ರಷ್ಯಾ-ಉಕ್ರೇನ್ ಬಿಕ್ಕಟ್ಟು ನಿಯಂತ್ರಿಸಲು ಭಾರತದ ಮಧ್ಯಸ್ಥಿಕೆಗೆ ಮನವಿ
ವಾಶಿಂಗ್ಟನ್, ಫೆಬ್ರವರಿ 24: ರಷ್ಯಾ-ಉಕ್ರೇನ್ ಬಿಕ್ಕಟ್ಟು ನಿಯಂತ್ರಿಸುವಲ್ಲಿ ಭಾರತ ಮಹತ್ವದ ಪಾತ್ರ ವಹಿಸಬೇಕಿದೆ ಎಂದು ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಇಗೊರ್ ಪೊಲಿಖಾ ಹೇಳಿದ್ದಾರೆ.
ಗುರುವಾರ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಿಸಿರುವ ಬೆನ್ನಲ್ಲೇ ಭಾರತಕ್ಕೆ ಉಕ್ರೇನ್ ಸಹಾಯ ಕೋರಿದೆ. "ಭಾರತವು ರಷ್ಯಾದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ. ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ನವದೆಹಲಿ ಹೆಚ್ಚು ಸಕ್ರಿಯ ಪಾತ್ರವನ್ನು ವಹಿಸುತ್ತದೆ," ಎಂದಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ನಮ್ಮ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ತಕ್ಷಣವೇ ಸಂಪರ್ಕಿಸುವಂತೆ ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇವೆ ಎಂದು ಉಕ್ರೇನ್ ರಾಯಭಾರಿ ಇಗೊರ್ ಪೊಲಿಖಾ ಹೇಳಿದ್ದಾರೆ.

ಉಕ್ರೇನ್ ನೆಲದಲ್ಲಿ ದಾಳಿ ಮತ್ತು ಪ್ರತಿದಾಳಿ:
ಗುರುವಾರ ಉಕ್ರೇನ್‌ನ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧ ಘೋಷಿಸಿದರು. ಇದರ ಬೆನ್ನಲ್ಲೇ ಪಕ್ಕದ ಉಕ್ರೇನ್ ನೆಲದಲ್ಲಿ ರಷ್ಯಾ ಸೇನಾ ಪಡೆಗಳು ಘರ್ಷಿಸಿದವು ಐದು ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡ ರಷ್ಯಾ ದಾಳಿ ನಡೆಸಿತು. ಕೀವ್, ಖಾಕ್ರಿವ್, ಒಡೆಸ್ಸಾ, ಮೌರಿಪೋಲ್ ಕ್ರಾಮ್ ಟೊರಿಸ್ಕ್ ನಗರಗಳ ಮೇಲೆ ರಷ್ಯಾ ವೈಮಾನಿಕ ದಾಳಿ ನಡೆಸಿತು. ರಷ್ಯಾ ದಾಳಿಗೆ ಪ್ರತಿಯಾಗಿ ಉಕ್ರೇನ್ ಸೇನಾಪಡೆಗಳು ರಷ್ಯಾದ 7 ಸೇನಾ ವಿಮಾನ ಹಾಗೂ ಒಂದು ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿವೆ.

ಗುರುವಾರದ ಮಧ್ಯಾಹ್ನದ 2 ಗಂಟೆ ವೇಳೆಗೆ ರಷ್ಯಾ ನಡೆಸಿದ ದಾಳಿಯಲ್ಲಿ ಉಕ್ರೇನ್ ನೆಲದಲ್ಲಿ 7 ಮಂದಿ ಪ್ರಾಣ ಬಿಟ್ಟಿದ್ದು, 9ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಉಕ್ರೇನ್‌ನಲ್ಲಿರುವ ಭಾರತೀಯರಿಗೆ ಸಲಹೆ ಸೂಚನೆ:
ರಷ್ಯಾದೊಂದಿಗಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಉಕ್ರೇನ್ ಸರ್ಕಾರವು ಮಧ್ಯ ರಾತ್ರಿಯಿಂದ ಬೆಳಗ್ಗೆ 7 ಗಂಟೆವರೆಗೆ ಪೂರ್ವ ಉಕ್ರೇನ್‌ನ ವಿಮಾನ ನಿಲ್ದಾಣಗಳನ್ನು ಮುಚ್ಚಲು ಆದೇಶಿಸಿದೆ. ಈ ಹಿನ್ನೆಲೆ ಫೆಬ್ರವರಿ 24ರಂದು ಉಕ್ರೇನ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳಿಗೆ ಪ್ರಮುಖ ಸಲಹೆ ನೀಡಲಾಗಿದೆ.

* ಉಕ್ರೇನ್‌ನಲ್ಲಿ ಸದ್ಯಕ್ಕೆ ಪರಿಸ್ಥಿತಿ ಅನಿಶ್ಚಿತವಾಗಿದ್ದು, ಭಾರತೀಯ ಪ್ರಜೆಗಳು ತಾವಿರುವ ಪ್ರದೇಶಗಳ ಮನೆ, ಹೋಟೆಲ್ ಮತ್ತು ವಸತಿ ಕೇಂದ್ರಗಳಲ್ಲಿ ಸುರಕ್ಷಿತವಾಗಿರಬೇಕು.
* ಉಕ್ರೇನ್ ರಾಜಧಾನಿ ಕೀವ್ ಪ್ರದೇಶಕ್ಕೆ ಯಾರು ಪ್ರಯಾಣಿಸಿದ್ದೀರೋ ಅಂಥವರು ತಾತ್ಕಾಲಿಕವಾಗಿ ಮತ್ತೆ ತಮ್ಮ ತಮ್ಮ ಮೂಲ ಪ್ರದೇಶಗಳಿಗೆ ವಾಪಸ್ ಆಗಬೇಕು. ವಿಶೇಷವಾಗಿ ಪಶ್ಚಿಮ ಕೀವ್ ಪ್ರದೇಶಗಳಲ್ಲಿ ಸುರಕ್ಷಿತವಾಗಿರುವುದು ಸೂಕ್ತ.
* ಭವಿಷ್ಯದಲ್ಲಿ ಮತ್ತಷ್ಟು ಸಲಹೆ-ಸೂಚನೆಗಳನ್ನು ಹೊರಡಿಸಲಾಗುವುದು.
* ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಗುರುವಾರ ಎರಡನೇ ಸಲ ಸಲಹೆಯನ್ನು ನೀಡಿದ್ದು, ಉಕ್ರೇನ್ ವಾಯುಪ್ರದೇಶವನ್ನು ಮುಚ್ಚಿರುವ ಹಿನ್ನೆಲೆ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ.
* ರಾಯಭಾರ ಕಚೇರಿಯು ಎಲ್ಲಾ ಪ್ರಜೆಗಳಿಗೆ ತಮ್ಮ ಪಾಸ್‌ಪೋರ್ಟ್ ಮತ್ತು ಅಗತ್ಯ ದಾಖಲೆಗಳನ್ನು ಎಲ್ಲಾ ವೈಯಕ್ತಿಯ ದಾಖಲೆಗಳನ್ನು ಕೊಂಡೊಯ್ಯಲು ಮತ್ತು ನವೀಕರಣಗಳಿಗಾಗಿ ರಾಯಭಾರ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪರಿಶೀಲಿಸಲು ತಿಳಿಸಲಾಗಿದೆ.












Click it and Unblock the Notifications