯಭಾರಿಯು ಯುಎನ್ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಒತ್ತಾಯಿಸಿದ್ದಾರೆ.
"ಯುದ್ಧವನ್ನು ನಿಲ್ಲಿಸುವುದು ಈ ಭದ್ರತಾ ಮಂಡಳಿಯ ಜವಾಬ್ದಾರಿಯಾಗಿದೆ. ಹಾಗಾಗಿ ಯುದ್ಧವನ್ನು ನಿಲ್ಲಿಸಲು ಸಾಧ್ಯವಿರುವ ಎಲ್ಲ ರೀತಿ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವಂತೆ ನಿಮ್ಮನ್ನು ಆಹ್ವಾನಿಸುತ್ತೇನೆ," ಎಂದು ಸೆರ್ಗಿ ಕಿಸ್ಲಿಟ್ಯಾ ಹೇಳಿದ್ದಾರೆ. ವಿಶ್ವಸಂಸ್ಥೆಯು ರಷ್ಯಾದ ರಾಯಭಾರಿಯನ್ನು ಕೇಳುತ್ತದೆಯೇ ಅಥವಾ ಅದಕ್ಕೂ ಮೊದಲು "ನಾನು ನಿಮ್ಮ ಅಧ್ಯಕ್ಷರು ಯುದ್ಧವನ್ನು ಘೋಷಿಸುವ ವೀಡಿಯೊವನ್ನು ಪ್ಲೇ ಮಾಡಬೇಕೇ?" ಎಂದು ಪ್ರಶ್ನೆ ಮಾಡಿದ್ದಾರೆ. ಉಕ್ರೇನ್ ರಾಯಭಾರಿಯ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ರಷ್ಯಾದ ರಾಯಭಾರಿ, "ಇದನ್ನು ಯುದ್ಧ ಎಂದು ಕರೆಯಲಾಗುವುದಿಲ್ಲ, ಇದನ್ನು ಡಾನ್ಬಾಸ್ನಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆ ಎಂದು ಕರೆಯಲಾಗುತ್ತದೆ," ಎಂದು ಹೇಳಿದರು.
ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ರಷ್ಯಾ:
ಉಕ್ರೇನ್‌ನಲ್ಲಿ ಯುದ್ಧಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕರೆ ನೀಡಿದ್ದಾರೆ. ನಿರೀಕ್ಷೆಯಂತೆಯೇ ಎರಡೂ ದೇಶಗಳ ಮಧ್ಯೆ ಯುದ್ಧ ನಡೆಯಲಿದೆ. ಉಕ್ರೇನ್ ಸೇನೆಗೆ ಶರಣಾಗುವಂತೆ ಅವರು ಆಗ್ರಹಿಸಿದ್ದಾರೆ. ಇದರಿಂದ ಜಾಗತಿಕ ಮಟ್ಟದಲ್ಲಿ ಭಾರಿ ತಲ್ಲಣ ಉಂಟಾಗಿದೆ. ಈ ಯುದ್ಧವು ಜಗತ್ತಿನಾದ್ಯಂತ ದೇಶಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ರಷ್ಯಾದೊಂದಿಗಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಉಕ್ರೇನ್ ಸರ್ಕಾರವು ಮಧ್ಯ ರಾತ್ರಿಯಿಂದ ಬೆಳಗ್ಗೆ 7 ಗಂಟೆವರೆಗೆ ಪೂರ್ವ ಉಕ್ರೇನ್‌ನ ವಿಮಾನ ನಿಲ್ದಾಣಗಳನ್ನು ಮುಚ್ಚಲು ಆದೇಶಿಸಿದೆ.
ನ್ಯಾಟೋ ರಾಷ್ಟ್ರಗಳಿಗೆ ಪುಟಿನ್ ಸಂದೇಶ:
ತಮ್ಮ ಉದ್ದೇಶಗಳನ್ನು ಘೋಷಿಸಲು ಪುಟಿನ್ ಅವರು ಟಿವಿಯಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. "ನಾನು ಸೇನಾ ಕಾರ್ಯಾಚರಣೆ ನಡೆಸಲು ನಿರ್ಧಾರ ತೆಗೆದುಕೊಂಡಿದ್ದೇನೆ" ಎಂದು ಅವರು ಮಾಸ್ಕೋದಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಪ್ರಕಟಣೆ ಹೊರಡಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಯಾರಾದರೂ ಮಧ್ಯಪ್ರವೇಶ ಮಾಡಿದರೆ, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದು ಅಮೆರಿಕ ನೇತೃತ್ವದ ನ್ಯಾಟೋ ಮಿತ್ರಕೂಟದ ದೇಶಗಳಿಗೆ ಅವರು ರವಾನಿಸುವ ಎಚ್ಚರಿಕೆಯ ಸಂದೇಶವಾಗಿದೆ.












Click it and Unblock the Notifications