ಸಂಯಮ ಕಾಯ್ದುಕೊಳ್ಳಿ: ಭಾರತ-ಪಾಕ್‌ಗೆ ರಷ್ಯಾ ಸಂದೇಶ
ಮಾಸ್ಕೋ, ಫೆಬ್ರವರಿ 27: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ ಆಗಿರುವುದಕ್ಕೆ ಆತಂಕ ವ್ಯಕ್ತಪಡಿಸಿರುವ ರಷ್ಯಾ ಎರಡೂ ದೇಶ ಸಂಯಮ ಕಾಯ್ದುಕೊಳ್ಳಬೇಕು ಎಂದು ಸಂದೇಶ ನೀಡಿದೆ.
ನೆರೆ ದೇಶಗಳಾದ ಭಾರತ ಮತ್ತು ಪಾಕಿಸ್ತಾನದ ನಡುವೆ ಹದಗೆಡುವುತ್ತಿರುವ ಸಂಬಂಧಗಳ ಬಗ್ಗೆ ರಷ್ಯಾ ದೇಶವು ಆತಂಕ ವ್ಯಕ್ತಪಡಿಸಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟೀನ್ ಅವರ ಪತ್ರಿಕಾ ಕಾರ್ಯದರ್ಶಿ ಮಿಟ್ರಿ ಪೆಸ್ಕೋವ್ ಅವರು ಹೇಳಿಕೆಯನ್ನು ನೀಡಿದ್ದು, ಭಾರತ-ಪಾಕ್ ಗಡಿಯಲ್ಲಿನ ಉದ್ವಿಗ್ನತೆಗೆ ಆತಂಕ ವ್ಯಕ್ತಪಡಿಸಿದ್ದಾರೆ.

ರಷ್ಯಾ ದೇಶವು ಭಾರತ ಮತ್ತು ಪಾಕಿಸ್ತಾನದ ಜೊತೆ ಉತ್ತಮ ಬಾಂಧವ್ಯ ಹೊಂದಿದೆ. ಭಯೋತ್ಪಾದನೆ ವಿರುದ್ಧ ರಷ್ಯಾವು ತನ್ನ ಕಠಿಣ ನಿಲುವುಗಳನ್ನು ತಳೆದಿದೆ. ಭಯೋತ್ಪಾದನೆ ವಿರುದ್ಧ ಹೊರಾಟದಲ್ಲಿ ರಷ್ಯಾವು ಭಾರತಕ್ಕೆ ಬೆಂಬಲ ನೀಡುವ ಭರವಸೆಯನ್ನು ಈ ಹಿಂದೆ ನೀಡಿತ್ತು.












Click it and Unblock the Notifications