ಅಮೆರಿಕ ವಿರುದ್ಧ ರೊಚ್ಚಿಗೆದ್ದ ರಷ್ಯಾ ಖಡಕ್ ವಾರ್ನಿಂಗ್... Israel And Iran
ಇರಾನ್ & ಇಸ್ರೇಲ್ ಯುದ್ಧದಲ್ಲಿ ಅಮೆರಿಕ ಮಧ್ಯಪ್ರವೇಶ ಮಾಡಿದ ನಂತರ ರಷ್ಯಾ ಸಖತ್ ರೊಚ್ಚಿಗೆದ್ದು ಕೂತಿದ್ದು, ಜಗತ್ತಿನ ದೊಡ್ಡಣ್ಣ ಅಮೆರಿಕಗೆ ಖಡಕ್ ವಾರ್ನಿಂಗ್ ಕೊಡುತ್ತಿದೆ. ಅಂದಹಾಗೆ ಇರಾನ್ & ಇಸ್ರೇಲ್ ಯುದ್ಧದಲ್ಲಿ ಇದೇ ಅಮೆರಿಕ ಇಸ್ರೇಲ್ ಸೇನೆಗೆ ಭಾರಿ ದೊಡ್ಡ ನೆರವು ನೀಡುತ್ತಿದೆ ಎಂಬ ಆರೋಪ ಇದ್ದು, ತಕ್ಷಣವೇ ಸಹಾಯ ನಿಲ್ಲಿಸಿ ಅಂತಾ ರಷ್ಯಾದ ಕಡೆಯಿಂದ ಎಚ್ಚರಿಕೆ ಸಂದೇಶ ರವಾನೆ ಆಗಿದೆ.
ಅಮೆರಿಕ ಮತ್ತು ಇರಾನ್ ಯಾವ ರೀತಿ ಶತ್ರು ದೇಶಗಳೋ, ಅದೇ ರೀತಿಯಾಗಿ ಇರಾನ್ ಮತ್ತು ರಷ್ಯಾ ಸ್ನೇಹಿತ ದೇಶಗಳು. ಹೀಗಿದ್ದಾಗಲೇ ಇಸ್ರೇಲ್ & ಇರಾನ್ ನಡುವೆ ಘೋರ ಯುದ್ಧವೇ ಶುರು ಆಗಿದ್ದು, ಸಹಾಯಕ್ಕೆ ಓಡೋಡಿ ಬಂದಿದೆ ಇರಾನ್ ದೇಶದ ಪಾಲಿನ ಮಿತ್ರ ದೇಶ ರಷ್ಯಾ. ಇರಾನ್ ರೊಚ್ಚಿಗೆದ್ದು ಇಸ್ರೇಲ್ ವಿರುದ್ಧವೂ ಸೇಡು ತೀರಿಸಿಕೊಳ್ಳಲು ಕಾದು ಕುಳಿತಿದೆ, ಇದೇ ಸಮಯದಲ್ಲಿ ಇಸ್ರೇಲ್ ಕೂಡ ತನ್ನ ಶತ್ರು ಇರಾನ್ ವಿರುದ್ಧ ರಣಭೀಕರ ದಾಳಿ ಮಾಡುತ್ತಿದೆ. ಹೀಗಿದ್ದಾಗ ಅಮೆರಿಕ ಮಧ್ಯಪ್ರವೇಶ ಮಾಡಿ, ಇರಾನ್ & ಇಸ್ರೇಲ್ ಯುದ್ಧದ ಕಾವು ಹೆಚ್ಚಿಸಿದ್ದಕ್ಕೆ ರಷ್ಯಾ ಈಗ ಗರಂ ಆಗಿದೆ.

ರೊಚ್ಚಿಗೆದ್ದ ರಷ್ಯಾ, ಅಮೆರಿಕ ಸೈಲೆಂಟ್?
ಹೌದು, ಅಮೆರಿಕ ಸುಖಾಸುಮ್ಮನೆ ಇರಾನ್ & ಇಸ್ರೇಲ್ ಯುದ್ಧದಲ್ಲಿ ತಲೆ ಹಾಕಲು ಬಂದ ಆರೋಪ ಕೇಳಿಬಂದ ಬೆನ್ನಲ್ಲೇ ರಷ್ಯಾ ಕೂಡ ಅಲರ್ಟ್ ಆಗಿದೆ. ಹೀಗಾಗಿಯೇ ಅಮೆರಿಕ ಈ ಯುದ್ಧದ ವಿಚಾರದಲ್ಲಿ ಸೈಲೆಂಟ್ ಆಗಿರುವಂತೆ ರಷ್ಯಾ ಈಗ ವಾರ್ನಿಂಗ್ ಕೂಡ ಕೊಟ್ಟಿದೆ. ಇದೆಲ್ಲವನ್ನೂ ನೋಡುತ್ತಿದ್ದರೆ ಇರಾನ್ & ಇಸ್ರೇಲ್ ಯುದ್ಧ ಇನ್ನಷ್ಟು ದೊಡ್ಡದಾಗುವ ಭಯ ಹಾಗೂ ಮುನ್ಸೂಚನೆ ಎದುರಾಗುತ್ತಿದೆ.
ಯುದ್ಧ ಈಗಲಾದರೂ ಸೈಲೆಂಟ್ ಆಗುತ್ತಾ?
ರಷ್ಯಾ ದೇಶದ ಉಪ ವಿದೇಶಾಂಗ ಸಚಿವ ಸೆರ್ಗೆಯ್ ರಯಾಬ್ಕೋವ್ ಈ ಬಗ್ಗೆ ಮಾತನಾಡಿ ಪ್ರತಿಕ್ರಿಯೆ ನೀಡಿದ್ದು, ಇರಾನ್ ವಿರುದ್ಧ ಅಮೆರಿಕ ನೇರವಾಗಿ ಸೇನಾ ಕಾರ್ಯಾಚರಣೆ ಬಗ್ಗೆ ಚಿಂತಿಸಿದರೆ ಅದು ಸರಿಯಾದ ಆಯ್ಕೆ ಅಲ್ಲ ಎಂದಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಯಾರೂ ಮಧ್ಯಪ್ರವೇಶ ಮಾಡುವುದು ಹಾಗೂ ಸೇನಾ ಸಹಾಯ ಮಾಡುವುದು ಸರಿಯಲ್ಲ ಎಂದು ಕೂಡ ರಷ್ಯಾ ಉಪ ವಿದೇಶಾಂಗ ಸಚಿವ ಸೆರ್ಗೆಯ್ ರಯಾಬ್ಕೋವ್ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಅಮೆರಿಕ ಈಗ ಸೈಲೆಂಟ್ ಆಗುತ್ತಾ? ಅಥವಾ ಇರಾನ್ ವಿರುದ್ಧ ಯುದ್ಧ ಘೋಷಣೆ ಮಾಡುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications