ರಷ್ಯಾ ಎಸೆದ ಬಾಂಬ್‌ಗೆ ಥರ ಥರನೆ ನಡುಗಿ ಹೋದ ಉಕ್ರೇನ್

ರಷ್ಯಾ ಯುದ್ಧ ನಿಲ್ಲಿಸುವುದು ಬಿಡಿ ಉಕ್ರೇನ್ ನೆಮ್ಮದಿಯಾಗಿ ಬದುಕಲು ಕೂಡ ಬಿಡ್ತಿಲ್ಲ. ಅಲ್ಲಿ ನಡೆಯುತ್ತಿರುವ ದಾಳಿ ಅಕ್ಷರಶಃ ಮತ್ತೊಮ್ಮೆ ಮಹಾಯುದ್ಧ ನೆನಪಿಸುವಂತೆ ಮಾಡುತ್ತಿದೆ. ಅದರಲ್ಲೂ ಅಮೆರಿಕ ಜೊತೆ ಸ್ನೇಹ ಮಾಡಿದ ತಪ್ಪಿಗೆ ಈಗ ಉಕ್ರೇನ್‌ಗೆ ಭಾರಿ ಶಾಕ್ ಕೊಟ್ಟು ನಲುಗುವಂತೆ ಮಾಡಿದೆ ರಷ್ಯಾ. ಇದೀಗ ಮತ್ತೊಮ್ಮೆ ತನ್ನ ಅತ್ಯಾಧುನಿಕ ಹತ್ಯಾರ ಬಳಸಿ, ಉಕ್ರೇನ್ ನೆಲ ಉಡೀಸ್ ಮಾಡಿದೆ ರಷ್ಯಾ.

ಹೌದು, ರಷ್ಯಾ ಸೇನೆ ಉಕ್ರೇನ್‌ನ ವಿವಿಧ ಪ್ರದೇಶದ ಮೇಲೆ ಹೈಪರ್‌ಸಾನಿಕ್‌ & ಕ್ರೂಸ್‌ ಕ್ಷಿಪಣಿ ಮೂಲಕ ಡೆಡ್ಲಿ ಅಟ್ಯಾಕ್ ಮಾಡಿದೆ. ಇದರ ಪರಿಣಾಮ ನಾಲ್ವರು ಮೃತಪಟ್ಟು, ಸುಮಾರು 30 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಉಕ್ರೇನ್ ಕೇಂದ್ರ, ಪೂರ್ವ & ಪಶ್ಚಿಮ ಭಾಗದಲ್ಲಿ ಯುದ್ಧದ ಮುಂಚೂಣಿ ನೆಲೆಗಳ ಸಮೀಪ ರಷ್ಯಾ ಈಗ ಕ್ಷಿಪಣಿ ದಾಳಿ ಮಾಡಿದೆ. ಹಾಗಾದರೆ ರಷ್ಯಾ ಯಾವ ಯಾವ ಜಾಗಗಳನ್ನ ಟಾರ್ಗೆಟ್ ಮಾಡಿ ಹೀಗೆ ಅಟ್ಯಾಕ್ ಮಾಡ್ತಿದೆ ಗೊತ್ತಾ?

Russia Continued Deadly Attack On Ukraines Main Cities

131 ಬಾರಿ ಶೆಲ್‌ ದಾಳಿ?

ಅಂದಹಾಗೆ ಇದೀಗ ರಷ್ಯಾ ಸೇನೆಯು ಉಕ್ರೇನ್‌ನ ವಸತಿ ಪ್ರದೇಶ & ಶಾಪಿಂಗ್ ಮಾಲ್ ಸೇರಿ, ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿದೆ. ನಿಪ್ರೊಪೆಟ್ರೊವ್‌ಸ್ಕ್‌ ಪ್ರದೇಶದ ಕ್ರಿವಿ ರಿಹ್‌ ಸಿಟಿ ಹೊರಗೆ ಕ್ಷಿಪಣಿ ದಾಳಿಯಿಂದ ಮಹಿಳೆ ಸತ್ತಿದ್ದಾರೆ. ಹಾಗೂ ನೊವೊಮೊಸ್ಕೋವ್‌ಸ್ಕ್‌ ಪಟ್ಟಣದ ಮೇಲೆ ಕ್ಷಿಪಣಿ ಅಪ್ಪಳಿಸಿ 24 ಜನ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಆರೋಪ ಮಾಡುತ್ತಿದೆ. ಅದರಲ್ಲೂ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ತವರು ಪಟ್ಟಣ ಈಗ ನರಕವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಕೆರ್ಸಾನ್‌ ಪ್ರದೇಶ ಒಂದರ ಮೇಲೆಯೇ, ರಷ್ಯಾದ ಸೈನಿಕರು 131 ಬಾರಿ ಶೆಲ್‌ ದಾಳಿ ನಡೆಸಿದ್ದಾರೆ ಎಂದಿದೆ ಉಕ್ರೇನ್.

ಯುದ್ಧಕ್ಕೆ ಇನ್ನೇನು ತುಂಬುತ್ತೆ 2 ವರ್ಷ

ಇನ್ನು 2022ರಲ್ಲಿ ಶುರುವಾಗಿದ್ದ ರಷ್ಯಾ & ಉಕ್ರೇನ್ ಯುದ್ಧ ಇಲ್ಲಿಗೆ ಬಹುತೇಕ 23 ತಿಂಗಳ ಕಿತ್ತಾಟ ಮುಗಿಸಿದೆ. ಹೀಗೆ ಈ 23 ತಿಂಗಳ ಬಡಿದಾಟದಲ್ಲಿ, ಕಳೆದ ಬಾರಿಯ ಚಳಿಗಾಲದಲ್ಲಿ ಉಕ್ರೇನ್‌ನ ವಿದ್ಯುತ್‌ ಗ್ರಿಡ್ ಗುರಿಯಾಗಿಸಿಕೊಂಡು ರಷ್ಯಾ ದಾಳಿ ಮಾಡಿತ್ತು ಎಂಬ ಆರೋಪ ಇತ್ತು. ಹಾಗೇ ಇದೀಗ ರಷ್ಯಾ, ಉಕ್ರೇನ್‌ನಲ್ಲಿ ಇರುವ ರಕ್ಷಣಾ ಉದ್ಯಮಗಳನ್ನ ಗುರಿಯಾಗಿಸಿ ದಾಳಿ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಹೀಗೆ ರಷ್ಯಾದ ಕ್ಷಿಪಣಿಗಳು, ಪದೇ ಪದೇ ನಾಗರಿಕ ಪ್ರದೇಶಕ್ಕೆ ಬಂದು ಬಡಿಯುತ್ತಿರುವ ಕಾರಣ ಜನರು ತತ್ತರಿಸಿದ್ದಾರೆಂದು ಉಕ್ರೇನ್ ಆರೋಪ ಮಾಡಿದೆ.

Russia Continued Deadly Attack On Ukraines Main Cities

ಒಟ್ನಲ್ಲಿ ಈ ಯುದ್ಧ ಇನ್ನೆಷ್ಟು ವಿನಾಶ ಸೃಷ್ಟಿ ಮಾಡುತ್ತೋ ಅಂತಾ ಕಾದು ನೋಡಬೇಕು. ಯಾಕಂದ್ರೆ ಒಂದು ಕಡೆ ಉಕ್ರೇನ್ ಜನರು ಚಳಿಯಿಂದ ನರಳುತ್ತಿರುವಾಗ, ಇನ್ನೊಂದು ಕಡೆ ರಷ್ಯಾ ಕೂಡ ತನ್ನ ದಾಳಿ ಮತ್ತಷ್ಟು ಭೀಕರಗೊಳಿಸಿದೆ. ಹೀಗಾಗಿ ಪರಿಸ್ಥಿತಿ ಕೈಮೀರುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ವಿನಾಶ ಸೃಷ್ಟಿಯಾಗುವ ಭಯ ಆವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+