Russia Military: 450 ಡ್ರೋನ್ ಮತ್ತು 70 ಕ್ಷಿಪಣಿ ಹಾರಿಸಿದ ರಷ್ಯಾ ಸೇನೆ, ಶಾಂತಿ ಮಾತುಕತೆಗೂ ಮೊದಲೇ ಆಘಾತ
ರಷ್ಯಾ ಮತ್ತು ಉಕ್ರೇನ್ ನಡುವೆ ಸಾಧ್ಯವಾದಷ್ಟು ಬೇಗ ಮಾತುಕತೆ ನಡೆಸಿ, ಯುದ್ಧವನ್ನ ನಿಲ್ಲಿಸಿ ಶಾಂತಿ ಸ್ಥಾಪನೆ ಮಾಡಬೇಕು ಎಂದು ಅಮೆರಿಕ ಕಾಯುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಚಾರದಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾ ಒದ್ದಾಡುತ್ತಿದ್ದಾರೆ. ಒಂದು ಕಡೆ ಕೊನೇ ಹಂತಕ್ಕೆ ಬರುತ್ತಿರುವ ಶಾಂತಿ ಒಪ್ಪಂದ ನಂತರ ನಿಂತು ಹೋಗುತ್ತಿದೆ. ಹೀಗಾಗಿ ಹೇಗಾದರು ಮಾಡಿ ಈ ಬಾರಿ ಯುದ್ಧ ನಿಲ್ಲಿಸಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಅಮೆರಿಕ, ದೊಡ್ಡ ದೊಡ್ಡ ದೇಶಗಳ ಸಹಾಯ ಪಡೆಯುತ್ತಿದೆ. ಹೀಗಿದ್ದರೂ ದಿಢೀರ್ ರಷ್ಯಾ ಸೇನೆ ಕೈಗೊಂಡಿರುವ ಅದೊಂದು ಕ್ರಮ ಎಲ್ಲವನ್ನೂ ತಲೆಕೆಳಗೆ ಮಾಡಿದೆ.
ರಷ್ಯಾ ಬಳಿ ಅದೆಷ್ಟು ವಿನಾಶಕಾರಿ ಅಸ್ತ್ರಗಳು ಇದೆ ಎಂಬುದು ಇಡೀ ಜಗತ್ತಿಗೇ ಗೊತ್ತು. ರಷ್ಯಾದ ಸೇನೆ ಒಂದು ಹೆಜ್ಜೆ ಮುಂದಿಟ್ಟರೆ ದೊಡ್ಡ, ದೊಡ್ಡ ದೇಶಗಳೇ ನಲುಗಿ ಹೋಗುವ ಸ್ಥಿತಿ ನಿರ್ಮಾಣ ಆಗುತ್ತದೆ ಎಂಬುದು ಪ್ರಪಂಚಕ್ಕೇ ತಿಳಿದಿದೆ. ಹೀಗಿದ್ದಾಗ ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಹಿಂಸೆ ಬೇಡ ಶಾಂತಿ ಬೇಕು ಎಂಬ ಸಂದೇಶ ಸಾರಲಾಗುತ್ತಿದ್ದು, ಎರಡೂ ದೇಶಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಿಸಲು ಅಮೆರಿಕದ ಅಧಿಕಾರಿಗಳು ನಿದ್ದೆ ಬಿಟ್ಟು ಹಗಲು & ರಾತ್ರಿ ಕಾಯುತ್ತಿದ್ದಾರೆ. ಹೀಗೆ ಇದ್ದಾಗಲೂ ದಿಢೀರ್ ದೊಡ್ಡ ಆಘಾತ ಎದುರಾಗಿದ್ದು, ಉಕ್ರೇನ್ ವಿರುದ್ಧ ರಷ್ಯಾ ಈಗ 450 ಡ್ರೋನ್ ಮತ್ತು 70 ಕ್ಷಿಪಣಿ ಹಾರಿಸಿ ಶಾಕ್ ಕೊಟ್ಟಿದೆ.

ಭೀಕರ ಚಳಿಯಲ್ಲಿ ಭಯಾನಕ ದಾಳಿ
ರಷ್ಯಾ ಸೇನೆ ಭೀಕರವಾಗಿ ಉಕ್ರೇನ್ ಮೇಲೆ ಮತ್ತೆ ದಾಳಿ ಆರಂಭ ಮಾಡಿದ್ದು, ಮಂಗಳವಾರ ರಾತ್ರಿ ಉಕ್ರೇನ್ ವಿರುದ್ಧ ದಿಢೀರ್ 450 ದೀರ್ಘ-ಶ್ರೇಣಿಯ ಡ್ರೋನ್ & ವಿವಿಧ ರೀತಿಯ 70 ಕ್ಷಿಪಣಿ ಹಾರಿಸಿ ಯುದ್ಧದ ಭೀಕರತೆ ಮತ್ತಷ್ಟು ಹೆಚ್ಚು ಮಾಡಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಗಂಭೀರ ಆರೋಪ ಮಾಡಿದ್ದಾರೆ.
ಈಗಾಗಲೇ ಚಳಿಗಾಲ ಹಿನ್ನೆಲೆ ಒದ್ದಾಡುತ್ತಿರುವ ಉಕ್ರೇನ್ ದೇಶದ ಪ್ರಜೆಗಳಿಗೆ ಈ ದಾಳಿ ಇನ್ನಷ್ಟು ಭಯ ಉಂಟುಮಾಡಿದೆ. ಉಕ್ರೇನ್ ದೇಶದ ಹಲವು ಪ್ರಾಂತ್ಯ & ಪ್ರದೇಶದಲ್ಲಿ ಈಗಾಗಲೇ ವಿದ್ಯುತ್ ಕೈಕೊಟ್ಟು ಪರಿಸ್ಥಿತಿಯು ಗಂಭೀರ ಸ್ವರೂಪ ಪಡೆದಿದೆ. ಹೀಗಿದ್ದಾಗ ರಷ್ಯಾ ಸೇನೆ ಮತ್ತೊಮ್ಮೆ ಭೀಕರ ದಾಳಿ ಮಾಡಿದೆ ಎಂಬ ಆರೋಪ ಮಾಡಲಾಗುತ್ತಿದೆ. ಇದು ಪರಿಸ್ಥಿತಿ ಇನ್ನಷ್ಟು ಕೈಮೀರುವ ರೀತಿ ಮಾಡಿದ್ದು, ಉಕ್ರೇನ್ ಜನರಿಗೆ ಹಿಂಸೆಯಾಗುತ್ತಿದೆ.
ಶಾಂತಿ ಮಾತುಕತೆ ಮೇಲೆ ಪರಿಣಾಮ?
ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ತಮ್ಮ ಆಡಳಿತದ ಅಧಿಕಾರಿಗಳನ್ನ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ನಿಯೋಜನೆ ಮಾಡಿದ್ದಾರೆ. ಅತ್ಯಂತ ಹಿರಿಯ ಅಧಿಕಾರಿಗಳೇ ಈ ತಂಡದಲ್ಲಿ ಇದ್ದಾರೆ ಎಂಬುದು ಮತ್ತೊಂದು ವಿಶೇಷ. ಇವರೆಲ್ಲಾ ಸೇರಿ ಹೇಗಾದರೂ ಮಾಡಿ ರಷ್ಯಾ & ಉಕ್ರೇನ್ ವಾರ್ ನಿಲ್ಲಿಸಬೇಕು ಎಂಬ ಪ್ರಯತ್ನ ಮಾಡುತ್ತಿದ್ದಾರೆ. ಹೀಗಿದ್ದಾಗ ದಿಢೀರ್ ಎಂದು ರಷ್ಯಾ ಸೇನೆಯಿಂದ ಉಕ್ರೇನ್ ವಿರುದ್ಧ ದಾಳಿ ಆಗಿರುವುದು ಸಹಜವಾಗಿ ಆತಂಕ ಮೂಡಿಸಿದೆ. ಅಲ್ಲದೆ ಶಾಂತಿ ಒಪ್ಪಂದ ಹಾಗೂ ಮಾತುಕತೆ ಮೇಲೆ ಇದು ಪರಿಣಾಮ ಬೀರುತ್ತಾ? ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
6,000 ಕಟ್ಟಡಗಳಿಗೆ ವಿದ್ಯುತ್ ಇಲ್ಲ
ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರದಲ್ಲೇ ಇರುವ ಉಕ್ರೇನ್ ನೆಲದಲ್ಲಿ ಭೀಕರ ಚಳಿ ಆರಂಭವಾಗಿ, ಜನ ಬದುಕಲು ಆಗದ ಪರಿಸ್ಥಿತಿ ಎದುರಾಗಿದೆ. -10 ಡಿಗ್ರಿ ಸೆಲ್ಸಿಯಸ್ ಆಸುಪಾಸಿನ ಚಳಿ ಅಲ್ಲಿದೆ. ಆದರೆ ವಿದ್ಯುತ್ ಇಲ್ಲದೇ ಜೀವನ ಮಾಡುವುದೇ ಕಷ್ಟದ ಕೆಲಸ. ಇಷ್ಟೆಲ್ಲದರ ಮಧ್ಯೆ ಮತ್ತೆ ದಾಳಿ ಮಾಡಿದ ರಷ್ಯಾ ಸೇನೆ ಇನ್ನಷ್ಟು ಭಾಗದಲ್ಲಿ ವಿದ್ಯುತ್ ಕೈಕೊಡುವ ರೀತಿ ವರ್ತಿಸುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಉಕ್ರೇನ್ ರಾಜಧಾನಿ ಕೀವ್ ಭಾಗದಲ್ಲಿ 6,000 ಕಟ್ಟಡಗಳು ಹೀಟರ್ ಸಿಗದೆ ನರಳಿವೆ.












Click it and Unblock the Notifications