Get Updates
Get notified of breaking news, exclusive insights, and must-see stories!

ಮೆಟ್ರೋ ನಿಲ್ದಾಣದಲ್ಲಿ ವೇಗವಾಗಿ ಚಲಿಸಿದ ಎಸ್ಕಲೇಟರ್: 20 ಮಂದಿಗೆ ಗಾಯ

ರೋಮ್ (ಇಟಲಿ), ಅಕ್ಟೋಬರ್ 24: ರೋಮ್‌ನ ಮೆಟ್ರೋ ನಿಲ್ದಾಣವೊಂದರಲ್ಲಿ ಎಸ್ಕಲೇಟರ್‌ನಲ್ಲಿ ತಾಂತ್ರಿಕ ದೋಷ ಸಂಭವಿಸಿ ಉಂಟಾದ ಅವಘಡದಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ರಷ್ಯಾದ ಫುಟ್ಬಾಲ್ ಅಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಎಸ್ಕಲೇಟರ್, ಇದ್ದಕ್ಕಿದ್ದಂತೆ ವೇಗವಾಗಿ ಚಲಿಸಲು ಆರಂಭಿಸಿತು. ಇದರಿಂದ ಗಾಬರಿಗೊಂಡ ಜನರು ನಿಯಂತ್ರಣ ತಪ್ಪಿ ಉರುಳಿದರು. ಕೆಲವರು ಒಬ್ಬರ ಮೇಲೊಬ್ಬರು ಬಿದ್ದರು. ಕಿರುಚಾಟ ತಳ್ಳಾಟದ ನಡುವೆ ಒಬ್ಬರ ಕಾಲಿಗೆ ತೀವ್ರ ಪೆಟ್ಟಾಗಿದೆ.

ಈ ಘಟನೆಯು ವಿಡಿಯೋದಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

rome escalator collapsed russian football fans injured

ಪ್ರತ್ಯಕ್ಷದರ್ಶಿಗಳ ಪ್ರಕಾರ ಮದ್ಯಪಾನ ಮಾಡಿದಂತೆ ಕಾಣಿಸುತ್ತಿದ್ದ ಫುಟ್ಬಾಲ್ ಅಭಿಮಾನಿಗಳು ಎಸ್ಕಲೇಟರ್ ಮೇಲೆ ಕುಣಿಯುತ್ತಾ ಹಾರುತ್ತಿದ್ದರು. ಕೆಲಹೊತ್ತಿನಲ್ಲಿಯೇ ಎಸ್ಕಲೇಟರ್ ಕುಸಿಯಿತು. ಆದರೆ, ತಾವು ಆ ರೀತಿ ಮಾಡಿರಲಿಲ್ಲ ಎಂದು ಗಾಯಾಳುಗಳು ಹೇಳಿದ್ದಾರೆ.

ಇಟಲಿಯ ರೋಮಾ ಮತ್ತು ರಷ್ಯಾದ ಸಿಎಸ್‌ಕೆಎ ಮಾಸ್ಕೋ ಕ್ಲಬ್ ತಂಡಗಳ ನಡುವೆ ಚಾಂಪಿಯನ್ಸ್ ಲೀಗ್ ಆರಂಭವಾಗುವ ಒಂದು ಗಂಟೆ ಮುಂಚೆಯಷ್ಟೇ ಈ ಘಟನೆ ನಡೆದಿದೆ. ಸ್ಟೇಡಿಯಂಗೆ ಸಂಪರ್ಕ ಕಲ್ಪಿಸುವ ಮಾರ್ಗದ ಮೆಟ್ರೋವನ್ನು ಏರಲು ಈ ಅಭಿಮಾನಿಗಳ ತಂಡ ಹೊರಟಿತ್ತು.

ರಷ್ಯಾದ ಸುಮಾರು 1,500 ಬೆಂಬಲಿಗರು ಪಂದ್ಯವನ್ನು ವೀಕ್ಷಿಸಲು ಬರುತ್ತಿದ್ದು, ಅದರಲ್ಲಿ ಅನೇಕ ಪುಂಡರೂ ಇದ್ದಾರೆ ಎಂಬ ಕಾರಣಕ್ಕೆ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.

ರಷ್ಯಾದ ಒಬ್ಬ ಬೆಂಬಲಿಗನನ್ನು ವಿಮಾನ ನಿಲ್ದಾಣದಲ್ಲಿಯೇ ತಡೆಯಲಾಗಿತ್ತು. ಆದರೆ, ಈ ಭದ್ರತಾ ಕಾರ್ಯಗಳು ಹೊಡೆದಾಟವನ್ನು ತಡೆಯುವಲ್ಲಿ ವಿಫಲವಾಗಿವೆ ಎಂದು ಇಟಲಿಯ ಮಾಧ್ಯಮಗಳು ವರದಿ ಮಾಡಿವೆ. ಪಂದ್ಯದ ವೇಳೆ ಅಭಿಮಾನಿಗಳ ನಡುವೆ ನಡೆದ ಕಾದಾಟದಲ್ಲಿ ರಷ್ಯಾದ ಅಭಿಮಾನಿಯೊಬ್ಬನಿಗೆ ಚಾಕು ಇರಿಯಲಾಗಿದೆ. ಇನ್ನಿಬ್ಬರಿಗೆ ಕೂಡ ಹೊಡೆತಗಳು ಬಿದ್ದಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+