Ukraine War: ರಕ್ತದ ಮಡುವಲ್ಲಿ ಒದ್ದಾಡುತ್ತಿರುವ ಉಕ್ರೇನ್, ರಷ್ಯಾ ಕಡೆಯಿಂದ ಭೀಕರ ಅಟ್ಯಾಕ್...
ಉಕ್ರೇನ್ ಯುದ್ಧ ನಿಲ್ಲಿಸಲು ಸಿದ್ಧವಿಲ್ಲ, ಹಾಗೇ ಇನ್ನೊಂದು ಕಡೆ ರಷ್ಯಾ ಕೂಡ ರಾಜಿಗೆ ರೆಡಿ ಇಲ್ಲ. ಈ ಇಬ್ಬರ ನಡುವಿನ ತಿಕ್ಕಾಟವೇ ಇದೀಗ ಭಾರಿ ದೊಡ್ಡ ಅನಾಹುತ ಸೃಷ್ಟಿ ಮಾಡುತ್ತಿದೆ. ಮತ್ತೊಂದು ಬದಿಯಲ್ಲಿ ಅಮಾಯಕರ ಪ್ರಾಣಪಕ್ಷಿ ಹಾರಿ ಹೋಗುತ್ತಿದ್ದು, ರಷ್ಯಾ ನಡೆಸುತ್ತಿರುವ ರಣಭೀಕರವಾದ ದಾಳಿ ಪರಿಣಾಮ ಇದೀಗ ಉಕ್ರೇನ್ ಜನರು ವಿಲವಿಲ ಒದ್ದಾಡುವಂತೆ ಆಗಿದೆ. ಇದೇ ಪರಿಸ್ಥಿತಿಯನ್ನು ಬಳಸಿಕೊಂಡು ಪರಮಾಣು ದಾಳಿ ನಡಡೆಸಲು ನಡೆದಿದೆಯಾ ಸ್ಕೆಚ್? ಅನ್ನೋ ಚರ್ಚೆ ಇದೀಗ ಶುರು ಆಗಿದೆ.
ರಷ್ಯಾ ಅಧ್ಯಕ್ಷ ಪುಟಿನ್ ರೊಚ್ಚಿಗೆದ್ದು, ಭೀಕರ ಯುದ್ಧ ನಡೆಸುತ್ತಿದ್ದಾರೆ. ಈಗಾಗಲೇ ರಷ್ಯಾ ಸೇನೆಯಿಂದ ಉಕ್ರೇನ್ ಮೇಲೆ ಪ್ರತಿಕ್ಷಣ ಅಟ್ಯಾಕ್ ಆಗುತ್ತಿದೆ ಎಂಬ ಆರೋಪ ಇದೆ. ಇನ್ನು ಅಮೆರಿಕ ಮಾತ್ರ ತನ್ನ ಬೆಂಬಲ ಉಕ್ರೇನ್‌ಗೆ ಅಂತಾ ಹೇಳುತ್ತಿದೆ. ಹೀಗೆ ಇಬ್ಬರ ನಡುವಿನ ತಿಕ್ಕಾಟದಲ್ಲಿ ಇದೀಗ ಉಕ್ರೇನ್ ನೆಲ ಅಪ್ಪಚ್ಚಿ ಆಗುತ್ತಿದೆ. ಅದರಲ್ಲೂ ರಾತ್ರೋರಾತ್ರಿ ಉಕ್ರೇನ್ ವಿರುದ್ಧ ರಷ್ಯಾ ನಡೆಸಿದ ದಾಳಿ ತಲ್ಲಣವನ್ನೇ ಸೃಷ್ಟಿ ಮಾಡಿದೆ. ರಕ್ತದ ಮಡುವಲ್ಲಿ ಬಿದ್ದು ಉಕ್ರೇನ್ ಜನರು ಪ್ರತಿಕ್ಷಣ ನರಳುವ ಸ್ಥಿತಿ ಅಲ್ಲಿದೆ. ಈ ಸಮಯದಲ್ಲೇ ರಷ್ಯಾ ಕಡೆಯಿಂದ ಪರಮಾಣು ಬಾಂಬ್ ಬಳಕೆ ಆಗುತ್ತಾ?

40 ಕ್ಷಿಪಣಿ & 580 ಡ್ರೋನ್ ದಾಳಿ
ಯುದ್ಧ.. ಯುದ್ಧ.. ಯುದ್ಧ.. ಹೀಗೆ ರಷ್ಯಾ & ಉಕ್ರೇನ್ ಬರೀ ಯುದ್ಧದ ಶೋಕಿಯಲ್ಲಿ ಒದ್ದಾಡ್ತಿವೆ. ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಏನು ಪ್ರಯತ್ನ ಮಾಡಿದರೂ ಪ್ರಯೋಜನಕ್ಕೇ ಬರುತ್ತಿಲ್ಲ. ರಷ್ಯಾ ಮತ್ತು ಉಕ್ರೇನ್ ಯುದ್ಧ ಜ್ವಾಲೆ ದಿನದಿಂದ ದಿನಕ್ಕೆ ಮತ್ತಷ್ಟು ಜೋರಾಗುತ್ತಾ ಇದ್ದು ಧಗಧಗಿಸುತ್ತಾ ಇದೆ. ಹೀಗೆ ರಷ್ಯಾ & ಉಕ್ರೇನ್ ಬಡಿದಾಡುತ್ತಿದ್ರೆ ಅಮೆರಿಕ ತನಗೆ ಏನು ಬೇಕು ಅದನ್ನ ಮಾತ್ರ ನೋಡಿಕೊಳ್ಳುತ್ತಿದೆ ಎಂಬ ಆರೋಪ ಕೂಡ ಈಗ ಕೇಳಿ ಬರುತ್ತಿದೆ.
ಹೀಗಿದ್ದಾಗಲೇ ರಷ್ಯಾ ಸೇನೆ ಕುಡ ಹಿಂದೆ & ಮುಂದೆ ಈ ಬಗ್ಗೆ ಚಿಂತೆಯನ್ನೇ ಮಾಡದೆ ಬಿಂದಾಸ್ ಆಗಿ 40 ಕ್ಷಿಪಣಿ ಹಾಗೂ 580 ಡೆಡ್ಲಿ ಡ್ರೋನ್ ಬಳಸಿ ಉಕ್ರೇನ್ ವಿರುದ್ಧ ಅಟ್ಯಾಕ್ ಮಾಡಿದೆ. ಇದು ಭಾರಿ ದೊಡ್ಡ ವಿನಾಶ ಸೃಷ್ಟಿಸುವ ಜೊತೆಗೆ ಅಮಾಯಕರ ಪ್ರಾಣದ ಜೊತೆಗೆ ಆಟವಾಡುತ್ತಿದ್ದಾರೆ ಎಂಬ ಆಕ್ರೋಶದ ಕಹಳೆ ಕೂಡ ಇದೀಗ ಮೊಳಗಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳು ವೈರಲ್ ಆಗುತ್ತಿವೆ.












Click it and Unblock the Notifications